ಪ್ಲೇ ಸ್ಕೂಲ್‌ನಲ್ಲಿ ಚಡ್ಡಿಯಲ್ಲೇ ಮೂತ್ರ ವಿಸರ್ಜನೆ – 5 ವರ್ಷದ ಮಗುವಿನ ಖಾಸಗಿ ಅಂಗವನ್ನೇ ಸುಟ್ಟ ಶಿಕ್ಷಕಿ !

ವಾರಾಣಸಿ, ಜು. 27 : ಏನೂ ಅರಿಯದ ಕಂದನೊಬ್ಬ ತನಗರಿವಿಲ್ಲದೆ ಪ್ಲೇ ಸ್ಕೂಲ್ ನಲ್ಲಿ ಚಡ್ಡಿಯಲ್ಲೇ ಮೂತ್ರ ವಿಸರ್ಜನೆ ಮಾಡಿದ್ದಾನೆ. ಮಾನವೀಯತೆ ಮರೆತ ಶಿಕ್ಷಕಿಯೊಬ್ಬಳು ಆ ಮಗುವಿನ ಖಾಸಗಿ ಅಂಗವನ್ನೇ ಸುಟ್ಟು ಹಾಕಿರುವ ಘೋರ ದುರಂತವೊಂದು ವರದಿಯಾಗಿದೆ.

Advertisement

ಪ್ಲೇ ಸ್ಕೂಲ್‌ನಲ್ಲಿ ಚಡ್ಡಿಯಲ್ಲೇ ಮೂತ್ರ ವಿಸರ್ಜನೆ ಮಾಡಿದ ಎಂದು ಶಾಲಾ ಶಿಕ್ಷಕಿಯೊಬ್ಬರು ಐದು ವರ್ಷದ ಮಗುವಿನ ಖಾಸಗಿ ಅಂಗವನ್ನೇ ಬಿಸಿ ಚಾಕುವಿನಿಂದ ಸುಟ್ಟು ಕ್ರೌರ್ಯ ಮೆರೆದಿರುವ ಘಟನೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಬೆಳಕಿಗೆ ಬಂದಿದೆ.

ನ್ಯಾಯವಾದಿಯೊಬ್ಬರ 5 ವರ್ಷದ ಮಗ ವಾರಾಣಸಿಯಲ್ಲಿರುವ ಪ್ಲೇ ಸ್ಕೂಲ್’ಗೆ ಹೋಗುತ್ತಿದ್ದು, ಜುಲೈ 24 ರಂದು ತರಗತಿಯಲ್ಲಿದ್ದಾಗ ಶೌಚಾಲಯಕ್ಕೆ ಹೋಗಲು ಶಿಕ್ಷಕಿಯ ಬಳಿ ಅನುಮತಿ ಕೇಳಿದ್ದಾನೆ. ಆದರೆ ಶಿಕ್ಷಕಿ ಅನುಮತಿ ನೀಡದ ಕಾರಣ, ಮಗು ಚಡ್ಡಿಯಲ್ಲೇ ಮೂತ್ರ ವಿಸರ್ಜನೆ ಮಾಡಿಕೊಂಡಿದೆ.

ಇದರಿಂದ ಆಕ್ರೋಶಗೊಂಡ ಶಿಕ್ಷಕಿ, ಮಗುವನ್ನು ಮತ್ತೊಂದು ಕೊಠಡಿಗೆ ಎಳೆದೊಯ್ದು ಗ್ಯಾಸ್ ಸ್ಟವ್ ಹಚ್ಚಿ ಚಾಕುವನ್ನು ಕೆಂಪಗೆ ಕಾಯಿಸಿ, ಮಗುವಿನ ಖಾಸಗಿ ಭಾಗವನ್ನು ಸುಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ, ಮಗುವಿನ ಮೇಲೆ ಹಲ್ಲೆ ನಡೆಸಿ, ಈ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ಬೆದರಿಕೆ ಹಾಕಿದ್ದಾರೆ.

ಮನೆಗೆ ಮರಳಿದ ಮಗು ನೋವಿನಿಂದ ಅಳುತ್ತಾ ಪೋಷಕರಿಗೆ ವಿಚಾರ ತಿಳಿಸಿದೆ. ತಾಯಿ ಪರಿಶೀಲಿಸಿದಾಗ ಖಾಸಗಿ ಅಂಗದ ಮೇಲಿನ ಗಾಯ ಕಂಡುಬಂದಿದೆ. ಈ ಕುರಿತು ವಿಚಾರಿಸಲು ಶಿಕ್ಷಕಿಯ ಮೊಬೈಲ್ ಗೆ ಕರೆ ಮಾಡಿದರೆ ಶಿಕ್ಷಕಿ ಕರೆ ಸ್ವೀಕರಿಸಲೇ ಇಲ್ಲ. ಬಳಿಕ ಮಾರನೇ ದಿನ ಘಟನೆ ಕುರಿತು ಪ್ರಶ್ನಿಸಲು ಹೋದ ಮಗುವಿನ ಪೋಷಕರಿಗೆ ಶಾಲೆಯ ಪ್ರಿನ್ಸಿಪಾಲ್ ಹಾಗೂ ಮ್ಯಾನೇಜ್‌ಮೆಂಟ್ ಬೆದರಿಸಿ ವಾಪಾಸ್ ಕಳುಹಿಸಿದ್ದಾರೆ ಎನ್ನಲಾಗಿದೆ.


ಘಟನೆಯಿಂದ ಬೇಸತ್ತ ಮಗುವಿನ ತಂದೆ ಲಾಲ್‌ಪುರ್-ಪಾಂಡೇಪುರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಶಿಕ್ಷಕಿ ಹಾಗೂ ಶಾಲಾ ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ  : ಸೈಕೋ ಕಿಲ್ಲರ್ ಚೇತನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ – ಬಂಟ್ವಾಳ ಪೊಲೀಸರ ವಶಕ್ಕೆ

ಕರಾವಳಿ, ಟಾಪ್ ಸುದ್ದಿಗಳು

ಕಾರ್ಕಳ : ಅನಾರೋಗ್ಯದಿಂದ ಬಳಲುತ್ತಿರುವ ಅವಿನಾಶ್ ಪೂಜಾರಿಗೆ “ವಿಠೋಬ ರುಕ್ಮಾಯಿ ಭಜನಾ ಮಂಡಳಿ ಹಿರ್ಗಾನ” ನೆರವು

ಟಾಪ್ ಸುದ್ದಿಗಳು, ರಾಜ್ಯ / ದೇಶ

ರಾಜ್ಯದ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್‌ಐವಿ ಪರೀಕ್ಷೆ – ಆರೋಗ್ಯ ಇಲಾಖೆಯಿಂದ ಕ್ರಮ !

⚠️ Contents are protected on this website.