ಬೆಳ್ತಂಗಡಿ, ಜು. 8 : ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ (ರಿ.) ಬೆಳ್ತಂಗಡಿ ಸಂಘದ ವತಿಯಿಂದ 2026-27 ನೇ ಸಾಲಿನಲ್ಲಿ ಎಸ್ ಎಸ್ಎಲ್ ಸಿ, ದ್ವಿತೀಯ ಪಿಯುಸಿ ಉತ್ತೀರ್ಣರಾಗಿ ಪದವಿ, ಇಂಜಿನಿಯರಿಂಗ್, ವೈದ್ಯಕೀಯ ಮೊದಲಾದ ಉನ್ನತ ಶಿಕ್ಷಣದಲ್ಲಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಪದವಿ ನಂತರದ ಪ್ರಥಮ ತರಗತಿಯ ಉನ್ನತ ವ್ಯಾಸಂಗ ಮಾಡುತ್ತಿರುವ ಬಿಲ್ಲವ ಸಮಾಜದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಶೇ. 90 ಕ್ಕಿಂತ ಮೇಲ್ಪಟ್ಟು, ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ.80 ಕ್ಕಿಂತ ಮೇಲ್ಪಟ್ಟು, ಅಂತಿಮ ಪದವಿಯಲ್ಲಿ ಶೇ. 70 ಕ್ಕಿಂತ ಮೇಲ್ಪಟ್ಟು ಅಂಕ ಪಡೆದ ಅರ್ಹ ಬಡ ವಿದ್ಯಾರ್ಥಿಗಳು ಸಂಘದ ಕಚೇರಿಯಿಂದ ಅರ್ಜಿ ಫಾರಂ ಪಡೆದುಕೊಂಡು ಭರ್ತಿ ಮಾಡಿ ಸ್ಥಳೀಯ ಗ್ರಾಮ ಸಮಿತಿಯ ಅಧ್ಯಕ್ಷರ ಮತ್ತು ಸ್ಥಳೀಯ ತಾಲೂಕು ಸಂಘದ ನಿರ್ದೇಶಕರ ಶಿಫಾರಸಿನೊಂದಿಗೆ ದಿನಾಂಕ 15-08-2026ರ ಒಳಗೆ ಸಂಘದ ಕಚೇರಿಗೆ ಸಲ್ಲಿಸಬೇಕೆಂದು ಸಂಘಟಕರು ತಿಳಿಸಿದ್ದಾರೆ.
ತಾಲೂಕು ಸಂಘದ ಸದಸ್ಯತ್ವ ಕಡ್ಡಾಯವಾಗಿ ಪಡೆದಿರಬೇಕು. ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ವಿದ್ಯಾರ್ಥಿಗಳು ಮಾತ್ರ ಈ ಯೋಜನೆಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಸಂಘದ ಪದಧಿಕಾರಿಗಳು ತಿಳಿಸಿದ್ದಾರೆ.
ಮಾಹಿತಿಗಾಗಿ ಸಂಪರ್ಕಿಸಿ : 9482981319, 9686976225, 9900900505


