ರಾತ್ರಿ ಮಲಗಿದ್ದ ಮಗಳು ಬೆಳಗ್ಗೆ ಇಲ್ಲ ! ಮಂಚದ್ದ ಮೇಲಿದ್ದ ಹಾವಿನ ಪೊರೆ ಕಂಡು ಬೆಚ್ಚಿಬಿದ್ದ ಪೋಷಕರು- ಹಾವಾಗಿ ಬದಲಾದಳೆ ಯುವತಿ ?

ಉತ್ತರ ಪ್ರದೇಶ, ಫೆ. 11 : ರಾತ್ರಿ ವೇಳೆ ಮನೆಯವರೊಂದಿಗೆ ನಗು ನಗುತ್ತಾ ಮಾತನಾಡಿ, ನಿದ್ರೆ ಮಾಡಲೆಂದು ಮಗಳು ರೂಮಿಗೆ ತೆರಳಿದ್ದಾಳೆ. ಬೆಳಗ್ಗೆ ಎಷ್ಟು ಹೊತ್ತಾದರೂ ಎದ್ದೇಳದೇ ಇದ್ದಾಗ ಮನೆ ಮಂದಿ ಆತಂಕಗೊಂಡು ರೂಂ ತೆರಳಿದ್ದಾರೆ. ಬೆಡ್ ಶೀಟ್ ಹೊದ್ದು ಮಲಗಿದ ರೀತಿಯಲ್ಲಿರುವುದನ್ನು ಕಂಡು ಮನೆಮಂದಿ ಮಗಳನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ, ಮಗಳಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.! ಬೆಡ್ ಶೀಟ್ ತೆರೆದಾಗ ಅಲ್ಲಿ ಐದು ಅಡಿ ಉದ್ದದ ಹಾವಿನ ಪೊರೆಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಈ ವಿಚಿತ್ರ ಘಟನೆ ಉತ್ತರ ಪ್ರದೇಶದ ಸಿಂಗನಪುರ ಗ್ರಾಮದಲ್ಲಿ ವರದಿಯಾಗಿದೆ.

Advertisement

ಮಗಳು ಮಲಗಿದ್ದ ಹಾಸಿಗೆಯಲ್ಲಿ ಹಾವಿನ ಪೊರೆ ಹೇಗೆ ಬಂತು? ಮತ್ತು ಯುವತಿ ಎಲ್ಲಿ ನಾಪತ್ತೆಯಾದಳು? ಎಂದು ಭಯಭೀತರಾದ ಕುಟುಂಬ ಸದಸ್ಯರು ಮತ್ತು ಸ್ಥಳೀಯರು, ಆಕೆಯ ಹಾವಾಗಿ ಬದಲಾಗಿದ್ದಾಳೆ ಎಂಬ ವದಂತಿಗಳ ಕೇಳಿ ಕಣ್ಣೀರಿಟ್ಟಿದ್ದಾರೆ. ಈ ಘಟನೆ ತಮ್ಮ ಕಿವಿಗೆ ಬೀಳುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಖಾಕಿ ಪಡೆ, ಯುವತಿ ಎಲ್ಲಿಗೆ ಹೋಗಿದ್ದಾಳೆ? ಪ್ರೀತಿಸಿ ಯಾರೊಂದಿಗಾದರೂ ಓಡಿ ಹೋದಳಾ? ಎಂಬ ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಆದಾಗ್ಯೂ, ಯುವತಿ ಹಾವಾಗಿ ಬದಲಾಗಿದ್ದಾಳೆ ಎಂಬ ಸ್ಥಳೀಯರ ಹೇಳಿಕೆಯಲ್ಲಿ ಯಾವುದೇ ಸತ್ಯವಿಲ್ಲ ಎಂದು ಪೊಲೀಸರು ಖಚಿತಪಡಿಸಿದ್ದೇ ಆದರೂ ಘಟನೆ ಮಾತ್ರ ಸದ್ಯ ಉತ್ತರ ಪ್ರದೇಶದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಬೆಳಗ್ಗೆ ಯುವತಿ ತನ್ನ ರೂಮಿನಿಂದ ಎಷ್ಟೊತ್ತಾದರೂ ಹೊರಬರದಿದ್ದಾಗ, ಆಕೆಯ ಕುಟುಂಬ ಸದಸ್ಯರು ನೇರವಾಗಿ ರೂಮಿಗೆ ಹೋಗಿದ್ದಾರೆ. ಆಕೆ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ, ಹಾಸಿಗೆ ಮೇಲಿದ್ದ ಬೆಡ್​ಶೀಟ್​ ತೆರೆದು ನೋಡಿದ್ದಾರೆ. ಈ ವೇಳೆ, ಅಲ್ಲಿ ಆಕೆಯ ಬದಲಿಗೆ 5 ಅಡಿ ಉದ್ದದ ಹಾವಿನ ಪೊರೆಯನ್ನು ಕಂಡು ಒಂದು ನಿಮಿಷ ಬೆರಗಾಗಿ ಚೀರಾಡಿದ್ದಾರೆ. ಮಗಳು ಮಲಗಿದ್ದ ಹಾಸಿಗೆಯ ಮೇಲೆ ಹಾವಿನ ಚರ್ಮ ಹೇಗೆ ಬಂದಿತು? ಎಂಬ ಪ್ರಶ್ನೆ ಕುಟುಂಬ ಸದಸ್ಯರನ್ನು ತೀರ ಆತಂಕಕ್ಕೆ ದೂಡಿದೆ. ಈ ವಿಷಯ ತಿಳಿದ ಸ್ಥಳೀಯರೆಲ್ಲರೂ ಯುವತಿ ಮಲಗಿದ್ದ ಕೋಣೆಗೆ ದೌಡಾಯಿಸಿದ್ದು, ಆಶ್ಚರ್ಯ ಹಾಗೂ ಕುತೂಹಲ ವ್ಯಕ್ತಪಡಿಸಿದ್ದಾರೆ. ಕೆಲವರು ಅವಳೇ ಹಾವಾಗಿ ಬದಲಾಗಿದ್ದಾಳೆಂದು ಹೇಳಿದರೆ, ಇನ್ನೂ ಕೆಲವರು ಮನಬಂದಂತೆ ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ. ಈ ಪ್ರದೇಶದಲ್ಲಿ ಹಿಂದೆಯೂ ಹಾವುಗಳು ಕಾಣಿಸಿಕೊಂಡಿವೆ ಎಂದು ಕುಟುಂಬ ಸದಸ್ಯರು ಹೇಳಿರುವುದು ಇನ್ನೊಂದು ಅಚ್ಚರಿ ಸಂಗತಿ.

ಕುಟುಂಬಸ್ಥರು ಕಣ್ಣೀರು

ಈ ಬಗ್ಗೆ ಮಾತನಾಡಿದ ಯುವತಿಯ ಹೆತ್ತವರು, ನಮಗೆ ತುಂಬಾ ದುಃಖವಾಗಿದೆ. ಮಗಳು ಸುರಕ್ಷಿತವಾಗಿ ಹಿಂತಿರುಗಬೇಕೆಂದು ನಾವು ಕೇಳಿಕೊಳ್ಳುತ್ತೇವೆ ಎಂದಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ನಂತರ, ಅಜಿತ್ಮಲ್ ವೃತ್ತ ಅಧಿಕಾರಿ ಮನೋಜ್ ಗಂಗ್ವಾರ್ ನೇತೃತ್ವದ ಸ್ಥಳೀಯ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಚುರುಕುಗೊಳಿಸಿದ್ದಾರೆ. ತಂದೆಯ ದೂರಿನ ಆಧಾರದ ಮೇಲೆ, ಬಿಎನ್ಎಸ್ ಸೆಕ್ಷನ್ 87ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಹಿಳೆ ಹಾವಾಗಿ ಮಾರ್ಪಟ್ಟಿದ್ದಾಳೆ ಎಂಬುದು ಶುದ್ಧ ಸುಳ್ಳು. ಇಂತಹ ಮಾತುಗಳನ್ನು ಯಾರೂ ನಂಬಬಾರದು. ಹಾವಿನ ಚರ್ಮ ಮತ್ತು ಬಟ್ಟೆಗಳು ಚೆಲ್ಲಾಪಿಲ್ಲಿ ಆಗಿರುವುದು ತನಿಖೆಯಿಂದ ದಾರಿ ತಪ್ಪಿಸಲು ಅಥವಾ ಎಲ್ಲರ ಗಮನವನ್ನು ಬೇರೆಡೆಗೆ ತಿರುಗಿಸಲು ಉದ್ದೇಶಪೂರ್ವಕ ಪ್ರಯತ್ನವಾಗಿರಬಹುದು ಎಂದು ಮನೋಜ್ ಗಂಗ್ವಾರ್ ಹೇಳಿದ್ದಾರೆ. ಯುವತಿಯ ಮನೆಯಲ್ಲಿದ್ದ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿರುವ ಪೊಲೀಸರಿಗೆ, ಇದೆಲ್ಲ ಆಕೆಯದ್ದೇ ಮಾಸ್ಟರ್​ಪ್ಲ್ಯಾನ್ ಎಂಬ ಶಂಕೆ ವ್ಯಕ್ತವಾಗಿದೆ.

ಪ್ರಕರಣಕ್ಕೆ ಟ್ವಿಸ್ಟ್​!

ಮೂಲಗಳ ಪ್ರಕಾರ, ಕಾಣೆಯಾಗಿರುವ ಯುವತಿ, ಅದೇ ಗ್ರಾಮದ ಯುವಕನೊಂದಿಗೆ ಸಂಬಂಧ ಹೊಂದಿದ್ದಳು. ಹಾವಿನ ಪೊರೆಯನ್ನು ತನ್ನ ಬಟ್ಟೆಯಲ್ಲಿ ಸುತ್ತಿಟ್ಟು, ಹಾಸಿಗೆಯ ಮೇಲೆ ಇರಿಸಿ ಹೋಗಿದ್ದಾಳೆ. ಇದೆಲ್ಲವೂ ಆಕೆಯದ್ದೇ ಪ್ಲ್ಯಾನ್​. ಹೀಗೆ ಮಾಡುವುದರಿಂದ ಮನೆಯವರ ದಿಕ್ಕನ್ನು ತಪ್ಪಿಸಲು ಸುಲಭ ಎಂಬುದು ಯುವತಿಯ ಲೆಕ್ಕಾಚಾರ ಎಂದು ಗ್ರಾಮಸ್ಥರು ಮಾತನಾಡಿಕೊಂಡಿದ್ದಾರೆ. ಆದಾಗ್ಯೂ, ಪೊಲೀಸರು ಪ್ರಕರಣ ಭೇದಿಸುವಲ್ಲಿ ನಿರತರಾಗಿದ್ದು, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಹುಷಾರ್‌ – ಆರೋಗ್ಯ ಇಲಾಖೆ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಉಜಿರೆ : ಮಾರ್ಚ್ 3ರಿಂದ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನಬ್ರಹ್ಮರಥ, ಪುಷ್ಪರಥ ಸಮರ್ಪಣೆ – ಶ್ರೀ ಶರತ್ ಕೃಷ್ಣಪಡ್ವೆಟ್ನಾಯ

⚠️ Contents are protected on this website.