ಬೆಳ್ತಂಗಡಿ : ಯುವವಾಹಿನಿ (ರಿ.) ಬೆಳ್ತಂಗಡಿ ಘಟಕ ಆಶ್ರಯದಲ್ಲಿ ಯುವವಾಹಿನಿ ಮಹಿಳಾ ಸಂಚಾಲನ ಸಮಿತಿ ಬೆಳ್ತಂಗಡಿ ತಾಲೂಕು ಆತಿಥ್ಯದಲ್ಲಿ ದಶಮಾನೋತ್ಸವ ಪ್ರಯುಕ್ತ ಬೆಳ್ತಂಗಡಿ ತಾಲೂಕಿನ ಬಿಲ್ಲವ ಸಮಾಜ ಬಾಂಧವರಿಗೆ 8 ತಂಡಗಳ ಬಿಡ್ಡಿಂಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಯುವವಾಹಿನಿ ಟ್ರೋಪಿ – 2026 ಜನವರಿ 04ರಂದು ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.
ಅದೇ ರೀತಿಯಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಕೂಡಾ ನಡೆಯಲಿದೆ. ಇನ್ನು, ದಶಮಾನೋತ್ಸವ ಅಂಗವಾಗಿ ಅಶಕ್ತ ಕುಟುಂಬಗಳಿಗೆ ನೆರವಿಗಾಗಿ ಯುವವಾಹಿನಿ ದಶ ಸ್ಪಂದನ ಕಾರ್ಯಕ್ರಮಕ್ಕೆ ಕೂಡಾ ಚಾಲನೆ ದೊರಕಲಿದೆ.

