ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸೆಕೆಂಡರಿ ಶಾಲೆಯಲ್ಲಿ (ನ.21) ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಉಜಿರೆ ಎಸ್ ಡಿ ಎಂ ಆಂಗ್ಲ ಮಾಧ್ಯಮ ರಾಜ್ಯ ಪಠ್ಯಕ್ರಮ ಶಾಲೆಯ ವಿದ್ಯಾರ್ಥಿಗಳು ಹಲವು ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ. ಪ್ರತಿಭಾ ಕಾರಂಜಿ – 2025-26 ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ತಮ್ಮ ಅತ್ಯುತ್ತಮ ಪ್ರತಿಭೆಯನ್ನು ಪ್ರದರ್ಶಿಸಿ ಸಾಧನೆ ಮಾಡಿದ್ದಾರೆ.
ಕಿರಿಯ ಪ್ರಾಥಮಿಕ ವಿಭಾಗ
ಧಾರ್ಮಿಕ ಪಠಣದಲ್ಲಿ ಧ್ರುವ ಪ್ರಥಮ ಸ್ಥಾನ, ಚಿತ್ರಕಲೆಯಲ್ಲಿ ನಿಹಾಲ್ ಆಚಾರ್ಯ ಪ್ರಥಮ ಸ್ಥಾನ, ದೇಶಭಕ್ತಿ ಗೀತೆಯಲ್ಲಿ ಚಾರ್ವಿ ತೃತೀಯ ಸ್ಥಾನ, ಪಿಕ್ ಅಂಡ್ ಸ್ಪೀಚ್ ನಲ್ಲಿ ಸಾನ್ವಿ ತೃತೀಯ ಸ್ಥಾನ, ಇಂಗ್ಲಿಷ್ ಕಂಠಪಾಠದಲ್ಲಿ ಶಮಂತ್ ತೃತೀಯ ಸ್ಥಾನ ಪಡೆದಿದ್ದಾರೆ.
ಹಿರಿಯ ಪ್ರಾಥಮಿಕ ವಿಭಾಗ
ಧಾರ್ಮಿಕ ಪಠಣ (ಸಂಸ್ಕೃತ)ದಲ್ಲಿ ಅದ್ವಿತಿ ರಾವ್ ಪ್ರಥಮ ಸ್ಥಾನ, ಇಂಗ್ಲಿಷ್ ಕಂಠಪಾಠದಲ್ಲಿ ವೇದಾಂಶ್ ಚಂದ್ರ ವರ್ಮಾ ಪ್ರಥಮ ಸ್ಥಾನ, ಭಕ್ತಿಗೀತೆಯಲ್ಲಿ ಅಕ್ಷರ್ ಪ್ರಥಮ ಸ್ಥಾನ, ಚಿತ್ರಕಲೆಯಲ್ಲಿ ತನುಷ್ ಪ್ರಥಮ ಸ್ಥಾನ, ಅಭಿನಯ ಗೀತೆಯಲ್ಲಿ ಸಾನ್ವಿ ಎಂ.ಕೆ ದ್ವಿತೀಯ ಸ್ಥಾನ, ಪಿಕ್ ಅಂಡ್ ಸ್ಪೀಚ್ ನಲ್ಲಿ ಅದಿತಿ ದ್ವಿತೀಯ ಸ್ಥಾನ, ದೇಶಭಕ್ತಿ ಗೀತೆಯಲ್ಲಿ ನಿಶಿಕಾ ದ್ವಿತೀಯ ಸ್ಥಾನ, ಹಿಂದಿ ಕಂಠಪಾಠದಲ್ಲಿ ಅಚಲಾ ತೃತೀಯ ಸ್ಥಾನ, ಅರೇಬಿಕ್ ಪಠಣದಲ್ಲಿ ಸುಜಾ ತೃತೀಯ ಸ್ಥಾನ, ಮಣ್ಣಿನ ಮಾಡೆಲ್ ಸ್ಪರ್ಧೆಯಲ್ಲಿ ಕವಿನ್ ತೃತೀಯ ಸ್ಥಾನ,
ಪ್ರೌಢ ವಿಭಾಗ
ಕವ್ವಾಲಿ ಸ್ಪರ್ಧೆಯಲ್ಲಿ ಕವನ ಮತ್ತು ತಂಡ ಪ್ರಥಮ ಸ್ಥಾನ, ಜನಪದ ನೃತ್ಯದಲ್ಲಿ ಅನ್ವಿತಾ ಮತ್ತು ತಂಡ ದ್ವಿತೀಯ ಸ್ಥಾನ, ಧಾರ್ಮಿಕ ಪಠಣ (ಸಂಸ್ಕೃತ)ದಲ್ಲಿ ರವೀಶ್ ದ್ವಿತೀಯ ಸ್ಥಾನ, ಧಾರ್ಮಿಕ ಪಠಣ (ಅರೇಬಿಕ್)ದಲ್ಲಿ ಹಲೀಮತ್ ಫಹೀಜಾ ದ್ವಿತೀಯ ಸ್ಥಾನ, ಸಂಸ್ಕೃತ ಭಾಷಣದಲ್ಲಿ ತನ್ಮಯ ಕೃಷ್ಣ ದ್ವಿತೀಯ ಸ್ಥಾನ, ಕವನ ವಾಚನದಲ್ಲಿ ಬಿ.ತಸ್ಮಯ್ ತೃತೀಯ ಸ್ಥಾನ, ಕನ್ನಡ ಭಾಷಣದಲ್ಲಿ ದಿಶಾನ್ ತೃತೀಯ ಸ್ಥಾನಪಡೆದಿದ್ದಾರೆ
ಇನ್ನು, ಕಿರಿಯ ಪ್ರಾಥಮಿಕ ವಿಭಾಗದ 2 ವಿದ್ಯಾರ್ಥಿಗಳು, ಹಿರಿಯ ಪ್ರಾಥಮಿಕ ವಿಭಾಗದ 4 ವಿದ್ಯಾರ್ಥಿಗಳು ಹಾಗೂ ಪ್ರೌಢ ಶಾಲೆಯ 3 ವಿದ್ಯಾರ್ಥಿಗಳು, ಕವ್ವಾಲಿ ತಂಡದ 6 ವಿದ್ಯಾರ್ಥಿಗಳು ಹಾಗೂ ಜಾನಪದ ನೃತ್ಯದ 9 ವಿದ್ಯಾರ್ಥಿಗಳು
ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲೆಯ ಆಡಳಿತ ಮಂಡಳಿ ಎಲ್ಲಾ ವಿಜೇತರಿಗೆ ಅಭಿನಂದಿಸಿದೆ.

