ಮಧ್ಯಪ್ರಾಚ್ಯ ಯುದ್ದಕ್ಕೆ ಯುರೋಪ್‌ ಎಂಟ್ರಿ : ಮಿತ್ರರಾಷ್ಟ್ರಗಳ ರಕ್ಷಣೆಗೆ ಇರಾನ್‌ ಮೇಲೆ ಪ್ರತೀಕಾರ – 3ನೇ ಮಹಾಯುದ್ದದ ಆತಂಕ !

Advertisement

ಟೆಹ್ರಾನ್ :‌ ಅಮೆರಿಕಾ-ಇಸ್ರೇಲ್‌ ಜಂಟಿಯಾಗಿ ಇರಾನ್‌ ಮೇಲೆ ಯುದ್ದ ಮಾಡುತ್ತಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್‌ ಸಹ ಅಮೆರಿಕಾ ಸೇರಿದಂತೆ ತನ್ನ ನೆರೆರಾಷ್ಟ್ರಗಳ ಮೇಲೆ ತನ್ನ ಪ್ರತೀಕಾರವನ್ನು ತೀರಿಸಿಕೊಳ್ಳಲು ಮುಂದಾಗಿದೆ. ಇದು ಈಗಾಗಲೇ ಮಧ್ಯಪ್ರಾಚ್ಯದಲ್ಲಿ ಘೋರಯುದ್ದದ ವಾತವರಣವನ್ನು ಸೃಷ್ಟಿಮಾಡಿದೆ. ಈ ಮಧ್ಯೆ ಯುದ್ದದ ಕಾವು ಹೆಚ್ಚಾಗುತ್ತಿದ್ದಂತೆ ಯುರೋಪಿಯನ್‌ ದೇಶಗಳು ಸಹ ಈ ಯುದ್ದಕ್ಕೆ ಎಂಟ್ರಿ ಕೊಡುತ್ತಿದ್ದು, ಅಮೆರಿಕಾಗೆ ಸಹಾಯ ಮಾಡುವುದಾಗಿ ಘೋಷಿಸಿವೆ.

Advertisement

ಯುದ್ದದ ಕಾವು ಜೋರಾಗಿ ಇರಾನ್‌ ಸುಪ್ರೀಂ ಲೀಡರ್‌ ಖಮೇನಿ ಹತ್ಯೆಯಾದ ಬಳಿಕ ಅಮೆರಿಕಾ ಮೇಲೆ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಇರಾನ್‌ ಶಪಥ ಮಾಡಿದ್ದು, ತನ್ನ ನೆರೆಹೊರೆಯಲ್ಲಿರುವ ಯುಎಸ್‌ ನ ಮಿತ್ರರಾಷ್ಟ್ರಗಳಾದ ಬಹ್ರೇನ್, ಕುವೈತ್, ಕತಾರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) , ಒಮಾನ್‌ ದೇಶಗಳ ಮೇಲೆ ಕ್ಷಿಪಣಿ ದಾಳಿ ಮಾಡುತ್ತಿವೆ. ಇದು ಕೇವಲ ಅಮೆರಿಕಾಗೆ ಮಾತ್ರವಲ್ಲದೆ, ಯುರೋಪ್‌ ಗೂ ಅಪಾಯವನ್ನೊಡ್ಡಲಿದ್ದು, ಇದರಿಂದ ಕೆರಳಿರುವ ಯುರೋಪ್‌ ನ ಫ್ರಾನ್ಸ್, ಜರ್ಮನಿ ಮತ್ತು ಯುನೈಟೆಡ್ ಕಿಂಗ್‌ಡಮ್ ದೇಶಗಳು ಇರಾನ್‌ ವಿರುದ್ದ ಹೋರಾಡಲು ಸಿದ್ದ ಎಂದು ಭಾನುವಾರ(ಮಾ.1) ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

Advertisement

ಈ ಜಂಟಿ ಹೇಳಿಕೆಯಲ್ಲಿ “ಆರಂಭಿಕ ಯುಎಸ್ ಮತ್ತು ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಭಾಗಿಯಾಗದ ದೇಶಗಳು ಸೇರಿದಂತೆ ಈ ಪ್ರದೇಶದ ದೇಶಗಳ ವಿರುದ್ಧ ಇರಾನ್ ನಡೆಸಿದ ವಿವೇಚನಾರಹಿತ ಮತ್ತು ಅಸಮಾನ ಕ್ಷಿಪಣಿ ದಾಳಿಯಿಂದ ನಾವು ದಿಗ್ಭ್ರಮೆಗೊಂಡಿದ್ದು, ಇರಾನ್‌ ಈ ಅಜಾಗರೂಕ ದಾಳಿಗಳು ಗಲ್ಫ್‌ನಲ್ಲಿರುವ ತಮ್ಮ ಮಿತ್ರರಾಷ್ಟ್ರಗಳು ಹಾಗೂ ಅಲ್ಲಿನ ನಾಗರಿಕರನ್ನು ಮತ್ತು ಸೇವಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡಿವೆ” ಎಂದಿದ್ದಾರೆ.

ಮುಂದುವರೆದು, “ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹಾರಿಸುವ ಇರಾನ್‌ನ ಸಾಮರ್ಥ್ಯವನ್ನು ತಡೆಯುವ ಗುರಿಯನ್ನು ಹೊಂದಿರುವ ಅಗತ್ಯ ಮತ್ತು ರಕ್ಷಣಾತ್ಮಕ ಕ್ರಮವನ್ನು ಬೆಂಬಲಿಸುವುದು ಸೇರಿದಂತೆ ನಮ್ಮ ಮತ್ತು ಮಿತ್ರರಾಷ್ಟ್ರಗಳ ಹಿತಾಸಕ್ತಿಗಳನ್ನು ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಸಿದ್ಧರಿದ್ದು, ಇದಕ್ಕಾಗಿ ಅಮೆರಿಕಾ ಹಾಗೂ ಮಿತ್ರ ರಾಷ್ಟ್ರಗಳೊಂದಿಗೆ ಕೆಲಸ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.

ಇತ್ತ, ಇರಾನ್‌ ತನ್ನ ದಾಳಿಗಳ ತೀವ್ರತೆಯನ್ನು ಹೆಚ್ಚಿಸಿದ್ದು, ಪರ್ಷಿಯನ್ ಕೊಲ್ಲಿ ಮತ್ತು ಇಸ್ರೇಲ್‌ನ ಕನಿಷ್ಠ 9 ದೇಶಗಳ ತಾಣಗಳನ್ನು ಗುರಿಯಾಗಿಸಿಕೊಂಡಿದೆ.ಹೀಗೆ ಗಲ್ಫ್‌ ಉದ್ದಕ್ಕೂ ಇರಾನ್‌ ಬಹುತೇಕ ಎಲ್ಲಾ ದೇಶಗಳ ಮೇಲೆ ದಾಳಿಗೆ ಮುಂದಾಗಿದ್ದು, ವಸತಿ ಪ್ರದೇಶಗಳು, ವಿಮಾನ ನಿಲ್ದಾಣಗಳು ಮತ್ತು ಬಂದರುಗಳು ಸೇರಿದಂತೆ ನಾಗರಿಕ ಸ್ಥಳಗಳ ಮೇಲಿನ ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದೆ. ಹೀಗೆ ಸದ್ಯ ಮಧ್ಯಪ್ರಾಚ್ಯವೆಲ್ಲಾ ಯುದ್ದದಲ್ಲಿ ಬೇಯುತ್ತಿದ್ದು, ಈಗ ಯುರೋಪ್‌ ಸಹ ಈ ಯುದ್ದಕ್ಕೆ ಅಧಿಕೃತವಾಗಿ ಎಂಟ್ರಿ ಕೊಡುತ್ತಿದ್ದು, 3ನೇ ಮಹಾಯುದ್ದಕ್ಕೆ ಕ್ಷಣಗಣನೆ ಆರಂಭವಾಯಿತಾ ಎಂಬ ಅನುಮಾನಗಳು ಮೂಡಿವೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ