ಬಂಟ್ವಾಳ : ಸಜೀಪ ದಸರಾ – 100ನೇ ವರ್ಷದ ಶ್ರೀ ಶಾರದಾ ಪೂಜಾ ಸಮಿತಿಯ ನೂತನ ಅಧ್ಯಕ್ಷರಾಗಿ ಶ್ರೀ ದೇವಿ ಪ್ರಸಾದ್ ಪೂಂಜ ಆಯ್ಕೆ

ಸಜೀಪ, ಡಿ. 23 : ಸಜೀಪ ದಸರಾ – 2026 ಶತಮಾನೋತ್ಸವಕ್ಕೆ ಈಗಿನಿಂದಲೇ ಸಿದ್ಧತೆಗಳು ನಡೆಯುತ್ತಿದೆ.100ನೇ ವರ್ಷ ಈ ಸುಂದರ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ಸಮಾಲೋಚನ ಸಭೆಗಳನ್ನು ನಡೆಸಲಾಗುತ್ತಿದೆ. ಶತಮಾನೋತ್ಸವ ಸಮಿತಿ, ಶಾರದಾ ಪೂಜಾ ಸಮಿತಿ ಹಾಗೂ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಯೋಚನೆಯನ್ನೂ ಮಾಡಲಾಗುತ್ತಿದೆ.

Advertisement

ಇನ್ನು 5ದಿನ ಶತಮಾನೋತ್ಸವನ್ನು ಆಚರಿಸುವ ಯೋಚನೆಗೆ ಬಂದಿದ್ದು ಈಗಾಗಲೇ ಸಮಿತಿಯನ್ನು ರಚಿಸಿ ಎಲ್ಲರಿಗೂ ಜವಬ್ದಾರಿಯನ್ನು ನೀಡಲಾಗಿದೆ. ಹಾಗೂ ಸಮಾಜಸೇವೆಯ ಮುಖೇನ ಮತ್ತು ವಿಭಿನ್ನ ಕಾರ್ಯಕ್ರಮಗಳನ್ನು ನಡೆಸುತ್ತಾ 100ನೇ ವರ್ಷದ ಸಜೀಪ ದಸರಾ ಕಾರ್ಯಕ್ರಮವನ್ನು ಇನ್ನಷ್ಟು ಚಂದಗಾಣಿಸುವ ಕೆಲಸ ಕಾರ್ಯಗಳು ನಡೆಯುತ್ತಿದೆ.

ಇನ್ನು ಶತಮಾನೋತ್ಸವದ,ಈ 100ನೇ ವರ್ಷದ ಶಾರದಾ ಪೂಜಾ ಸಮಿತಿಯ ನೂತನ ಅಧ್ಯಕ್ಷರಾಗಿ ಸಜೀಪಮೂಡ ಗ್ರಾ.ಪಂ ನ ಮಾಜಿ ಅಧ್ಯಕ್ಷರಾದ, ಪ್ರತೀ ಬಾರಿಯೂ ಕಾರ್ಯಕ್ರಮದ ಯಶಸ್ಸಿಗಾಗಿ ಜೊತೆಯಾಗಿ ನಿಲ್ಲುವ ಶ್ರೀ ದೇವಿ ಪ್ರಸಾದ್ ಪೂಂಜ ಆಯ್ಕೆಯಾಗಿದ್ದಾರೆ. ಹಾಗೂ ಮಹಿಳಾ ಸಮಿತಿಯ ಅಧ್ಯಕ್ಷರಾಗಿ ಪುಷ್ಪಾವತಿರಮೇಶ್ ಸುವರ್ಣ, ಉಪಾಧ್ಯಕ್ಷರಾಗಿ ಶ್ರೀ ಗಿರೀಶ್ ಕುಮಾರ್ ಪೆರ್ವ, ಶ್ರೀ ಅಶ್ವಿತ್ ಬೆಂಕ್ಯ ಮತ್ತು ಶ್ರೀ ಗಂಗಾಧರ ಕೊಲ್ಯ ಹಾಗೂ ಕಾರ್ಯದರ್ಶಿಗಳಾಗಿ ಶ್ರೀ ಪ್ರಹ್ಲಾದ್ ಬೆಂಕ್ಯ ಮತ್ತು ಶ್ರೀ ಕಿಶೋರ್ ಅಗರಿ,ಜತೆ ಕಾರ್ಯದರ್ಶಿಗಳಾಗಿ ಶ್ರೀ ಯೋಗೀಶ್ ವಿದ್ಯಾನಗರ ಮತ್ತು ಶ್ರೀ ಕಾರ್ತಿಕ್ ಶೆಟ್ಟಿ ಬೇಂಕ್ಯ ,ಕೋಶಾಧಿಕಾರಿಗಳಾಗಿ: ಶ್ರೀ ಕೀರ್ತನ್ ಆಳ್ವ ಮತ್ತು ಶ್ರೀ ಶ್ರೀನಾಥ್ ಅರಸ ಮಹಿಳಾ ಮಂಡಲದ ಉಪಾಧ್ಯಕ್ಷರಾಗಿ ಶ್ರೀಮತಿ ಮಮತಾ ಡಿ. ಶೆಟ್ಟಿ ಮತ್ತು ಶ್ರೀಮತಿ ಸುಜಾತಾ, ಕಾರ್ಯದರ್ಶಿ ಶ್ರೀಮತಿ ವಾಣಿ ಹರೀಶ್, ಜತೆ ಕಾರ್ಯದರ್ಶಿ ಶ್ರೀಮತಿ ಹರಿಣಾಕ್ಷಿ ಹಾಗೂ ಸುರೇಶ್, ಕೋಶಾಧಿಕಾರಿಯಾಗಿ ಶ್ರೀಮತಿ ಶಶಿಕಲಾ ಇವರುಗಳು ಆಯ್ಕೆಯಾಗಿದ್ದಾರೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಹುಷಾರ್‌ – ಆರೋಗ್ಯ ಇಲಾಖೆ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಉಜಿರೆ : ಮಾರ್ಚ್ 3ರಿಂದ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನಬ್ರಹ್ಮರಥ, ಪುಷ್ಪರಥ ಸಮರ್ಪಣೆ – ಶ್ರೀ ಶರತ್ ಕೃಷ್ಣಪಡ್ವೆಟ್ನಾಯ

⚠️ Contents are protected on this website.