ಬಂಗಾಡಿ : ಯುವ ಸಂಗಮ ಸೇವಾ ಸಮಿತಿ ಬೆಳ್ತಂಗಡಿ ವತಿಯಿಂದ “ಯುವ ಸಂಗಮ ಪ್ರೀಮಿಯರ್ ಲೀಗ್” ಕ್ರಿಕೆಟ್ ಪಂದ್ಯಾಟ

ಬಂಗಾಡಿ, ಫೆ. 24 : ಯುವ ಸಂಗಮ ಸೇವಾ ಸಮಿತಿ ಬೆಳ್ತಂಗಡಿ ವತಿಯಿಂದ ಬಂಗಾಡಿಯ ಕಾಟುಕುಕ್ಕೆ ಮೈದಾನದಲ್ಲಿ ಫೆ. 22ರಂದು ಕ್ರಿಕೆಟ್ ಪಂದ್ಯಾಟ ನಡೆಯಿತು. ಯುವ ಸಂಗಮ ಸೇವಾ ಸಮಿತಿ ಬೆಳ್ತಂಗಡಿ ಇದರ ಅಧ್ಯಕ್ಷರಾದ ಶ್ರೀ ಹರೀಶ್ ಇಂದಬೆಟ್ಟು ಅವರು ದೀಪ ಪ್ರಜ್ವಲಿಸುವ ಮೂಲಕ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿದರು.

Advertisement

ಕ್ರಿಕೆಟ್ ಪಂದ್ಯಾಟಕ್ಕೆ ಭೇಟಿ ನೀಡಿದ ಶಾಸಕ ಹರೀಶ್ ಪೂಂಜಾ ಅವರು, “ಯುವ ಸಮುದಾಯ ಒಗ್ಗಟ್ಟಿನಲ್ಲಿ ನಿಂತರೆ ಯಾವುದೇ ಸಾಧನೆಗಳನ್ನು ಮಾಡಲು ಸಾಧ್ಯ. ಯುವ ಸಂಗಮ ಸೇವಾ ಸಮಿತಿ ಕೇವಲ ಕ್ರೀಡಾ ಚಟುವಟಿಕೆಗಳನ್ನು ನಡೆಸದೆ, ಸಮಾಜದ ಅಭಿವೃದ್ಧಿಗಾಗಿ ಪಣತೊಟ್ಟಿದೆ. ನಿಮ್ಮ ಎಲ್ಲಾ ಕಾರ್ಯಕ್ರಮಗಳಿಗೆ ನಾನು ಸಂಪೂರ್ಣವಾದ ಬೆಂಬಲ ನೀಡುತ್ತೇನೆಂದು ಭರವಸೆ ನೀಡಿದರು.

ವೇದಿಕೆಯಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಾದಿಯರಾದ ಶ್ರೀಮತಿ ಸುಮಿತ್ರಾ, ಚೈತ್ರಾ ಬಿ., ಹರಿಣಿ ಮತ್ತು ಸಂಧ್ಯಾ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ಬೆಳ್ತಂಗಡಿ ತಾಲೂಕು ಕೊರಗ ಸಂಘದ ಅಧಕ್ಷರಾದ ಸಂತೋಷ್, ಉಪಾಧ್ಯಕ್ಷರಾದ ಸುನಿಲ್, ಯುವ ಸಂಗಮ ಸೇವಾ ಸಮಿತಿ ಬೆಳ್ತಂಗಡಿ ಇದರ ಉಪಾಧ್ಯಕ್ಷರಾದ ಧನ್ಯಕುಮಾರ್, ಪ್ರಧಾನ ಕಾರ್ಯದರ್ಶಿ ಮಧುರಾಜ್ ಎಂ., ಕಾರ್ಯದರ್ಶಿ ಸಾಂತಪ್ಪ, ಕ್ರೀಡಾ ಕಾರ್ಯದರ್ಶಿ ಹರೀಶ್, ಸವಿತಾ, ಮ್ಯಾಚ್ ರೆಫ್ರಿಗಳಾದ ಧನಂಜಯ ಮತ್ತು ವಿನೋದ್ ರಾಜ್, ಪದ್ಮನಾಭ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.

ಯುವ ಸಂಗಮ ಪ್ರೀಮಿಯರ್ ಲೀಗ್ – ಡಿಎಫ್ ಸಿ ಮಂಗಳೂರು ತಂಡ ಪ್ರಥಮ…!

ಯುವ ಸಂಗಮ ಪ್ರೀಮಿಯರ್ ಲೀಗ್ ನಲ್ಲಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ 10 ತಂಡಗಳು ಭಾಗವಹಿಸಿದ್ದವು. ಡಿಎಫ್ ಸಿ ಮಂಗಳೂರು ತಂಡ ಪ್ರಥಮ, ಜಾಲ್ಪನೆ ಬ್ರದರ್ಸ್ ಸುಳ್ಯ ದ್ವಿತೀಯ, ಕಣಿಪ್ಪುರ ಬ್ರದರ್ಸ್ ಕಾಸರಗೋಡು ತೃತೀಯ ಹಾಗೂ ಬ್ಲೂ ಬಾಯ್ಸ್ ಮುಡಿಪು ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ಮ್ಯಾನ್ ಆಫ್ ದ ಸೀರೀಸ್ ಮತ್ತು ಬೆಸ್ಟ್ ಬ್ಯಾಟ್ಸ್ ಮ್ಯಾನ್ ವೈಯಕ್ತಿಕ ಬಹುಮಾನವನ್ನು ಡಿಎಫ್ ಸಿ ಮಂಗಳೂರು ತಂಡದ ಆಟಗಾರ ಶ್ರೀನಿಧಿ ಮತ್ತು ಬೆಸ್ಟ್ ಬೌಲರ್ ಬಹುಮಾನವನ್ನು ಜಾಲ್ಪನೆ ಬ್ರದರ್ಸ್ ಸುಳ್ಯ ತಂಡದ ಆಟಗಾರ ಪಡೆದುಕೊಂಡರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ  : ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

⚠️ Contents are protected on this website.