ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಅವರುನಟಿಸಿ, ನಿರ್ದೇಶನ ಮಾಡಿರುವ ‘ಜೈ’ ಸಿನಿಮಾಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನವೆಂಬರ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿರುವ ‘ಜೈ’ ಚಿತ್ರದ ಪ್ರೀಮಿಯರ್ ಶೋ ನೋಡಿದ ಪ್ರೇಕ್ಷಕರು ಬಹುಪರಾಕ್ ಎಂದಿದ್ದಾರೆ.
ರೂಪೇಶ್ ಶೆಟ್ಟಿ ಅಭಿನಯದ ‘ಜೈ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ತುಳು ಮತ್ತು ಕನ್ನಡದಲ್ಲಿ ಬಿಡುಗಡೆ ಆಗಲಿರುವ ಈ ಸಿನಿಮಾ ತೆರೆ ಕಾಣುವುದಕ್ಕೂ ಮೊದಲೇ ಭರ್ಜರಿ ಸದ್ದು ಮಾಡುತ್ತಿದೆ. ಜೈ’ ಚಿತ್ರದ ಅಂತಾರಾಷ್ಟ್ರೀಯ ಪ್ರೀಮಿಯರ್ ಶೋ ಅಕ್ಟೋಬರ್ 24ರಂದು ಮಸ್ಕತ್ ನಲ್ಲಿ ನಡೆಯಿತು. ಸಿನಿಮಾ ವೀಕ್ಷಿಸಿದ ಸಿನಿ ಪ್ರಿಯರು ಕಥೆ, ನಟನೆಯನ್ನು ಹಾಡಿ ಹೊಗಳಿದ್ದಾರೆ.
‘ಜೈ’ ಸಿನಿಮಾದ ಇಂಡಿಯನ್ ಪ್ರೀಮಿಯರ್ ಶೊ ಅಕ್ಟೋಬರ್ 26ರಂದು ಗೋವಾದಲ್ಲಿ ನಡೆಯಿತು. ವೀಕ್ಷಕರಿಂದ ‘ಜೈ’ ಸಿನಿಮಾಗೆ ಪ್ರಶಂಸೆ ಸಿಕ್ಕಿದೆ. ಅಲ್ಲದೆ, ಜೈ ಸಿನಿಮಾ ಸಿನಿಮಾ ರಂಗದಲ್ಲಿ ಒಂದು ಹೊಸ ಛಾಪನ್ನು ಮೂಡಿಸಲಿದೆ ಎಂದು ಪ್ರೀಮಿಯರ್ ಶೋ ವೀಕ್ಷಿಸಿದ ಬಳಿಕ ಸಿನಿ ಪ್ರಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಹು ನಿರೀಕ್ಷೆಯ ಜೈ ಸಿನಿಮಾ ನವೆಂಬರ್ 14ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರತಂಡ ಮಾಹಿತಿಯನ್ನು ನೀಡಿದೆ. ಕರಾವಳಿ ಮೂಲದ “ಜೈ” ಸಿನಿಮಾ, ಕನ್ನಡ ಬಾಕ್ಸಾಫೀಸ್ ನಲ್ಲಿ ದೊಡ್ಡ ಮಟ್ಟದ ಗೆಲುವಿನ ಕಹಳೆ ಊದುವ ನಿರೀಕ್ಷೆಯಂತು ಖಂಡಿತಾ ಇದೆ.
ಈ ಸಿನಿಮಾದಲ್ಲಿ ರೂಪೇಶ್ ಶೆಟ್ಟಿ ನಾಯಕ ನಟನಾಗಿ ನಟಿಸಿದರೆ, ಅದ್ವಿತಿ ಶೆಟ್ಟಿ ನಾಯಕಿಯಾಗಿ, ಸುನೀಲ್ ಶೆಟ್ಟಿ, ರಾಜ್ ದೀಪಕ್ ಶೆಟ್ಟಿ, ಅರವಿಂದ್ ಬೋಳಾರ್, ದೇವದಾಸ್ ಕಾಪಿಕಾಡ್ ಸೇರಿದಂತೆ ಖ್ಯಾತ ತಾರಾಂಗಣವೇ ನಟಿಸಿದ್ದಾರೆ. ಈಗಾಗಲೇ ಬಿಡುಗಡೆಗೊಂಡಿರುವ ಟೀಸರ್ ಸಿನಿ ಪ್ರಿಯರ ಹೃದಯ ಗೆದ್ದಿದೆ.

