1,400 ಕೋಟಿ ರೂ. ಬಜೆಟ್ ಸಿನಿಮಾ ವಿಶ್ವದಾದ್ಯಂತ ಗಳಿಸಿದ್ದು ಕೇವಲ 6 ಕೋಟಿ ರೂ. !

ಹೈದರಾಬಾದ್‌ : ಸುಮಾರು 1,400 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಸೌದಿ ಅರೇಬಿಯಾದ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ ‘ಡಸರ್ಟ್ ವಾರಿಯರ್(Desert Warrior)’ ಗಲ್ಲಾಪೆಟ್ಟಿಗೆಯಲ್ಲಿ ಹೀನಾಯ ಸೋಲು ಕಂಡಿದ್ದು, ಬಿಡುಗಡೆಯಾದ ಬಳಿಕ ವಿಶ್ವದಾದ್ಯಂತ ಕೇವಲ 6 ಕೋಟಿ ರೂಪಾಯಿ ಗಳಿಕೆ ಮಾಡಿರುವುದು ಚಿತ್ರರಂಗದಲ್ಲಿ ಅಚ್ಚರಿಗೆ ಕಾರಣವಾಗಿದೆ.
ರೂಪರ್ಟ್ ವ್ಯಾಟ್ ನಿರ್ದೇಶನದ ಈ ಚಿತ್ರವು ಏಳನೇ ಶತಮಾನದ ಅರೇಬಿಯಾ ಹಿನ್ನೆಲೆಯನ್ನು ಒಳಗೊಂಡಿದೆ. ಹಂಝಾಲಾ ಎಂಬ ಯೋಧನ ನೆರವಿನಿಂದ ಚಕ್ರವರ್ತಿ ಕಿಸ್ತಾ ವಿರುದ್ಧ ಹೋರಾಡುವ ರಾಜಕುಮಾರ್ ಹಿಂದ್‌ನ ಕಥೆಯನ್ನು ಚಿತ್ರ ಹೇಳುತ್ತದೆ.

Advertisement

ಚಿತ್ರದಲ್ಲಿ ಹಾಲಿವುಡ್ ನಟರಾದ ಆ್ಯಂಥೋನಿ ಮ್ಯಾಕಿ, ಬೆನ್ ಕಿಂಗ್ಲಿ, ಐಶಾ ಹಾರ್ಟ್ ಹಾಗೂ ಶಾರ್ಲ್ಲೊ ಕಾಪ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸೌದಿ ಅರೇಬಿಯಾದ ಮಾಧ್ಯಮ ಸಂಸ್ಥೆ ಎಂಬಿಸಿ ಸ್ಟುಡಿಯೋಸ್ ಬೆಂಬಲದೊಂದಿಗೆ ಈ ಚಿತ್ರವನ್ನು ಜಾಗತಿಕ ಮಟ್ಟದ ಯೋಜನೆಯಾಗಿ ರೂಪಿಸಲಾಗಿತ್ತು. ‘ಡಸರ್ಟ್ ವಾರಿಯರ್’ 2025ರಲ್ಲಿ ಝೂರಿಚ್ ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿತ್ತು. ಬಳಿಕ 2026ರ ಎಪ್ರಿಲ್ 24ರಂದು ಅಮೆರಿಕಾದಾದ್ಯಂತ ಬಿಡುಗಡೆಯಾಯಿತು.

ಚಿತ್ರ ನಿರ್ಮಾಣದ ವೇಳೆ ಪ್ರತಿದಿನ 400ರಿಂದ 500 ತಂತ್ರಜ್ಞರು ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಭವ್ಯ ಮರುಭೂಮಿ ಯುದ್ಧದ ದೃಶ್ಯಗಳು ಹಾಗೂ ದೀರ್ಘಕಾಲದ ಪೋಸ್ಟ್ ಪ್ರೊಡಕ್ಷನ್ ಕೆಲಸ ಚಿತ್ರದ ವಿಶೇಷತೆಗಳಾಗಿದ್ದವು. ವಿಳಂಬ ಮತ್ತು ಮರುಚಿತ್ರೀಕರಣಗಳಿಂದ ಚಿತ್ರದ ವೆಚ್ಚವು ಸುಮಾರು 150 ದಶಲಕ್ಷ ಡಾಲರ್ ಗೆ ಏರಿಕೆಯಾಯಿತು ಎನ್ನಲಾಗಿದೆ.

ಆದರೆ, ಭಾರೀ ಹೂಡಿಕೆ ಮತ್ತು ಅಂತರರಾಷ್ಟ್ರೀಯ ತಾರಾಬಳಗ ಇದ್ದರೂ ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಯಿತು. ಜಾಗತಿಕ ಮಟ್ಟದಲ್ಲಿ ಸಮರ್ಪಕ ಪ್ರಚಾರ ನಡೆಸದಿರುವುದು ಚಿತ್ರದ ವೈಫಲ್ಯಕ್ಕೆ ಪ್ರಮುಖ ಕಾರಣ ಎಂದು ವ್ಯಾಪಾರ ತಜ್ಞರು ವಿಶ್ಲೇಷಿಸಿದ್ದಾರೆ. ಬಹುತೇಕ ಪ್ರೇಕ್ಷಕರಿಗೆ ಚಿತ್ರದ ಬಿಡುಗಡೆ ಕುರಿತ ಮಾಹಿತಿಯೇ ತಲುಪಿರಲಿಲ್ಲ ಎಂದು ಹೇಳಲಾಗಿದೆ. ಸುಮಾರು ಎರಡು ವರ್ಷಗಳ ಕಾಲ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆದಿದ್ದರಿಂದ ಚಿತ್ರದ ಮೇಲಿನ ಕುತೂಹಲ ಕುಂದಿತ್ತು ಎನ್ನಲಾಗುತ್ತಿದೆ.

ಚಿತ್ರ ವಿಮರ್ಶಕರಿಂದಲೂ ಚಿತ್ರಕ್ಕೆ ಮಿಶ್ರ ಹಾಗೂ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೋಟನ್ ಟೊಮ್ಯಾಟೋಸ್ ನಲ್ಲಿ ಕಡಿಮೆ ರೇಟಿಂಗ್ ಪಡೆದಿರುವ ಚಿತ್ರದ ಕಥನ ಶೈಲಿ ದುರ್ಬಲವಾಗಿದೆ ಹಾಗೂ ಭಾವನಾತ್ಮಕ ಆಳದ ಕೊರತೆ ಇದೆ ಎಂಬ ಟೀಕೆಗಳು ಕೇಳಿಬಂದಿವೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ  : ಸೈಕೋ ಕಿಲ್ಲರ್ ಚೇತನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ – ಬಂಟ್ವಾಳ ಪೊಲೀಸರ ವಶಕ್ಕೆ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಪ್ಲೇ ಸ್ಕೂಲ್‌ನಲ್ಲಿ ಚಡ್ಡಿಯಲ್ಲೇ ಮೂತ್ರ ವಿಸರ್ಜನೆ – 5 ವರ್ಷದ ಮಗುವಿನ ಖಾಸಗಿ ಅಂಗವನ್ನೇ ಸುಟ್ಟ ಶಿಕ್ಷಕಿ !

ಕರಾವಳಿ, ಟಾಪ್ ಸುದ್ದಿಗಳು

ಕಾರ್ಕಳ : ಅನಾರೋಗ್ಯದಿಂದ ಬಳಲುತ್ತಿರುವ ಅವಿನಾಶ್ ಪೂಜಾರಿಗೆ “ವಿಠೋಬ ರುಕ್ಮಾಯಿ ಭಜನಾ ಮಂಡಳಿ ಹಿರ್ಗಾನ” ನೆರವು

⚠️ Contents are protected on this website.