ಉಡುಪಿ : ಮಣಿಪಾಲದ ಹೆಸರಾಂತ ಪಬ್ ವೊಂದರ ಬಳಿ ವೀಕೆಂಡ್ ಹೆಸರಿನಲ್ಲಿ ನಡುರಸ್ತೆಯಲ್ಲೇ ಗ್ಯಾಂಗ್ ಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗುತ್ತಿದೆ. ಹೊಡೆದಾಟದ ವೇಳೆ ಓರ್ವ ಗಂಭೀರ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಹಿಂದೆ ಎಸ್ಪಿ ಅರುಣ್ ಕುಮಾರ್ ಮಣಿಪಾಲದ ಪಬ್ ಕಲ್ಚರ್ ಗೆ ಬ್ರೇಕ್ ಹಾಕಿದ್ದರು. ಮಣಿಪಾಲದ ಹಿಂದಿನ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ವೀಕೆಂಡ್ ಡ್ರೈವ್ ಮಾಡಿ ಎಚ್ಚರಿಕೆ ನೀಡಿದ್ದರು. ಮಣಿಪಾಲದ ಆಯಕಟ್ಟಿನ ಜಾಗಗಳಲ್ಲಿ ಪೊಲೀಸ್ ಅಳವಡಿಸಿ ತಪಾಸಣೆ ನಡೆಸುತ್ತಿದ್ದರು. ಸಮಯ ಮೀರಿ ನಡೆಸಲಾಗುತ್ತಿದ್ದ ಮತ್ತು ಅನುಮತಿ ಇಲ್ಲದ ಪಬ್ ಗಳಿಗೆ ಬೀಗ ಜಡಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮಣಿಪಾಲದಲ್ಲಿ ಮತ್ತೆ ಪಬ್ ಕಲ್ಚರ್ ಹೆಚ್ಚಾಗಿದೆ ಎನ್ನುವ ದೂರುಗಳು ಕೇಳಿ ಬಂದಿತ್ತು. ಈ ದೂರಿಗೆ ಸಾಕ್ಷಿ ಎನ್ನುವಂತೆ ಪಬ್ ನಲ್ಲಿ ನಡೆದ ಗಲಾಟೆ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಉಡುಪಿ ಪೊಲೀಸರು ಕಠಿಣ ಕ್ರಮವನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

