ಮಣಿಪಾಲ : ಹೊರಗಡೆ ಊಟಮಾಡಿ ರೂಂ’ಗೆ ತೆರಳಿದ್ದ ವಿದ್ಯಾರ್ಥಿನಿಗೆ ಏಕಾಏಕಿ ಬೆನ್ನು ನೋವು – ಕೆಲವೇ ಕ್ಷಣದಲ್ಲಿ ಸಾವು

ಸಾಂಧರ್ಭಿಕ ಚಿತ್ರ
Advertisement

ಮಣಿಪಾಲ : ಹಠಾತ್ ಬೆನ್ನು ನೋವು ಕಾಣಿಸಿಕೊಂಡು ವಿದ್ಯಾರ್ಥಿನಿಯೋರ್ವಳು ಕೊನೆಯುಸಿರೆಳೆದಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ. ಒಡಿಶಾ ಮೂಲದ ಖಾಸಗಿ ಕಾಲೇಜಿನ ಎಂಜಿನಿರಿಂಗ್ ವಿದ್ಯಾರ್ಥಿನಿ ಆಕಾಂಕ್ಷಾ ಮೋಹಾಂತಿ (25) ಮೃತಪಟ್ಟವರು ಎಂದು ಗುರುತಿಸಲಾಗಿದೆ.

Advertisement

ನ. 29ರಂದು ರಾತ್ರಿ ವೇಳೆ ಮಣಿಪಾಲದ ಹೊಟೇಲೊಂದರಲ್ಲಿ ಊಟ ಮಾಡಿ ವಾಸ್ತವ್ಯದ ಕೊಠಡಿಗೆ ತೆರಳಿದ ಆಕೆಗೆ ಏಕಾಏಕಿ ಗಂಭೀರ ಸ್ವರೂಪದಲ್ಲಿ ಬೆನ್ನು ನೋವು ಕಾಣಿಸಿಕೊಂಡಿತು. ನಡೆದಾಡಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಸ್ನೇಹಿತರು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಯುವತಿ ಈಗಾಗಲೇ ಕೊನೆಯುಸಿರೆಳೆದಿರುವುದಾಗಿ ತಿಳಿಸಿದ್ದರು ಎನ್ನಲಾಗಿದೆ. ಇನ್ನು, ಈಕೆಯ ಸಾವಿಗೆ ಸ್ಪಷ್ಟ ಕಾರಣ ಏನು ಎಂದು ತಿಳಿದುಬಂದಿಲ್ಲ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ