ಅಖಿಲ ಭಾರತ ನಾಗರೀಕ ಸೇವಾ ಅಥ್ಲೆಟಿಕ್ಸ್ ನಲ್ಲಿ ಬೆಳ್ತಂಗಡಿ ಶಿಕ್ಷಕಿ ಸೌಮ್ಯಾ ಕೆ. ಅವರಿಗೆ ಕಂಚಿನ ಪದಕ

ಬೆಳ್ತಂಗಡಿ, ಡಿ. 22 : ಭಾರತ ಸರಕಾರವು ಕೇಂದ್ರ ಸರ್ಕಾರಿ ನೌಕರರು ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ವರ್ಷ ನಡೆಸಲ್ಪಡುವ ಅಖಿಲ ಭಾರತ ನಾಗರೀಕ ಸೇವಾ ಅಥ್ಲೆಟಿಕ್ಸ್ ಕ್ರೀಡಾಕೂಟದ 2025-26 ನೇ ಸಾಲಿನ ಸ್ಪರ್ಧೆಯಲ್ಲಿ ಪ್ರತಿನಿಧಿಸಿದ
ಬೆಳ್ತಂಗಡಿ ತಾಲೂಕು ಕಾಶಿಪಟ್ಣ ಸರ್ಕಾರಿ ಪ್ರೌಢ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕಿ ಸೌಮ್ಯಾ ಕೆ. ಅವರು ಕಂಚಿನ ಪದಕ ಗಳಿಸಿದ್ದಾರೆ.

Advertisement

ಬಿಹಾರದ ಪಾಟ್ನಾದಲ್ಲಿರುವ ಪಾಟಲಿಪುತ್ರ ಕ್ರೀಡಾಂಗಣದಲ್ಲಿ ಡಿಸೆಂಬರ್ 13 ರಿಂದ ಡಿಸೆಂಬರ್ 15 ವರೆಗೆ ನಡೆದ ಅಥ್ಲೆಟಿಕ್ ಸ್ಪರ್ಧೆಯಲ್ಲಿ ಸೌಮ್ಯಾ ಕೆ. ಅವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರು. ಈ ವೇಳೆ 400 ಮೀಟರ್ ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ ಅವರು ಕಂಚಿನ ಪದಕ ಪಡೆದಿದ್ದಾರೆ. ಈ ಬಾರಿ ಕರ್ನಾಟಕ ರಾಜ್ಯಕ್ಕೆ ದೊರೆತ ಆರು ಪದಕಗಳಲ್ಲಿ ದಕ್ಷಿಣ ಕನ್ನಡ ಪಡೆದ ಏಕೈಕ ಪದಕವಾಗಿದ್ದು, ಬೆಳ್ತಂಗಡಿ ತಾಲೂಕಿನಿಂದ ಸ್ಪರ್ಧಿಸಿ ಗೆಲುವು ಪಡೆದ ಮೊದಲ ದಾಖಲೆಯಾಗಿದೆ.

ಶಿಕ್ಷಕಿ ಸೌಮ್ಯಾ ಕೆ. ಅವರು ಇಂದಬೆಟ್ಟು ಇರ್ತಿಲಾಲು ನಿವಾಸಿ, ಸಹಕಾರಿ ಧುರೀಣ, ಬಂಗಾಡಿ ಸಿ.ಎ.ಬ್ಯಾಂಕ್ ಮಾಜಿ ಅಧ್ಯಕ್ಷ ಎನ್. ಲಕ್ಷ್ಮಣ ಗೌಡ ಅವರ ಪುತ್ರಿ. ಇವರು 2016 ರ ಬಳಿಕ ಕರ್ನಾಟಕ ರಾಜ್ಯ ವನ್ನು ಪ್ರತಿನಿಧಿಸಿದ್ದು, ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲವನ್ನು ಪ್ರತಿನಿದಿಸಿದ್ದರು.

ಅವರು ಈ ಹಿಂದೆ 2010 ರಲ್ಲಿ ಹರಿಯಾಣದ ಪಂಚಕುಲದಲ್ಲಿ ನಡೆದ ಕ್ರೀಡಾಕೂಟದಲ್ಲಿ 1ಚಿನ್ನ 2 ಕಂಚು, 2012 ಮಧ್ಯಪ್ರದೇಶದ ಭೂಪಾಲ್ ನಲ್ಲಿ 1 ಚಿನ್ನ, 1 ಬೆಳ್ಳಿ, 1 ಕಂಚು, 2013 ತಮಿಳುನಾಡಿನ ಚೆನ್ನೈನಲ್ಲಿ 2 ಕಂಚು, 2016 ಮಹಾರಾಷ್ಟ್ರ ದ ಪುಣೆಯಲ್ಲಿ ನಡೆದ ಸ್ಪರ್ಧೆಯಲ್ಲಿ 1 ಬೆಳ್ಳಿ ಪದಕ ಗಳಿಸಿದ್ದಾರೆ. ಈ ಮೂಲಕ 2010 ರಿಂದ 2016 ರವರೆಗೆ ಕರ್ನಾಟಕಕ್ಕೆ ಬಂದ 18 ಪದಕಗಳಲ್ಲಿ 9 ಪದಕ ಇವರ ಹೆಸರಲ್ಲಿದೆ ಎಂಬುದು ಹೆಮ್ಮೆಯ ವಿಚಾರ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಸಚಿವ ಸ್ಥಾನಕ್ಕಾಗಿ ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ 31 ಶಾಸಕರಿಂದ ಪತ್ರ – ಕೈ ಪಾಳಯದಲ್ಲಿ “ಪತ್ರ ಸ್ಫೋಟ”

ಟಾಪ್ ಸುದ್ದಿಗಳು, ರಾಜ್ಯ / ದೇಶ

ತಮಿಳುನಾಡು : ಎಐಎಡಿಎಂಕೆ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 10,000 ರೂ. ಘೋಷಣೆ !

ವಿದೇಶ

ಅಮೆರಿಕದಲ್ಲಿ ಭಾರಿ ಹಿಮಪಾತ: 5,600 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು, ಶಾಲೆಗಳಿಗೆ ರಜೆ

⚠️ Contents are protected on this website.