ಹಳೆಕೋಟೆ : ನಗರದ ಹಳೆಕೋಟೆಯಲ್ಲಿ ಭಾನುವಾರ ರಾತ್ರಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ ಸ್ವಸ್ತಿಕ್ ಆಟೋ ಗ್ಯಾರೇಜ್ ಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸೋಮವಾರ ಭೇಟಿ ನೀಡಿದರು.
ಗ್ಯಾರೇಜ್ ಮಾಲಕರೊಂದಿಗೆ ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡು, ಸಾಂತ್ವನ. ಹೇಳಿದರು. ಆಕಸ್ಮಿಕ ಬೆಂಕಿ ಅವಘಡದಿಂದಾಗಿ ಗ್ಯಾರೇಜ್ ಮಾಲಕರಿಗೆ ಭಾರೀ ನಷ್ಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

