ಸಜೀಪ : ಹೊಂಡ-ಗುಂಡಿಗಳಿಂದ ತುಂಬಿ ಸಂಚಾರಕ್ಕೆ ಅಯೋಗ್ಯವಾಗಿದ್ದ ಸಜೀಪ ರಸ್ತೆಯ ಬಗ್ಗೆ ಕೆಲವು ದಿನಗಳ ಹಿಂದೆ ಧ್ವನಿ ನ್ಯೂಸ್ ವರದಿ ಬಿತ್ತರಿಸಿತ್ತು. ಇದೀಗ ಧ್ವನಿ ನ್ಯೂಸ್ ವರದಿಗೆ ಫಲಶೃತಿ ಎಂಬಂತೆ ಸಜೀಪ ರಸ್ತೆಗೆ ತೇಪೆ ಕಾರ್ಯ ಆರಂಭವಾಗಿದೆ.

ಬಹುದೊಡ್ಡ ಗುಂಡಿಗಳಿಂದ ಕೂಡಿದ್ದ ರಸ್ತೆಗೆ ಕೊನೆಗೂ ದುರಸ್ತಿ ಭಾಗ್ಯ ಒದಗಿದ್ದು, ರಸ್ತೆಯಲ್ಲಿ ಕಂಡು ಬಂದಿದ್ದ ಬೃಹತ್ ಗುಂಡಿಗಳನ್ನು ಮುಚ್ಚಲಾಗಿದೆ. ಇದೀಗ ವಾಹನ ಸವಾರರು ನಿಶ್ಚಿಂತೆಯಿಂದ ಪ್ರಯಾಣಿಸಬಹುದಾಗಿದೆ. ಹೀಗೆಯೇ ತಾಲೂಕಿನ ಎಲ್ಲಾ ರಸ್ತೆಗಳು ಕೂಡಾ ಸಂಚಾರಕ್ಕೆ ಯೋಗ್ಯವಾಗಿರುವಂತೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಲಿ ಎಂಬುದೇ ನಮ್ಮ ಆಶಯ.

