ಕೇರಳ : ಮಕರಜ್ಯೋತಿ ಮಹೋತ್ಸವಕ್ಕೆ ಸಜ್ಜಾದ ಶಬರಿಮಲೆ ಅಯ್ಯಪ್ಪ ಸನ್ನಿಧಾನ

ಕೇರಳ, ಜ. 12 : ಮಕರಜ್ಯೋತಿ ಮಹೋತ್ಸವಕ್ಕೆ ಶಬರಿಮಲೆ ಅಯ್ಯಪ್ಪ ಸನ್ನಿಧಾನ ಸಜ್ಜುಗೊಂಡಿದೆ‌. ಮಕರ ಜ್ಯೋತಿಯಂದು ಶಬರೀಶನಿಗೆ ತೊಡಿಸಲಾಗುವ ತಿರುವಾಭರಣಗಳ ಮೆರವಣಿಗೆ ಜ.12ರಂದು ಮಧ್ಯಾಹ್ನ 1 ಗಂಟೆಗೆ ಪಂದಳಂ ವಲಿಯ ಕೋಯಿಕ್ಕಲ್ ಶ್ರೀ ಧರ್ಮಶಾಸ್ತ ದೇವಸ್ಥಾನದಿಂದ ಹೊರಡಲಿದೆ. ಜ.14ರಂದು ತಿರುವಾಭರಣ ಮೆರವಣಿಗೆ ಸನ್ನಿಧಾನ ತಲುಪಲಿದೆ. ಈ ಬಾರಿ ಪಂದಳಂ ಅರಮನೆಯ ರಾಜ ಪ್ರತಿನಿಧಿಯಾಗಿ ಪುನರ್ಧಂನಾಳ್ ನಾರಾಯಣ ವರ್ಮ ಮೆರವಣಿಗೆಯನ್ನು ಮುನ್ನಡೆಸುವರು. ಗುರು ಸ್ವಾಮಿ ಮರುದಮನ ಶಿವನಕುಟ್ಟಿ ನೇತೃತ್ವದಲ್ಲಿ 26 ಮಂದಿಯ ತಿರುವಾಭರಣ ವಾಹಕ ಸಂಘ ಮತ್ತು 4 ಮಂದಿ ಸಹಾಯಕರು ಸಹಿತ 30 ಸದಸ್ಯರ ತಂಡ ತಿರುವಾಭರಣ ಪೆಟ್ಟಿಗೆಯನ್ನು ಹೊತ್ತು ಶಬರಿಮಲೆಗೆ ತಲುಪಿಸುವರು.

Advertisement

ಗುರು ಸ್ವಾಮಿ ಅಜಯಕುಮಾರ್ ಮತ್ತು ಕುರುಪ್ಪ್ ಅನಿಲ್ ಕುಮಾರ್ ನೇತೃತ್ವದಲ್ಲಿ ಕತ್ತಿ ಮತ್ತು ಗುರಾಣಿಯೊಂದಿಗೆ 12 ಸದಸ್ಯರ ತಂಡ ರಾಜಪ್ರತಿನಿಧಿಯ ಪಲ್ಲಕ್ಕಿಯನ್ನು ಹೊತ್ತು ಸಾಗಿಸುವರು. ಮಕರಜ್ಯೋತಿ ದಿನ ಜ. 14ರಂದು ಸಂಜೆ 6:30ಕ್ಕೆ ಮೆರವಣಿಗೆ ಸನ್ನಿಧಾನ ತಲುಪಲಿದೆ. ಪ್ರಧಾನ ಪೆಟ್ಟಿಗೆಯನ್ನುಅಯ್ಯಪ್ಪ ದೇಗುಲ ಮತ್ತು ಉಳಿದ ಎರಡು ಪೆಟ್ಟಿಗೆಗಳನ್ನು ಮಣಿಮಂಟಪಕ್ಕೆ ತಲುಪಿಸಲಾಗುವುದು‌. ಅಯ್ಯಪ್ಪನಿಗೆ ಪ್ರಧಾನ ಪೆಟ್ಟಿಗೆಯಲ್ಲಿರುವ ತಿರುವಾಭರಣಗಳನ್ನು ತೊಡಿಸಿ ದೀಪಾರಾಧನೆ ಮಾಡಲಾಗುವುದು. ಮುಸ್ಸಂಜೆ ಆಗಸದಲ್ಲಿ ಮಕರಜ್ಯೋತಿ ನಕ್ಷತ್ರ (ಸಿರಿಯಸ್) ಗೋಚರಿಸಿದ ತಕ್ಷಣ ಪೊನ್ನಂಬಲ‌ಮೇಡ್ ನಲ್ಲಿ‌ ಮೂರು ಬಾರಿ ಮಕರ ಜ್ಯೋತಿ ಬೆಳಗಲಿದೆ. ಜ.18ರಂದು ಪಂದಳಂ ಅರಮನೆಯ ವತಿಯಿಂದ ಕಳಭಾಭಿಷೇಕ ಜ.19 ರಂದು ರಾಜಪ್ರತಿನಿಧಿಯ ಉಪಸ್ಥಿತಿಯಲ್ಲಿ ಗುರುತಿ ಪೂಜೆ ನಡೆಯಲಿದೆ. ಜ.19ರಂದು ರಾತ್ರಿ ದೇಗುಲ ಮುಚ್ಚುವವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶವಿದೆ. ಜ.20ರಂದು ಬೆಳಗ್ಗೆ 6ಕ್ಕೆ ರಾಜ ಪ್ರತಿನಿಧಿಯ ದರ್ಶನದ ಬಳಿಕ ದೇಗುಲ ಮುಚ್ಚಲಾಗುವುದು.

ಭಕ್ತರ ಸುರಕ್ಷತೆಯೆ ಭಾಗವಾಗಿ, ಅನುಮತಿಸಲಾದ ಜಾಗದಲ್ಲಿ ಮಾತ್ರ ಮಕರ ಜ್ಯೋತಿಯನ್ನು ವೀಕ್ಷಿಸಲು ಅವಕಾಶವಿದೆ. ಸನ್ನಿಧಾನ, ಪಾಂಡಿತಾವಳಂ, ಪುಲ್ಲುಮೇಡ್, ಅಟ್ಟತ್ತೋಡ್ ಮತ್ತು ಇಳವುಂಗಾಲ್ ಮೊದಲಾದ ಪ್ರದೇಶಗಳಲ್ಲಿ ಭಕ್ತರಿಗೆ ಜ್ಯೋತಿಯನ್ನು ವೀಕ್ಷಿಸಲು ಅವಕಾಶವಿದೆ.

ಕೇರಳ ಹೈಕೋರ್ಟ್ ಆದೇಶದಂತೆ, ಮಕರಜ್ಯೋತಿ ದರ್ಶನಕ್ಕೆ ಆಗಮಿಸುವ ಭಕ್ತರ ಮೇಲೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಭಕ್ತರ ಗುಂಪನ್ನು ನಿಯಂತ್ರಿಸಲು ಮತ್ತು ಸೌಲಭ್ಯಗಳನ್ನು ಒದಗಿಸಲು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ)ಮತ್ತು ನಾನಾ ಸರಕಾರಿ ಇಲಾಖೆಗಳು ವಿಸ್ತೃತ ವ್ಯವಸ್ಥೆಗಳನ್ನು ಮಾಡಿವೆ. ಜ.13ರಂದು ಆನ್ ಲೈನ್ ಬುಕ್ಕಿಂಗ್ ಮೂಲಕ 35 ಸಾವಿರ ಮತ್ತು ಸ್ಪಾಟ್ ಬುಕ್ಕಿಂಗ್ ಮೂಲಕ 5 ಸಾವಿರ ಭಕ್ತರಿಗೆ ಸನ್ನಿಧಾನ ಪ್ರವೇಶಿಸಲು ಅನುಮತಿ ನೀಡಿದರೆ ಸಾಕೆಂದು ನ್ಯಾಯಾಲಯ ಆದೇಶಿಸಿದೆ. ಭದ್ರತೆ ಹಾಗೂ ದಟ್ಟಣೆ ನಿಯಂತ್ರಣದ ಭಾಗವಾಗಿ ಈ ನಿರ್ಬಂಧ ಜಾರಿಗೊಳಿಸಲಾಗುವುದು‌. ಜ‌.೧೪ರ ಮಕರಜ್ಯೋತಿಯಂದು ಆನ್ ಲೈನ್ ಬುಕ್ಕಿಂಗ್ ಮೂಲಕ 30 ಸಾವಿರ ಹಾಗೂ ಸ್ಪಾಟ್ ಬುಕ್ಕಿಂಗ್ ಮೂಲಕ ಮತ್ತು 5 ಸಾವಿರ ಭಕ್ತರಿಗೆ ಸನ್ನಿಧಾನ ಪ್ರವೇಶಿಸಲು ಅವಕಾಶ ನೀಡಲಾಗುವುದು. ಜ.15ರಿಂದ 18ರವರೆಗೆ ಆನ್ ಲೈನ್ ಬುಕ್ಕಿಂಗ್ ಮೂಲಕ 50 ಸಾವಿರ, ಸ್ಪಾಟ್ ಬುಕ್ಕಿಂಗ್ ಮೂಲಕ 5 ಸಾವಿರ, ಜ.19ರಂದು, ಆನ್ ಲೈನ್ ಬುಕ್ಕಿಂಗ್ ಮೂಲಕ 30 ಸಾವಿರ, ಸ್ಪಾಟ್ ಬುಕ್ಕಿಂಗ್ ಮೂಲಕ 5 ಸಾವಿರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಸಚಿವ ಸ್ಥಾನಕ್ಕಾಗಿ ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ 31 ಶಾಸಕರಿಂದ ಪತ್ರ – ಕೈ ಪಾಳಯದಲ್ಲಿ “ಪತ್ರ ಸ್ಫೋಟ”

ಟಾಪ್ ಸುದ್ದಿಗಳು, ರಾಜ್ಯ / ದೇಶ

ತಮಿಳುನಾಡು : ಎಐಎಡಿಎಂಕೆ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 10,000 ರೂ. ಘೋಷಣೆ !

ವಿದೇಶ

ಅಮೆರಿಕದಲ್ಲಿ ಭಾರಿ ಹಿಮಪಾತ: 5,600 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು, ಶಾಲೆಗಳಿಗೆ ರಜೆ

⚠️ Contents are protected on this website.