ಭಾರತದ ಕೋಳಿ ಮಾಂಸ, ಮೊಟ್ಟೆ ಆಮದಿಗೆ ಸೌದಿ ಅರೇಬಿಯಾ ತಾತ್ಕಾಲಿಕ ನಿರ್ಬಂಧ

ರಿಯಾಧ್, ಫೆ. 26 : ಭಾರತ ಸೇರಿದಂತೆ 40 ದೇಶಗಳಿಂದ ಕೋಳಿ ಮಾಂಸ ಮತ್ತು ಮೊಟ್ಟೆ ಆಮದು ಮಾಡಿಕೊಳ್ಳುವುದನ್ನು ಸೌದಿ ಆಡಳಿತ ತಾತ್ಕಾಲಿಕವಾಗಿ ನಿಷೇಧಿಸಿದೆ. ಹಕ್ಕಿ ಜ್ವರ ಸೇರಿದಂತೆ ವಿವಿಧ ಪ್ರಾಣಿಜನ್ಯ ರೋಗಗಳ ಹರಡುವಿಕೆಯನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸೌದಿಯ ಆಹಾರ ಮತ್ತು ಔಷಧ ಪ್ರಾಧಿಕಾರವಾದ ಸೌದಿ ಅರೇಬಿಯಾದ ಆಹಾರ ಮತ್ತು ಔಷಧ ನಿಯಂತ್ರಣ ಸಂಸ್ಥೆ ಈ ಕುರಿತು ಅಧಿಕೃತ ಪ್ರಕಟಣೆ ನೀಡಿದೆ.

Advertisement

ಸ್ಥಳೀಯ ಮಾರುಕಟ್ಟೆಯಲ್ಲಿ ಆಹಾರ ಸುರಕ್ಷತೆ ಖಚಿತಪಡಿಸಿಕೊಳ್ಳುವುದು ಮತ್ತು ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ಭಾರತ ಸೇರಿದಂತೆ ಚೀನಾ, ಬಾಂಗ್ಲಾದೇಶ, ಇಂಡೋನೇಷ್ಯಾ, ಇರಾನ್, ಯುನೈಟೆಡ್ ಕಿಂಗ್ಡಮ್ ಸೇರಿದಂತೆ ಹಲವು ದೇಶಗಳಿಂದ ಪೂರೈಕೆಯಾಗುವ ಕೋಳಿ ಮಾಂಸ ಮತ್ತು ಮೊಟ್ಟೆಗಳಿಗೆ ಸೌದಿಯಲ್ಲಿ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ. ಜಾಗತಿಕವಾಗಿ ಹಕ್ಕಿ ಜ್ವರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 40 ದೇಶಗಳ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದ್ದು, ಅಮೆರಿಕ, ಆಸ್ಟ್ರೇಲಿಯಾ, ಫ್ರಾನ್ಸ್ ಸೇರಿದಂತೆ 16 ದೇಶಗಳ ಕೆಲವು ನಿರ್ದಿಷ್ಟ ಪ್ರದೇಶಗಳಿಂದ ಬರುವ ಉತ್ಪನ್ನಗಳಿಗೆ ಮಾತ್ರ ಭಾಗಶಃ ನಿರ್ಬಂಧ ಜಾರಿಯಾಗಿದೆ.

ಭಾರತದಿಂದ ಸೌದಿ ಅರೇಬಿಯಾಗೆ ಕೋಳಿ ಮಾಂಸ ಮತ್ತು ಮೊಟ್ಟೆಗಳ ರಫ್ತು ಪ್ರಮಾಣ ಹೆಚ್ಚು ಇಲ್ಲ. 2024ರಲ್ಲಿ ಡೈರಿ ಉತ್ಪನ್ನಗಳು, ಮೊಟ್ಟೆ, ಜೇನು ಸೇರಿದಂತೆ ವಿವಿಧ ಆಹಾರ ವಸ್ತುಗಳ ಒಟ್ಟು ರಫ್ತು ಮೌಲ್ಯ ಸುಮಾರು 64 ಮಿಲಿಯನ್ ಡಾಲರ್ (ಸುಮಾರು 500 ಕೋಟಿ ರೂ.) ಆಗಿದೆ. ಇದರಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆಗಳ ಪಾಲು ಇನ್ನೂ ಕಡಿಮೆ. ಹೀಗಾಗಿ ಸೌದಿಯ ಈ ನಿಷೇಧದಿಂದ ಭಾರತಕ್ಕೆ ಸೀಮಿತ ಮಟ್ಟದ ಆರ್ಥಿಕ ಪರಿಣಾಮ ಮಾತ್ರ ಎದುರಾಗುವ ಸಾಧ್ಯತೆ ಇದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಳಗಾವಿ : ಪರೀಕ್ಷೆ ಬರೆಯಲು ಮನೆಯಿಂದ ಹೊರಡುತ್ತಿದ್ದ ವೇಳೆ ಹೃದಯಾಘಾತದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಾವು

ತಾಲೂಕು, ಬೆಳ್ತಂಗಡಿ

ಕಲ್ಮಂಜ : ಗುಂಡ ಶ್ರೀ ಉಳ್ಳಾಯ-ಉಳ್ಳಾಲ್ತಿ ದೈವಸ್ಥಾನದಲ್ಲಿ ಬಾವಿ ನಿರ್ಮಾಣಕ್ಕೆ ಶಂಕು ಸ್ಥಾಪನೆ

ತಾಲೂಕು, ಬೆಳ್ತಂಗಡಿ

ಕಣಿಯೂರು : ಪಿಲಿಗೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಲೋಕಾರ್ಪಣೆ

⚠️ Contents are protected on this website.