ತುಮಕೂರು : ಶಂಕಿತ ಉಗ್ರನೋರ್ವನನ್ನು ಬಂಧಿಸಿದ ಪೊಲೀಸರು – ದೇಶದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಸಂಚು ?

ತುಮಕೂರು, ಜೂ. 5 : ಉಗ್ರರ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದ ನಗರದ ಶಂಕಿತ ಉಗ್ರನೋರ್ವನನ್ನು ತುಮಕೂರು ಪೊಲೀಸರು ನಗರದಲ್ಲಿ ಬಂಧಿಸಿದ್ದಾರೆ.

Advertisement

ಇಲ್ಲಿಯ ಬೀಡಿ ಬಡಾವಣೆಯ ನಿವಾಸಿ ಜಮೀರ್ ಖಾನ್ (22) ಬಂಧಿತನಾಗಿದ್ದು, ಈತನನ್ನು ಶುಕ್ರವಾರ (ಜೂ.05) ಬೆಳಿಗ್ಗೆ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಮುಂಬಯಿ ಉದ್ಯಮಿಯೋರ್ವರ ಕೊಲೆಗೆ ಸಂಚು ರೂಪಿಸಿದ ಶಂಕೆ ಮೇರೆಗೆ ತುಮಕೂರು ಪೊಲೀಸರು ಅಲ್ಲಿಯ ಅಲ್ಲಾಭಕ್ಷ ಎಂಬಾತನನನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಆತನ ಮಾಹಿತಿ ಮೇರೆಗೆ ನಗರಕ್ಕೆ ಬಂದು ಜಮೀ‌ರ್ ಖಾನ್‌ನನ್ನು ಬಂಧಿಸಿ ವಿಚಾರಣೆಗೆ ಕರೆದೊಯ್ದಿದ್ದಾರೆ.

ಜಮೀರ್ ಖಾನ್ ಫೇಸ್ಟುಕ್, ಇನ್ಸಾಗ್ರಾಂ ಸೇರಿದಂತೆ ಬೇರೆ ಬೇರೆ ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರರ ಸಂಪರ್ಕದಲ್ಲಿದ್ದನು ಹಾಗೂ ದೇಶದಲ್ಲಿ ಭಯೋತ್ಪಾದಕ ಸಂಚು ರೂಪಿಸುವಲ್ಲಿ ಕೈಜೋಡಿಸಿದ್ದ ಎನ್ನಲಾಗಿದೆ. ಆತ ಯಾವೆಲ್ಲ ಕುಕೃತ್ಯದಲ್ಲಿ ಕೈಜೋಡಿಸಿದ್ದನು, ಏನೆಲ್ಲಾ ಸಂಚು ರೂಪಿಸಿಕೊಂಡಿದ್ದ ಎಂಬುದು ತನಿಖೆಯಿಂದಲೇ ಹೊರಬೀಳಬೇಕಿದೆ.

ಜಮೀರ್ ಖಾನ್ ಬಂಧನದ ಕುರಿತು ಪ್ರತಿಕ್ರಿಯಿಸಿದ ಎಸ್ಪಿ ಶೇಖರ್ ಎಚ್.ಟಿ, ಯುವಕನೋರ್ವನನ್ನು ತುಮಕೂರು ಪೊಲೀಸರು ಬಂಧಿಸಿದ್ದು ತನಿಖೆ ನಡೆಸುತ್ತಿರುವ ಅವರಿಂದಲೇ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ ಎಂದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ರಿ.) ಕ್ಷೇತ್ರ ಸಮಿತಿ ಬೆಳ್ತಂಗಡಿ ವತಿಯಿಂದ “ಆಟಿದ ಕಮ್ಮೆನ ಬೊಕ್ಕಗೊಬ್ಬು”

ಟಾಪ್ ಸುದ್ದಿಗಳು, ವಿದೇಶ

ಟೋಕಿಯೋ : ಜಪಾನ್ ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ – ಭೀಕರ ಸುನಾಮಿ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : ಖಾಸಗಿ ಬಸ್ – ಬೈಕ್ ಮಧ್ಯೆ ಅಪಘಾತ; ಪತಿ ಸಾವು, ಪತ್ನಿಗೆ ಗಂಭೀರ

⚠️ Contents are protected on this website.