ಬೆಳ್ತಂಗಡಿ : ಶಿರಸಿಯಲ್ಲಿ ನವೆಂಬರ್ 8 ಮತ್ತು 9ರಂದು ಇನ್ನರ್ ವೀಲ್ ಕ್ಲಬ್ ಆಯೋಜಿಸಿದ ಸಂಪ್ರೀತಿ ಕಾರ್ಯಕ್ರಮದಲ್ಲಿ, ಸೇವಾಧಾಮದಿಂದ ಪುನಶ್ಚೇತನಗೊಂಡ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ತಯಾರಿಸಿದ ವಿವಿಧ ಕರಕುಶಲ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಯನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ದಿವ್ಯಾಂಗರು ಸ್ವಯಂ ತಯಾರಿಸಿದ ಬತ್ತಿಕಟ್ಟು, ಹೂಗಳು, ಉಣ್ಣೆಯ ವಸ್ತುಗಳು, ಗೊಂಬೆಗಳು ಸೇರಿದಂತೆ ಹಲವು ವಿಧದ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಿದರು. ಈ ಮಳಿಗೆಯನ್ನು ಸೌಜನ್ಯ ತೆಲಂಗರವರ ನೇತೃತ್ವದಲ್ಲಿ, ಶ್ರೀ ಕೃಷ್ಣರವರ ಸಹಕಾರದೊಂದಿಗೆ ಪ್ರಥಮ ಬಾರಿಗೆ ಆಯೋಜಿಸಲಾಯಿತು. ಜನಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಮಳಿಗೆಯ ಸಂಪೂರ್ಣ ನಿರ್ವಹಣೆಯನ್ನು ದಿವ್ಯಾಂಗರೇ ಮಾಡಿರುವುದು ವಿಶೇಷ.
ಕಾರ್ಯಕ್ರಮದ ಕೊನೆಯಲ್ಲಿ ಸುಮಾರು ₹19,000/- ಮೌಲ್ಯದ ವ್ಯಾಪಾರ ನಡೆದಿದ್ದು, ಇದು ಕಾರ್ಯಕ್ರಮದ ಯಶಸ್ಸಿನ ಮತ್ತು ದಿವ್ಯಾಂಗರ ಆತ್ಮವಿಶ್ವಾಸದ ಸ್ಪಷ್ಟ ಉದಾಹರಣೆಯಾಗಿದೆ.

