ಮಂಗಳೂರು : ಬೀದಿ ನಾಯಿಗಳು ದಾಳಿ ನಡೆಸಿದ ಪರಿಣಾಮ ಬಾಲಕನೋರ್ವ ಗಾಯಗೊಂಡ ಘಟನೆ ಗುರುವಾರಂದು ಬಜ್ಪೆ ಸಮೀಪದ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೌಹಾರ್ದ ನಗರದಲ್ಲಿ ನಡೆದಿದೆ. ಸೌಹಾರ್ದ ನಗರದ ನಿವಾಸಿ ಮುಹಮ್ಮದ್ ಅಝರ್ ಅವರ ಪುತ್ರ ಅಹಿಲ್ ಬೀದಿ ನಾಯಿಗೆ ದಾಳಿಗೊಳಗಾದ ಬಾಲಕನೆಂದು ಗುರುತಿಸಲಾಗಿದೆ.
ಅಹಿಲ್ ಮನೆಗೆ ಹಿಂದಿರುಗುತ್ತಿ ಸಂದರ್ಭದಲ್ಲಿ ಈ ಘಟನೆ ನಡೆದಿದ್ದೆನ್ನಲಾಗಿದೆ. ಬೀದಿ ನಾಯಿಗಳ ಗುಂಪು ದಿಢೀರನೇ ಬಾಲಕನನ್ನು ಸುತ್ತುವರಿದು ದಾಳಿ ಮಾಡಿದ್ದು, ಬಾಲಕನ ಕೆನ್ನೆ ಮತ್ತು ಕೈಗೆ ಗಂಭೀರ ಗಾಯಗಳಾಗಿದೆ.
ಬಾಲಕನ ಬೊಬ್ಬೆ ಕೇಳಿದ ತಾಯಿ ತಕ್ಷಣ ಮನೆಯಿಂದ ಹೊರಗೆ ಓಡಿ ಬಂದು ಮಗನನ್ನು ರಕ್ಷಿಸಿದ್ದಾರೆ. ತಕ್ಷಣವೇ ಬಾಲಕನನ್ನು ಬಜ್ಪೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಕಟೀಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

