ರಾಜ್ಯದಲ್ಲಿ ಎರಡು ತಿಂಗಳಿನಿಂದ ಶಾಸನ ಇಲ್ಲದ ದುಶ್ಯಾಸನ ಆಡಳಿತ ನಡೆಯುತ್ತಿದೆ : ಸುನಿಲ್ ಕುಮಾರ್

Advertisement

ಉಡುಪಿ : ರಾಜ್ಯದಲ್ಲಿ ಆಡಳಿತಕ್ಕಿಂತ ಹೆಚ್ಚಾಗಿ ಕುರ್ಚಿ ಕದನ ನಡೆಯುತ್ತಿದ್ದು, ಶೇ. 90ರಷ್ಟು ಸಚಿವರು ವಿಧಾನಸೌಧಕ್ಕೆ ಬರುತ್ತಿಲ್ಲ. ಮುಖ್ಯಮಂತ್ರಿ ಮೈಸೂರಿಗೆ ಹಾಗೂ ಡಿಸಿಎಂ ಹೊಸದಿಲ್ಲಿಗೆ ಸೀಮಿತರಾಗಿದ್ದಾರೆ. ಇಡೀ ರಾಜ್ಯದಲ್ಲಿ ಎರಡು ತಿಂಗಳಿನಿಂದ ಶಾಸನ ಇಲ್ಲದ ದುಶ್ಯಾಸನ ಆಡಳಿತ ನಡೆಯುತ್ತಿದೆ ಎಂದು ಶಾಸಕ ವಿ.ಸುನಿಲ್ ಕುಮಾರ್‌ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Advertisement

ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಸಂಪೂರ್ಣವಾಗಿ ವಿಶ್ವಾಸ ಕಳೆದುಕೊಂಡಿರುವ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸಲಾಗುವುದು. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಬಗ್ಗೆ ಯಾವುದೇ ವಿಶ್ವಾಸವಿಲ್ಲ. ಸದನದಲ್ಲಿ ನಾವು ವಿಶ್ವಾಸ ಮತವನ್ನು ಯಾಚಿಸುತ್ತೇವೆ ಎಂದರು. ಬಿಜೆಪಿ ಯಾವುದೇ ಕಾರಣಕ್ಕೂ ಸರಕಾರ ರಚನೆ ಮಾಡಲು ಮುಂದಾಗಲ್ಲ. ಕಾಂಗ್ರೆಸ್ ತನ್ನ ಭಾರದಿಂದಲೇ ಕುಸಿದು ಬೀಳಲೆಂದು ಕಾದು ನೋಡುತ್ತಿದ್ದೇವೆ. ಉಪಮುಖ್ಯಮಂತ್ರಿಗಳ ಜತೆ 140 ಜನ ಎಲ್ಲಿದ್ದಾರೆ? ರಾಹುಲ್ ಗಾಂಧಿ ಹಾಗೂ ಸಿಎಂ ಅವರ ಜತೆಯಲ್ಲಿಯೂ ಯಾರೂ ಇಲ್ಲ ಎಂದರು.

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ