ಉಪ್ಪಿನಂಗಡಿ : ಕಣ್ತಪ್ಪಿನಿಂದ ಇನ್ನೊಬ್ಬರ ಖಾತೆಗೆ ಹಣ ವರ್ಗಾವಣೆ – ಮರುಪಾವತಿಸಲು ನಿರಾಕರಿಸಿದ ಉಜಿರೆಯ ಉದ್ಯಮಿ ವಿರುದ್ಧ ಪ್ರಕರಣ

ಉಪ್ಪಿನಂಗಡಿ, ಡಿ.11 : ಕಣ್ತಪ್ಪಿನಿಂದ ಹಣ ಬೇರೆಯವರ ಖಾತೆಗೆ ವರ್ಗಾವಣೆಯಾಗಿದ್ದು, ಮರುಪಾವತಿಸಲು ನಿರಾಕರಿಸಿದ ಪ್ರಕರಣ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ತನ್ನ ಸಂಬಂಧಿಕರಿಗೆ ತುರ್ತು ಅಗತ್ಯದ ನೆಲೆಯಲ್ಲಿ ಪೋನ್ ಪೇ ಮೂಲಕ ಕಳುಹಿಸಲಾದ ಹಣ ಕಣ್ಣಪ್ಪಿನಿಂದಾಗಿ ಇನ್ನೊಬ್ಬರ ಖಾತೆಗೆ ಹೋದ ಪ್ರಕರಣದಲ್ಲಿ ಹಣ ಮರುಪಾವತಿಸಲು ನಿರಾಕರಿಸಿದ ಉಜಿರೆಯ ಉದ್ಯಮಿ ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

ಉಪ್ಪಿನಂಗಡಿಯ ಮಠ ಎಂಬಲ್ಲಿ ಗ್ರಾನೈಟ್ ಉದ್ಯಮ ನಡೆಸಿಕೊಂಡಿರುವ ಹರಿರಾವ್ ಎಂಬವರು ದೂರು ನೀಡಿದ್ದು, ತನ್ನ ರಾಜಸ್ಥಾನದಲ್ಲಿನ ಸಂಬಂಧಿಕ ಲಕ್ಷ್ಮೀಚಂದ್ ಎಂಬವರಿಗೆ ಕಳುಹಿಸಬೇಕಾದ 19,000 ರೂ. ಕಣ್ಣಪ್ಪಿನಿಂದಾಗಿ ಉಜಿರೆಯ ಉದ್ಯಮಿಯೋರ್ವರ ಖಾತೆಗೆ ವರ್ಗಾವಣೆಗೊಂಡಿದ್ದು, ಈ ಮೊತ್ತದಲ್ಲಿ 10,000 ರೂ. ವನ್ನು ಹಿಂದಿರುಗಿಸಿ ಉಳಿದ ಮೊತ್ತವನ್ನು ಹಿಂದಿರುಗಿಸದೆ ಸತಾಯಿಸುತ್ತಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಸಚಿವ ಸ್ಥಾನಕ್ಕಾಗಿ ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ 31 ಶಾಸಕರಿಂದ ಪತ್ರ – ಕೈ ಪಾಳಯದಲ್ಲಿ “ಪತ್ರ ಸ್ಫೋಟ”

ಟಾಪ್ ಸುದ್ದಿಗಳು, ರಾಜ್ಯ / ದೇಶ

ತಮಿಳುನಾಡು : ಎಐಎಡಿಎಂಕೆ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 10,000 ರೂ. ಘೋಷಣೆ !

ವಿದೇಶ

ಅಮೆರಿಕದಲ್ಲಿ ಭಾರಿ ಹಿಮಪಾತ: 5,600 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು, ಶಾಲೆಗಳಿಗೆ ರಜೆ

⚠️ Contents are protected on this website.