ಕಾರ್ಕಳ : ಸ್ಕೂಲ್ ಗೇಮ್ಸ್ ಫೆಡರೇಶನ್ ನಡೆಸುವ 15ರ ವಯೋಮಿತಿಯ ವಿಶ್ವಾಶಾಲಾ ಮಕ್ಕಳ ಬಾಲಕಿಯರ ವಿಭಾಗದ ವಾಲಿಬಾಲ್ ಚಾಂಪಿಯನ್‌ಶಿಪ್ ಪಂದ್ಯಾವಳಿಯ ಭಾರತ ತಂಡದ ನಾಯಕಿಯಾಗಿ ತಾಲೂಕಿನ ಕಲ್ಲೊಟ್ಟೆ ನಿವಾಸಿ ಸಂದೇಶ್ ವರ್ಮ ಹಾಗೂ ಶ್ರುತಿರಾಜ್ ದಂಪತಿ ಪುತ್ರಿ ಶಗುನ್ ಎಸ್. ವರ್ಮ ಹೆಗ್ಡೆ ಆಯ್ಕೆಯಾಗಿದ್ದಾರೆ.
ಶಗುನ್ ಎಸ್. ವರ್ಮ ಹೆಗ್ಡೆ ಕ್ರೈಸ್ಟ್‌ಕಿಂಗ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾರೆ. ಶಗುನ್ 15ರ ವಯೋಮಿತಿಯ ಭಾರತೀಯ ವಾಲಿವಾಲ್ ತಂಡಕ್ಕೆ ಆಯ್ಕೆಯಾದ ಕರ್ನಾಟಕದ ಏಕೈಕ ಆಟಗಾರ್ತಿ. ಅಂತಾರಾಷ್ಟ್ರೀಯ ಪಂದ್ಯವು ಡಿ. 3 ರಿಂದ 13ರವರೆಗೆ ಚೀನಾದ ಶಾಂಗ್ಲೋದಲ್ಲಿ ನಡೆಯಲಿದೆ.

