ಉಜಿರೆ : ಅವೈಜ್ಞಾನಿಕ ಸರ್ಕಲ್ ವಿರುದ್ಧ ಜನಾಕ್ರೋಶ – ವೈಜ್ಞಾನಿಕ ಸರ್ಕಲ್ ನಿರ್ಮಾಣಕ್ಕೆ ಆಗ್ರಹ !

ಉಜಿರೆ, ಜು. 11 : ಪುಂಜಾಲಕಟ್ಟೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಈ ಮಧ್ಯೆ ಉಜಿರೆಯ ಸರ್ಕಲ್ ವೊಂದರ ವಿರುದ್ಧ ಸಾರ್ವಜನಿಕರು, ವಾಹನ ಸವಾರರು ಆಕ್ರೋಶ ಹೊರಹಾಕುತ್ತಿದ್ದಾರೆ. ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಸರ್ಕಲ್ ಅನ್ನು ತೆರವುಗೊಳಿಸಿ, ಈ ಹಿಂದಿನ ಶೈಲಿಯಲ್ಲೇ ಸರ್ಕಲ್ ನಿರ್ಮಾಣ ಮಾಡುವಂತೆ ಆಗ್ರಹಿಸಿದ್ದಾರೆ.

Advertisement

ಬೆಳ್ತಂಗಡಿ ತಾಲೂಕಿನ ಪ್ರಮುಖ ಪೇಟೆಗಳಲ್ಲಿ ಒಂದಾಗಿರುವ ಉಜಿರೆ ಪೇಟೆಯು ಸಾಕಷ್ಟು ಅಭಿವೃದ್ಧಿ ಕಂಡಿದೆ. ಇಲ್ಲಿ, ದಿನನಿತ್ಯ ಸಾವಿರಾರು ವಾಹನಗಳು ಓಡಾಟ ನಡೆಸುತ್ತಿದೆ. ಈ ಭಾಗದಲ್ಲಿ ಪ್ರತಿಷ್ಠಿತ ಶಾಲಾ-ಕಾಲೇಜುಗಳು ಇರುವುದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರ ಓಡಾಟವೂ ಅತ್ಯಧಿಕವಾಗಿದೆ. ಇದೀಗ ಬೆಳ್ತಂಗಡಿ-ಚಾರ್ಮಾಡಿ, ಉಜಿರೆ-ಧರ್ಮಸ್ಥಳ ಭಾಗವನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿ ಸೇರುವ ಉಜಿರೆ ಪೇಟೆಯ ಮಧ್ಯಭಾಗದಲ್ಲಿ ಸರ್ಕಲ್ ವೊಂದು ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ನಿತ್ಯವೂ ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತಿರುವ ಸಾರ್ವಜನಿಕರು ಈ ಹಿಂದೆ ಇದ್ದಂತಹ ಶೈಲಿಯಲ್ಲೇ ಸರ್ಕಲ್ ನಿರ್ಮಾಣಕ್ಕೆ ಆಗ್ರಹಿಸಿದ್ದಾರೆ.

ಧರ್ಮಸ್ಥಳ ಭಾಗದಿಂದ ಬೆಳ್ತಂಗಡಿ ಕಡೆಗೆ ತೆರಳುವ ಬಸ್ ಗಳು ಬಸ್ ಬೇ ಇಲ್ಲದೆ ರಸ್ತೆ ಮಧ್ಯೆಯೇ ಪ್ರಯಾಣಿಕರನ್ನು ಹತ್ತಿಸಿ ಇಳಿಸಬೇಕಾದ ಅನಿವಾರ್ಯತೆ ಇದೆ. ಅದೇ ರೀತಿಯಲ್ಲಿ ಧರ್ಮಸ್ಥಳ ಭಾಗದಿಂದ ಮತ್ತು ಬೆಳ್ತಂಗಡಿ ಭಾಗದಿಂದ ಚಾರ್ಮಾಡಿ ರಸ್ತೆಯಾಗಿ ತೆರಳುವ ಬಸ್ ಗಳು ಗುರುಪ್ರಸಾದ್ ಹೋಟೆಲ್ ಬಳಿ ರಸ್ತೆಯಲ್ಲೇ ಬಸ್ ನಿಲ್ಲಿಸಬೇಕಾಗಿದೆ. ಚಾರ್ಮಾಡಿ ಭಾಗದಿಂದ ಧರ್ಮಸ್ಥಳ ಕಡೆಗೆ ತೆರಳುವ ವಾಹನಗಳು ತಿರುವಿನಲ್ಲೇ ಬಸ್ ನಿಲ್ಲಿಸಬೇಕಾದ ಅನಿವಾರ್ಯತೆ ಇದೆ. ಈ ವೇಳೆ ಉಜಿರೆ ಸಂಪೂರ್ಣವಾಗಿ ಟ್ರಾಫಿಕ್ ಜಾಮ್ ನಿಂದ ತತ್ತರಿಸುವುದಲ್ಲದೆ ಪಾದಚಾರಿಗಳು ರಸ್ತೆ ದಾಟುವುದಕ್ಕೂ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಸಾರ್ವಜನಿಕರು.

ಹೀಗಾಗಿ, ಈ ಹಿಂದೆ ಇದ್ದಂತ ಸಣ್ಣ ಗಾತ್ರ ಸರ್ಕಲ್ ಅನ್ನೇ ನಿರ್ಮಿಸಬೇಕು ಮತ್ತು ಬಸ್ ನಿಲ್ದಾಣ ಬಳಿ ಬಸ್ ಬೇ ನಿರ್ಮಿಸಿಕೊಟ್ಟು, ಅದರಲ್ಲೇ ಬಸ್ ನಿಲುಗಡೆಯಾಗುವಂತೆ ಕ್ರಮ ವಹಿಸಬೇಕು. ಚಾರ್ಮಾಡಿ, ನೆರಿಯ, ದಿಡುಪೆ, ಹಾಗೂ ಚಿಕ್ಕಮಗಳೂರು ಭಾಗಕ್ಕೆ ತೆರಳುವ ಬಸ್ ಗಳು ರಸ್ತೆಯಲ್ಲೇ ನಿಲ್ಲಿಸದಂತೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು ಹಾಗೂ ಪಾದಚಾರಿಗಳು ರಸ್ತೆ ದಾಟಲು ಯೋಗ್ಯವಾಗುವಂತೆ ಝೀಬ್ರಾ ಕ್ರಾಸಿಂಗ್ ಅಥವಾ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ  : ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

⚠️ Contents are protected on this website.