ಬೆಳ್ತಂಗಡಿ : “ಸಾಲ್ಯಾನ್ ಎಲ್ ಇಡಿ, ಧ್ವನಿ ನ್ಯೂಸ್ ಮಾಲಕ ಸುದೀಪ್ ಸಾಲ್ಯಾನ್’ಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ ಗರಿಮೆ

ಬೆಳ್ತಂಗಡಿ, ಡಿ. 13 : ತಾಲೂಕು ಮಾತ್ರವಲ್ಲದೆ ಜಿಲ್ಲೆಯಾದ್ಯಂತ ಬಹಳಷ್ಟು ಖ್ಯಾತಿ ಪಡೆದಿರುವ “ಸಾಲ್ಯಾನ್ ಎಲ್ ಇಡಿ” ಇಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ ಪ್ರಮಾಣಪತ್ರವನ್ನು ತನ್ನದಾಗಿಸಿಕೊಂಡಿದೆ. ಮಂಗಳೂರಿನಲ್ಲಿ ನಡೆದ ದಿ| ಕಿಶೋರ್‌ಕುಮಾರ್‌ಹಾಡುಗಳ ಗಾಯನ ದಾಖಲೆ, 100 ಗಾಯಕರು, ನಿರಂತರ 40 ಗಂಟೆಗಳ ಕಾಲ ಕರೋಕೆ ಸ್ವರೂಪದ ಗಾಯನ ಸ್ಪರ್ಧೆಯಲ್ಲಿ ಸಾಲ್ಯಾನ್ ಎಲ್ ಇಡಿ ಮಾಲಕ ಸುದೀಪ್ ಅವರು ತಮ್ಮ ಎಲ್ ಇಡಿ ಪ್ರದರ್ಶನವನ್ನು ಮಾಡುವ ಮೂಲಕ ಈ ದಾಖಲೆಯ ಪಾಲು ಪಡೆದಿದ್ದಾರೆ. ಸುದೀಪ್ ಸಾಲ್ಯಾನ್ ರವರು ಧ್ವನಿ ನ್ಯೂಸ್ ಚಾನೆಲ್ ನ ಪ್ರಧಾನ ಸಂಪಾದಕರಾಗಿದ್ದಾರೆ.

Advertisement

ಮಂಗಳೂರು ಪುರಭವನದಲ್ಲಿ ನವೆಂಬರ್ 18 ಹಾಗೂ 19ರಂದು ನಡೆದ ಷೋಡಶಿ ಫೌಂಡೇಶನ್ ನೇತೃತ್ವದಲ್ಲಿ’ಗಾತಾ ರಹೇ ಮೇರಾ ದಿಲ್’ ಎಂಬ ಹೆಸರಿನಲ್ಲಿ ದಿ| ಕಿಶೋರ್ ಕುಮಾರ್ ಅವರು ಹಾಡಿದ ಹಾಡುಗಳನ್ನು ಬರೋಬ್ಬರಿ 100 ಗಾಯಕರು ನಿರಂತರ 40 ಗಂಟೆ ‘ಕರೋಕೆ’ ಸ್ವರೂಪದಲ್ಲಿ ಹಾಡುವ ಮೂಲಕ ವಿಶ್ವದಾಖಲೆಯ ಗೋಲ್ಡನ್ ಬುಕ್ ಆಫ್ ವರ್ಲ್ಡ್‌ನಲ್ಲಿ ಹೆಸರು ನಮೂದಿಸಿದ್ದಾರೆ. ಈ ವಿಶ್ವದಾಖಲೆಯಲ್ಲಿ ಸಾಲ್ಯಾನ್ ಎಲ್ ಇಡಿ ಉತ್ತಮವಾಗಿ ಕಾರ್ಯನಿರ್ವಹಿಸಿತ್ತು. ಇದೀಗ ಈ ಸಾಧನೆಗೆ ಸುದೀಪ್ ಸಾಲ್ಯಾನ್ ಅವರಿಗೆ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ವತಿಯಿಂದ ಪದಕ, ಸರ್ಟಿಫಿಕೇಟ್ ನೀಡಿ ಗೌರವಿಸಲಾಗಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಸಚಿವ ಸ್ಥಾನಕ್ಕಾಗಿ ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ 31 ಶಾಸಕರಿಂದ ಪತ್ರ – ಕೈ ಪಾಳಯದಲ್ಲಿ “ಪತ್ರ ಸ್ಫೋಟ”

ಟಾಪ್ ಸುದ್ದಿಗಳು, ರಾಜ್ಯ / ದೇಶ

ತಮಿಳುನಾಡು : ಎಐಎಡಿಎಂಕೆ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 10,000 ರೂ. ಘೋಷಣೆ !

ವಿದೇಶ

ಅಮೆರಿಕದಲ್ಲಿ ಭಾರಿ ಹಿಮಪಾತ: 5,600 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು, ಶಾಲೆಗಳಿಗೆ ರಜೆ

⚠️ Contents are protected on this website.