ಮಂಗಳೂರು : ದಕ್ಷಿಣ ಕನ್ನಡಕ್ಕೆ ನಮ್ಮವರೇ ಉಸ್ತುವಾರಿ ! – ನಾಲ್ವರಲ್ಲಿ ಯಾರಿಗೆ ಲಕ್ ?

ಮಂಗಳೂರು, ಮೇ 29 : ರಾಜ್ಯದ ಮುಖ್ಯಮಂತ್ರಿ ಬದಲಾಗುತ್ತಿದ್ದಂತೆಯೇ ಮತ್ತೆ ಸಚಿವ ಸಂಪುಟದಲ್ಲೂ ಬದಲಾವಣೆ ಸನ್ನಿಹಿತವಾಗಿದ್ದು, ಈ ಬಾರಿ ದಕ್ಷಿಣ ಕನ್ನಡಕ್ಕೆ ಇಲ್ಲಿನವರೇ ಉಸ್ತುವಾರಿ ಸಚಿವರು ಸಿಗುವ ಸಾಧ್ಯತೆ ಗೋಚರಿಸಿದೆ.

Advertisement

ಸಿಎಂ ರಾಜೀನಾಮೆ ಸಲ್ಲಿಸಿದಂತೆಯೇ ಸಚಿವ ಸಂಪುಟವೂ ಅಧಿಕಾರ ಕಳೆದು ಕೊಳ್ಳುತ್ತದೆ. ಸಂಭವನೀಯ ಹೊಸ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವ ದಲ್ಲಿ ಹೊಸ ಸಚಿವ ಸಂಪುಟ ರಚನೆಯಾಗಲಿದೆ, ಇದರಲ್ಲಿ ಕರಾವಳಿಯಿಂದ ಯಾರು ಎನ್ನುವ ಬಗ್ಗೆ ಚರ್ಚೆ ಆರಂಭವಾಗಿದೆ.

ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಯು. ಟಿ. ಖಾದರ್ ಹಾಗೂ ಶಾಸಕ ಅಶೋಕ್ ಕುಮಾರ್ ರೈ ಇಬ್ಬರು ವಿಧಾನಸಭೆಗೆ ಆಯ್ಕೆಯಾದವರು. ಮಂಜುನಾಥ ಭಂಡಾರಿ ಹಾಗೂ ಐವನ್ ಡಿ’ಸೋಜಾ ವಿಧಾನಪರಿಷತ್‌ಗೆ ಆಯ್ಕೆಯಾಗಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅವರು ಡಿ.ಕೆ.ಶಿ. ಆಪ್ತರೆನ್ನುವ ಕಾರಣ ಅವರ ಹೆಸರು ಸಚಿವ ಸ್ಥಾನಕ್ಕೆ ಚಾಲ್ತಿಯಲ್ಲಿದೆ. ಆದರೆ ಸಚಿವ ಸಂಪುಟದ ಲೆಕ್ಕಾಚಾರದಲ್ಲಿ ಹೊಸಬರು. ಹಾಗಾಗಿ ಮುಂದಿನ ಬಾರಿ ನೋಡೋಣ ಎನ್ನುವ ಅಂಶ ಬಂದರೆ ಅವರ ಹೆಸರು ಹಿಂದೆ ಸರಿಯಲಿದೆ.

ಇನ್ನು ಪರಿಷತ್‌ ಸದಸ್ಯ ಡಾ| ಮಂಜುನಾಥ ಭಂಡಾರಿ ಕೂಡಾ ರಾಷ್ಟ್ರ ಮಟ್ಟದಲ್ಲಿ ಹಲವು ಹಿರಿಯ ನಾಯಕರ ಸಂಪರ್ಕ ಇರುವವರು. ಹಾಗಾಗಿ ಅವರೂ ಸಚಿವ ಸಂಪುಟ ಸೇರುವ ಆಕಾಂಕ್ಷಿಗಳಲ್ಲಿ ಒಬ್ಬರು.

ರಾಜ್ಯಸಭಾ ಸ್ಥಾನಕ್ಕೆ ಸಚಿವ ಕೆ. ಜೆ. ಜಾರ್ಜ್ ಆಸಕ್ತಿ ತೋರಿಸಿರುವುದಾಗಿ ಮಾಹಿತಿ ಇದೆ. ಒಂದು ವೇಳೆ ಹೀಗಾದಲ್ಲಿ ವಿಧಾನಸಭೆ ಮತ್ತು ಪರಿಷತ್‌ನಲ್ಲಿ ಕ್ರೈಸ್ತ ಸಮುದಾಯದವರಿಗೆ ಅವಕಾಶ ನೀಡಿಲ್ಲ ಎಂದಾಗಬಹುದು. ಆಗ ಬೇರೆ ಕ್ರೈಸ್ತ ಸದಸ್ಯರು ಯಾರೂ ಇಲ್ಲದ ಕಾರಣ ಐವನ್ ಡಿ’ಸೋಜಾ ಹೆಸರೂ ಮುನ್ನೆಲೆಗೆ ಬರಬಹುದು.

ಸಿದ್ದರಾಮಯ್ಯ ಅವರ ಬಣದಲ್ಲಿ ಗುರುತಿಸಿಕೊಂಡಿರುವ ತಮಗೆ ಅವರ ಪ್ರಭಾವದಿಂದ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಐವನ್ ಡಿ’ಸೋಜಾರಲ್ಲಿದೆ. ಉಡುಪಿಯಲ್ಲಿ ವಿಧಾನ ಪರಿಷತ್ ಹಾಗೂ ವಿಧಾನ ಸಭೆ ಎರಡರಲ್ಲೂ ಕಾಂಗ್ರೆಸ್ ಪ್ರತಿನಿಧಿತ್ವ ಇಲ್ಲ, ಹಾಗಾಗಿ ಈ ಬಾರಿಯೂ ಉಡುಪಿಗೆ ಉಸ್ತುವಾರಿ ಸಚಿವರು ಹೊರಗಿನವರೇ ಆಗುವ ಸಾಧ್ಯತೆ ಇದೆ.

ನಿಗಮ ಮಂಡಳಿಯೂ ಬದಲಾವಣೆ ?

ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ಆಯಾ ಮುಖ್ಯಮಂತ್ರಿಗಳಿಗೆ ಬಿಟ್ಟದ್ದು ಎನ್ನುವ ಕಾರಣಕ್ಕಾಗಿ ಅದರಲ್ಲೂ ಬದಲಾವಣೆ ಉಂಟಾಗಬಹುದೇ ಎನ್ನುವ ಅನುಮಾನಗಳು ವ್ಯಕ್ತವಾಗಿವೆ. ಹಾಲಿ ಅಧ್ಯಕ್ಷರನ್ನೇ ಮುಂದು ವರಿಸುವ ಅವಕಾಶಗಳೂ ಇವೆ. ಆದರೆ ಮುಖ್ಯಮಂತ್ರಿಗಳು ಅವರ ಅಪೆಂàಷ್ಟ ರನ್ನು ನೇಮಕ ಮಾಡಬೇಕಾದರೆ ಈಗಿನ ಹುದ್ದೆಗಳಲ್ಲಿರುವವರ ನೇಮಕಾತಿ ರದ್ದುಗೊಳಿಸಬೇಕಾಗುತ್ತದೆ.

ಯು. ಟಿ. ಖಾದರ್‌ಗೆ ಸಚಿವ ಸ್ಥಾನ ?

ಲಭ್ಯ ಮಾಹಿತಿ ಪ್ರಕಾರ, ಇದುವರೆಗೆ ಸ್ಪೀಕರ್ ಆಗಿದ್ದ ಮಂಗಳೂರು ಶಾಸಕ ಯು. ಟಿ. ಖಾದರ್ ಅವರು ಈ ಬಾರಿ ಸಚಿವ ಸಂಪುಟ ಪ್ರವೇಶಿಸುವ ಸಾಧ್ಯತೆ ಇದೆ. ಈ ಮೊದಲು ಆಹಾರ, ನಗರಾಭಿವೃದ್ಧಿ, ಆರೋಗ್ಯ ಖಾತೆಯಂತಹ ಮಹತ್ವದ ಖಾತೆಗಳನ್ನು ನಿಭಾಯಿಸಿದ ಅನುಭವಿಯಾಗಿರುವುದು ಅವರಿಗೆ ಈ ಬಾರಿ ಸಚಿವ ಸ್ಥಾನ ಲಭಿಸುವುದಕ್ಕೆ ಪ್ರಬಲ ಕಾರಣಗಳನ್ನು ಒದಗಿಸಿದೆ. ಅವರು ನಿರ್ವಹಿಸಿದ ಸ್ಪೀಕರ್‌ಹೊಣೆಯನ್ನು ದ. ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿನೇಶ್ ಗುಂಡೂರಾವ್ ಅವರಿಗೆ ವಹಿಸುವ ಮಾತುಗಳೂ ಕೇಳಿಬಂದಿವೆ.

ನಾನು ಮುಕ್ತ ಮನಸ್ಸಿನಿಂದ ಇದ್ದೇನೆ, ಸಚಿವ ಸ್ಥಾನದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ, ಜತೆಯಲ್ಲಿ ತುಳುವಿಗೆ ರಾಜ್ಯಭಾಷೆ ಸ್ಥಾನಮಾನ ಕೊಡಿಸುವ ಕೆಲಸ ಮಾಡಬೇಕಿದೆ ಎನ್ನುತ್ತಾರೆ ಯು. ಟಿ. ಖಾದರ್.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಡಿಕೆ ಶಿವಕುಮಾರ್ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಸ್ಪೀಕರ್ ಯು.ಟಿ.ಖಾದ‌ರ್

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕರ್ನಾಟಕದ 24ನೇ ಸಿಎಂ ಆಗಿ ಡಿಕೆಶಿ ಪ್ರಮಾಣ ವಚನ –  ನೊಣವಿನ ಕೆರೆ ಅಜ್ಜಯ್ಯನ ಹೆಸರಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕೊರಂಜ ಮತ್ತು ಮಚ್ಚಿನ ಶಾಲೆಗಳು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತನೆ – ಶಾಸಕ ಹರೀಶ್ ಪೂಂಜಾ

⚠️ Contents are protected on this website.