ಬಂಟ್ವಾಳ : ಸಜಿಪದಲ್ಲಿ ಕಾಣೆಯಾದ ರಸ್ತೆ -ಬಂಟ್ವಾಳ ಶಾಸಕರು, ಅಧಿಕಾರಿಗಳು ಮೌನ

Advertisement

ಬಂಟ್ವಾಳ : ತಾಲೂಕಿನ ಸಜೀಪದ ರಸ್ತೆ ಕಾಣೆಯಾಗಿದೆ ವಾಹನ ಸವಾರರು ರಸ್ತೆ ಎಲ್ಲಿದೆ ಎಂದು ಹುಡುಕಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಹಿಂದೆಯೂ ನಮ್ಮ ಧ್ವನಿ ನ್ಯೂಸ್ ಈ ಸಾವಿನ ಗುಂಡಿಗಳಿರುವ ರಸ್ತೆಯ ಬಗ್ಗೆ ವರದಿ ಮಾಡಿದ್ದು, ತಕ್ಷಣ ಮರುದಿನವೇ ನಿದ್ದೆಯಲ್ಲಿದ್ದ ಅಧಿಕಾರಿಗಳು ಎದ್ದು ಬಂದು ಕಾಟಾಚಾರಕ್ಕೆ ರಸ್ತೆ ಗುಂಡಿ ಮುಚ್ಚಿಸಿದ್ದಾರೆ ಆದರೆ ಎರಡೇ ದಿನಕ್ಕೆ ಅದು ಎದ್ದು ಹೋಗಿದೆ.

Advertisement

ಇದೀಗ, ರಸ್ತೆಗಳು ಮಾಯವಾಗಿದ್ದು ಬಹುದೊಡ್ಡ ಗುಂಡಿಗಳು ಮಾತ್ರ ಕಾಣಸಿಗುತ್ತಿದೆ. ಎಷ್ಟೇ ಬಾರಿ ಮನವಿ ಮಾಡಿದರೂ ಬಂಟ್ವಾಳ ಶಾಸಕರು ಮತ್ತು ಅಧಿಕಾರಿಗಳು ಮಾತ್ರ ನಿದ್ದೆಯಲ್ಲಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಬದಿಯಲ್ಲಿನ ನಿವಾಸಿಗಳು, ಸ್ಥಳೀಯರು ರಸ್ತೆಯಿಂದ ಬರುವ ಧೂಳಿನಿಂದ ಕಂಗಲಾಗಿದ್ದಾರೆ. ಧೂಳು ಕಡಿಮೆಯಾಗಲು ಪ್ರತೀ ದಿನ ತಾವೇ ಸ್ವತ: ರಸ್ತೆಗೆ ನೀರು ಸಿಂಪಡಿಸುವ ಕೆಲಸ ಮಾಡುತ್ತಿದ್ದಾರೆ.

Advertisement

ಒಟ್ಟಾರೆಯಾಗಿ ಮಳೆ ನಿಂತ ಮೇಲೆ ಎಲ್ಲವನ್ನು ಸರಿ ಮಾಡುತ್ತೇವೆ ಎಂದಿದ್ದ ಅಧಿಕಾರಿಗಳು ಮತ್ತು ಶಾಸಕರು ಎಲ್ಲಿದ್ದಾರೆ ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ