ಬೆಂಗಳೂರು : ಅಧಿವೇಶನದಲ್ಲಿ ಕೋಲಾಹಲ – “ಲೇ RSS ಥೂ..” ಕಾಂಗ್ರೆಸ್ ಶಾಸಕನ ಮಾತಿಗೆ ವ್ಯಾಪಕ ಆಕ್ರೋಶ !

ಬೆಂಗಳೂರು, ಫೆ. 04 : ಜಂಟಿ ಅಧಿವೇಶನದ ಕೊನೆಯ ದಿನವೂ ವಿಧಾನಸಭೆಯಲ್ಲಿ ಭಾರಿ ಗದ್ದಲ ಕೋಲಾಹಲಕ್ಕೆ ಸಾಕ್ಷಿಯಾಯಿತು. ಅರಸೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಿವಲಿಂಗೇ ಗೌಡ’ರವರು ಮಾತಿನ ಭರದಲ್ಲಿ ಸದನದಲ್ಲಿದ್ದೇನೆ ಎಂಬುದನ್ನು ಮರೆತು ಮಾತನಾಡಿದಂತಿತ್ತು. ಸಭ್ಯತೆ ಮೀರಿ “ಅಪ್ಪ, ಹೆಂಡತಿ”ಯ ವಿಚಾರವನ್ನು ಪ್ರಸ್ತಾಪಿಸಿದ್ದು ತೀವ್ರ ವಿರೋಧಕ್ಕೆ ಕಾರಣವಾಗಿದೆ.

Advertisement

ವಿರೋಧ ಪಕ್ಷದ ಶಾಸಕರು, ಸದನದ ಬಾವಿಗಿಳಿದು ಪ್ರತಿಭಟನಾ ಘೋಷಣೆಗಳನ್ನು ಕೂಗುತ್ತಿದ್ದಂತೆ ವಿಚಲಿತರಾದ ಶಾಸಕರಾದ ಶಿವಲಿಂಗೇ ಗೌಡ’ರವರು, “ಲೇ ಆರ್ ಎಸ್ ಎಸ್ ಥೂ ನಿಮ್ಮ ಯೋಗ್ಯತೆಗೆ”, “ನಿಮ್ಮ ಅಪ್ಪನಿಗೆ ಹಾಕಿದ್ದೆ ಚೂರಿನಾ”, “ನಿನ್ನ ಅಜ್ಜ”, “ನಿನ್ನ ಹೆಂಡತಿ ಹಣ ಮಾಡಿದ್ದು” ಎಂಬ ಮಾತುಗಳನ್ನು ಸದನದಲ್ಲೇ ಹೇಳುತ್ತಿದ್ದರೂ ಸಭಾಧ್ಯಕ್ಷರಾದ ಯು ಟಿ ಖಾದರ್ ಅವರು ನಗುತ್ತಾ ಕೂತಿದ್ದು, ವೀಡಿಯೋದಲ್ಲಿ ಕಾಣಬಹುದಾಗಿದೆ. ಸಭಾಪತಿಗಳು ಇಂತಹ ಮಾತುಗಳನ್ನು ಹೇಳುವಾಗ ಶಾಸಕರನ್ನು ತಡೆಯುವ ಪ್ರಯತ್ನ ಯಾಕೆ ಮಾಡಲಿಲ್ಲ ಪ್ರಶ್ನೆಗಳು ಕೂಡಾ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಶಿವಲಿಂಗೇ ಗೌಡರವರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಗಳು ಕೇಳಿ ಬರುತ್ತಿದೆ.

ಸದನದಲ್ಲಿ ನಡೆದ ಮಾತಿನ ಚಕಮಕಿಯ ಸಂಪೂರ್ಣ ವೀಡಿಯೋ ಇಲ್ಲಿದೆ :-

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಹುಷಾರ್‌ – ಆರೋಗ್ಯ ಇಲಾಖೆ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಉಜಿರೆ : ಮಾರ್ಚ್ 3ರಿಂದ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನಬ್ರಹ್ಮರಥ, ಪುಷ್ಪರಥ ಸಮರ್ಪಣೆ – ಶ್ರೀ ಶರತ್ ಕೃಷ್ಣಪಡ್ವೆಟ್ನಾಯ

⚠️ Contents are protected on this website.