ಉಜಿರೆ : ಜುಲೈ 17ರಂದು ರಾಜ ಕೇಸರಿ ಸೇವಾ ಟ್ರಸ್ಟ್ (ರಿ.) ಬೆಳ್ತಂಗಡಿ ವತಿಯಿಂದ ದೊಂಪದಪಲ್ಕೆ ಶಾಲಾ 55 ವಿದ್ಯಾರ್ಥಿಗಳಿಗೆ ಕೊಡೆ ವಿತರಣೆ

ಉಜಿರೆ, ಜು. 15​ : ರಾಜ ಕೇಸರಿ ಸೇವಾ ಟ್ರಸ್ಟ್ (ರಿ.) ಬೆಳ್ತಂಗಡಿ ತಾಲೂಕು ಇದರ ವತಿಯಿಂದ ರಾಜ ಕೇಸರಿ ಸೇವಾ ಟ್ರಸ್ಟ್ (ರಿ.) ಕರ್ನಾಟಕ ಇದರ ಸಂಸ್ಥಾಪಕರಾದ ದೀಪಕ್ ಜಿ. ಬೆಳ್ತಂಗಡಿ ಇವರ ನೇತೃತ್ವದಲ್ಲಿ 587ನೇ ಸೇವಾ ಯೋಜನೆಯಂಗವಾಗಿ ಉಜಿರೆ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ದೊಂಪದಪಲ್ಕೆಯ 55 ವಿದ್ಯಾರ್ಥಿಗಳಿಗೆ ಜುಲೈ 17ರಂದು ಕೊಡೆ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಶ್ರೀ ದೀಪಕ್ ಜೀ. ಯವರು ತಿಳಿಸಿದ್ದಾರೆ.

Advertisement

ಜುಲೈ 17ರಂದು ಬೆಳಿಗ್ಗೆ 11.00ಗಂಟೆಗೆ ಶಾಲೆಯ 55 ವಿದ್ಯಾರ್ಥಿಗಳಿಗೆ ರಾಜ ಕೇಸರಿ ಸೇವಾ ಟ್ರಸ್ಟ್ (ರಿ.) ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಕೊಡೆ ವಿತರಣೆಯು ನಡೆಯಲಿದೆ. ಇನ್ನು, ಈ ಕಾರ್ಯಕ್ರಮಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಉಪನಿರೀಕ್ಷರಾದ ಶ್ರೀ ಕಿಶೋರ್ ಪಿ. ಯವರು ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ.

ನೊಂದವರ ಆಶಾ ಕಿರಣ

ರಾಜ ಕೇಸರಿ ಸೇವಾ ಟ್ರಸ್ಟ್ (ರಿ.) ಕರ್ನಾಟಕ ಇದರ ಸಂಸ್ಥಾಪಕರಾದ ದೀಪಕ್ ಜಿ. ಬೆಳ್ತಂಗಡಿ ಇವರ ನೇತೃತ್ವದಲ್ಲಿ 586 ಸೇವಾ ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿದೆ. ಕೆಲ ದಿನಗಳ ಹಿಂದೆಯಷ್ಟೇ 586ನೇ ಸೇವಾ ಯೋಜನೆಯಾಗಿ ಸುಮಾರು 350 ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಬ್ಯಾಗ್ ವಿತರಿಸುವ ಮೂಲಕ ವಿದ್ಯಾರ್ಥಿಗಳ ಬದುಕಿಗೆ ಆಶಾಕಿರಣವಾಗಿತ್ತು ಸಂಸ್ಥೆ. ರಾಜ ಕೇಸರಿ ಸೇವಾ ಟ್ರಸ್ಟ್ (ರಿ.) ಕರ್ನಾಟಕ ಸಂಸ್ಥೆಯು ಈಗಾಗಲೇ 2 ಕೋಟಿಗಿಂತಲೂ ಅಧಿಕ ಮೊತ್ತದ ಸೇವಾಚಟುವಟಿಕೆಯನ್ನು ನಡೆಸಿದೆ. ಕಡುಬಡವರಿಗಾಗಿ ಒಟ್ಟು 34 ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಇಡೀ ಜಗತ್ತೇ ಭಯದಲ್ಲಿ ತತ್ತರಿಸಿ ಹೋಗಿದ್ದ ಕೊರೊನಾ ಸಮಯದಲ್ಲಿ ಬರೋಬ್ಬರಿ 7 ಲಕ್ಷ 32 ಸಾವಿರ ರೂಪಾಯಿಯ ವಿಶೇಷ ಯೋಜನೆಗಳನ್ನು ರೂಪಿಸಿ, ಸಂಕಷ್ಟದಲ್ಲಿದ್ದವರ ಕೈ ಹಿಡಿದಿದೆ. 641 ಆಹಾರ ಕಿಟ್ ಗಳನ್ನು ಬಡವರಿಗೆ ವಿತರಿಸಿದ ಈ ಸಂಸ್ಥೆ, ರೋಗಿಗಳಿಗೆ ಉಚಿತ ವಾಹನ ವ್ಯವಸ್ಥೆ, ಕೊರೊನಾ ಕಾಯಿಲೆಯಿಂದ ಮೃತಪಟ್ಟ 85ಕ್ಕೂ ಹೆಚ್ಚು ವ್ಯಕ್ತಿಗಳ ಶವ ಸಂಸ್ಕಾರ ಮಾಡುವ ಮೂಲಕ ಮಾನವೀಯ ಧರ್ಮವನ್ನು ಎತ್ತಿಹಿಡಿದಿದೆ.

ಎಂಡೋಸಲ್ಫನ್ ಮತ್ತು ಅಂಗವಿಕಲ ವ್ಯಕ್ತಿಗಳಿಗೆ 85 ವೀಲ್ಚೇರ್ ವಿತರಿಸಿ ಬೆನ್ನೆಲುಬಾಗಿ ನಿಂತರೆ, 21 ಟೈಲರಿಂಗ್ ಮಿಷನ್ ಹಸ್ತಾಂತರಿಸಿ ಮಹಿಳಾ ಸಬಲೀಕರಣಕ್ಕಾಗಿ ಮುನ್ನುಡಿ ಬರೆದಿದೆ ಈ ಸಂಸ್ಥೆ.. 2021 ನವೆಂಬರ್ 28ರಂದು ಬೃಹತ್ ನೇತ್ರತಪಾಸಣಾ ಶಿಬಿರದಲ್ಲಿ ರಾಜಕೇಸರಿ ವತಿಯಿಂದ ರಾಜ್ಯಕ್ಕೆ ಪ್ರಥಮ ದಾಖಲೆಯ 543 ನೇತ್ರ ನೋಂದಾವಣಿ ಮಾಡಿದ್ದಲ್ಲದೆ, ತುರ್ತು ಸಂದರ್ಭದಲ್ಲಿ ಯುವಕರಿಂದ 14698 ರಕ್ತದಾನ ಮಾಡುವ ಮೂಲಕ ಜೀವ ರಕ್ಷಣೆಯ ಕಾರ್ಯದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದೆ. ರಾಜಕೇಸರಿ ಸಂಘಟನೆಯ ಸಂಸ್ಥಾಪಕರಾದ ಶ್ರೀ ದೀಪಕ್ ಜೀ’ಯವರು ಸತತವಾಗಿ 37ಬಾರಿ ರಕ್ತದಾನ ಮಾಡುವ ಮೂಲಕ ಮಾನವೀಯತೆಗೊಂದು ಹೊಸ ಭಾಷ್ಯ ಬರೆದಿದ್ದಾರೆ.

ಅನಾಥಾಶ್ರಮಗಳಿಗೆ ನೆರವು, ಉಚಿತ ಆರೋಗ್ಯ ಶಿಬಿರ, ಕ್ರೀಡೆ, ಕಲೆ, ಸಂಸ್ಕೃತಿಗೆ ಫ್ರೋತ್ಸಾಹ ನೀಡುತ್ತಾ ಬಂದಿದೆ. ಅಲ್ಲದೆ, “ಭವತಿ ಭಿಕ್ಷಾಂ ದೇಹಿ” ಎಂಬಂತೆ ಅನಾರೋಗ್ಯ ಪೀಡಿತ ಮಕ್ಕಳಿಗಾಗಿ ಬಸ್ ನಿಲ್ದಾಣದಲ್ಲಿ ಚಂದಾ ಎತ್ತಿ ಧನ ಸಹಾಯ, ತುರ್ತು ಸಂದರ್ಭದಲ್ಲಿ ಆಶಕ್ತರ ನೆರವಿಗಾಗಿ ನೀರಿನ ಬಾಟಲ್ ಮಾರಿ ಆರ್ಥಿಕ ನೆರವು ನೀಡಿದೆ. 15ಕ್ಕೂ ಹೆಚ್ಚು ಸರಕಾರಿ ಶಾಲೆಗಳ ಶೌಚಾಲಯಗಳನ್ನು ಸ್ವಚ್ಛಾಲಯವನ್ನಾಗಿ ಪರಿವರ್ತನೆ ಮಾಡಿದೆ. ವರ್ಷದ 12ತಿಂಗಳೂ ಕೂಡಾ ನಿರಂತರವಾಗಿ ಸಮಾಜಸೇವೆಯನ್ನು ನಡೆಸುತ್ತಾ ಬಂದಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ  : ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

⚠️ Contents are protected on this website.