ಬೆಳಗಾವಿ : “ನಾನೇ ನಿಜವಾದ ವಿರೋಧ ಪಕ್ಷದ ನಾಯಕ” – ನನಗೇಕೆ ಕೊನೆಯಲ್ಲಿ ಕುರ್ಚಿ ? – ಯತ್ನಾಳ್ ಪ್ರಶ್ನೆ

ಬೆಳಗಾವಿ, ಡಿ. 09 : ನಾನು ಅಡ್ಜಸ್ಟ್ ಮೆಟ್ ಗಿರಾಕಿಯಲ್ಲ, ನಾನೇ ನಿಜವಾದ ವಿರೋಧ ಪಕ್ಷದ ನಾಯಕನಾಗಿದ್ದೇನೆ. ನನಗೆ ಕೊನೆಯಲ್ಲಿ ಕುರ್ಚಿ ಏಕೆ ನೀಡಲಾಗಿದೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದರು. ಇಂದು ವಿಧಾನಸಭೆಯಲ್ಲಿ ಕುರ್ಚಿ ವಿಚಾರವಾಗಿ ಸ್ವಾರಸ್ಯಕರ ಚರ್ಚೆ ನಡೆಯಿತು. ಪ್ರಶ್ನೋತ್ತರ ಕಲಾಪಕ್ಕೆ ಮೊದಲು ಈ ವಿಚಾರ ಪ್ರಸ್ತಾಪ ಮಾಡಿದ ಯತ್ನಾಳ್, “ಸದನದಲ್ಲಿ ನಾನೇ ನಿಜವಾದ ವಿರೋಧ ಪಕ್ಷದ ನಾಯಕ. ಉಪಾಧ್ಯಕ್ಷರ ಪಕ್ಕದ ಕುರ್ಚಿಯನ್ನು ನನಗೆ ನೀಡಿ” ಎಂದು ಆಗ್ರಹಿಸಿದ ಘಟನೆ ನಡೆಯಿತು.

Advertisement

ವಿಧಾನಸಭೆಯಲ್ಲಿ ಹಿಂದಿನ ಭಾಗದಲ್ಲಿ ಕುರ್ಚಿ ನೀಡಿದ್ದಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿದ ಯತ್ನಾಳ್ ಗೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಖಾದರ್ “ನಮಗೆ ಹಿಂದಿನ ಸೀಟು ಕೊಟ್ಟಿದ್ದೀರಿ ಎಂದು ಕಳೆದ ಬಾರಿ ಗಮನಕ್ಕೆ ತರಲಾಗಿತ್ತು. ಆದರೆ ರಾಜಕೀಯದಲ್ಲಿ ಸೀನಿಯರ್ ಹಾಗೂ ಜೂರಿಯರ್ ಇಲ್ಲ. ಅಧಿಕಾರ ಇದ್ದವರೇ ಸೀನಿಯರ್ ಹಾಗೂ ಅಧಿಕಾರ ಇಲ್ಲದವರು ಜೂನಿಯರ್. ಸದನದಲ್ಲಿ ಕುರ್ಚಿ ನೀಡುವಾಗ ಹಿರಿತನ ನೋಡಿ ಕೊಡುವುದಿಲ್ಲ” ಎಂದರು.

ಇದನ್ನೂ ಓದಿ : ರಾಜ್ಯದ ಬೀಡಿ ಕಾರ್ಮಿಕರಿಗೆ ಮುಂದಿನ ಒಂದು ತಿಂಗಳ ಒಳಗೆ ಕನಿಷ್ಠ ವೇತನ ನಿಗದಿ – ಸಚಿವ ಸಂತೋಷ್‌ ಲಾಡ್‌ https://dhwaninews.com/beedi_kanista_vetana/

“ನೀವು ಬಿಜೆಪಿಯಲ್ಲಿದ್ದಾಗ ಮುಂದಿನ ಸ್ಥಾನದಲ್ಲಿ ಕುರ್ಚಿ ನೀಡಲಾಗಿತ್ತು.ನಿಮಗೆ ಬೇಕಾದ ಇಲ್ಲಿ ಬರುವುದು ಬೇಡವಾದಾಗ ಬಿಟ್ಟು ಅಲ್ಲಿ ಹೋದರೆ ಏನು ಏನು ಮಾಡೋದು?” ಎಂದು ಪ್ರಶ್ನಿಸಿ ಕಾಲೆಳೆದರು. ಇದಕ್ಕೆ ಯತ್ನಾಳ್ ಪ್ರತಿಕ್ರಿಯೆ ನೀಡಿ, “ನಾನು ಬೇಕೆಂದಾಗ ಬರುವುದು, ಬಿಡೋದು ಇಲ್ಲಿ ವಿಚಾರ ಅಲ್ಲ‌. ನಾವೇ ನಿಜವಾದ, ನಿಷ್ಠಾವಂತ ಕಾರ್ಯಕರ್ತ. ನಾನೇ ಈ ಸದನದಲ್ಲಿ ನಿಜವಾದ ವಿರೋಧ ಪಕ್ಷದ ನಾಯಕ” ಎಂದರು. “ನಾನು ಅಡ್ಜೆಸ್ಟ್ ಮೆಂಟ್ ಗಿರಾಕಿ ಅಲ್ಲ. ನಾನು ಯಾರ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ನಾನು ಸಿಎಂ ಕಚೇರಿಗೆ ಹೋಗಿಲ್ಲ. ಯಾರ ಮಂತ್ರಿಗಳ ಬಳಿ ದಯಾಪರನಾಗಿ ಕೇಳಿಕೊಂಡಿಲ್ಲ. ನಾನು ನಿಜವಾದ ವಿರೋಧ ಪಕ್ಷದ, ಉಪಾಧ್ಯಕ್ಷರ ಪಕ್ಕದ ಕುರ್ಚಿಯನ್ನು ನನಗೆ ನೀಡಿ” ಎಂದು ಬೇಡಿಕೆ ಇಟ್ಟರು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಹುಷಾರ್‌ – ಆರೋಗ್ಯ ಇಲಾಖೆ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಉಜಿರೆ : ಮಾರ್ಚ್ 3ರಿಂದ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನಬ್ರಹ್ಮರಥ, ಪುಷ್ಪರಥ ಸಮರ್ಪಣೆ – ಶ್ರೀ ಶರತ್ ಕೃಷ್ಣಪಡ್ವೆಟ್ನಾಯ

⚠️ Contents are protected on this website.