ಪ್ರಧಾನಿಯವರ ಪೋಸ್ಟ್‌ಗೆ ನಿರ್ಬಂಧ ವಿವಾದ – ಫೇಸ್‌ಬುಕ್ ವಿರುದ್ಧ ಬಿಜೆಪಿ ಆಕ್ರೋಶ !

EVIAN-LES-BAINS, FRANCE - JUNE 16: India's Prime Minister Narendra Modi attends a bilateral meeting with British Prime Minister Keir Starmer on the sidelines of the G7 summit on June 16, 2026 in Evian-les-Bains, France. Leaders from the Group of 7 (G7) countries convened in Evian, France, near the Swiss border, for their annual summit to discuss challenges to peace and security for Ukraine and Europe, the situation in the Middle East, and other geopolitical issues. (Photo by Isabel Infantes - Pool/Getty Images)

ನವದೆಹಲಿ, ಜು. 28 : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು ಹಾಗೂ ಹೊಸ ಕಾನೂನು ಕುರಿತು ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡಿದ್ದ ಸಾಮಾಜಿಕ ಜಾಲತಾಣದ ಪೋಸ್ಟ್‌ ಭಾರತದಲ್ಲಿ ವೀಕ್ಷಣೆಗೆ ಲಭ್ಯವಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಹೊಸ ವಿವಾದ ಭುಗಿಲೆದ್ದಿದೆ. ಈ ಕುರಿತು ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಫೇಸ್‌ಬುಕ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಭಾರತದ ಡಿಜಿಟಲ್ ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ವಿದೇಶಿ ಸಾಮಾಜಿಕ ಜಾಲತಾಣಗಳು ಹಸ್ತಕ್ಷೇಪ ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ.

Advertisement

ಬಗ್ಗಾ ಅವರು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ, “ಭಾರತದ ಪ್ರಧಾನಮಂತ್ರಿಯವರ ಅಧಿಕೃತ ಪೋಸ್ಟ್‌ನ್ನೇ ಭಾರತೀಯರಿಗೆ ಕಾಣದಂತೆ ಮಾಡುವ ಅಧಿಕಾರವನ್ನು ಫೇಸ್‌ಬುಕ್‌ಗೆ ನೀಡಿದವರು ಯಾರು? ಇದು ಕೇವಲ ಕಂಟೆಂಟ್ ನಿಯಂತ್ರಣವಲ್ಲ, ಭಾರತದ ಪ್ರಜಾಪ್ರಭುತ್ವದ ಮೇಲಿನ ಗಂಭೀರ ಹಸ್ತಕ್ಷೇಪವಾಗಿದೆ” ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಪ್ರಧಾನಿ ಮೋದಿ ಅವರ ಪೋಸ್ಟ್‌ಗೆ ನಿರ್ಬಂಧ ವಿಧಿಸಲು ಯಾವ “ಕಾನೂನುಬದ್ಧ ವಿನಂತಿ” ಅಥವಾ ಆದೇಶ ಆಧಾರವಾಗಿತ್ತು ಎಂಬುದನ್ನು ಫೇಸ್‌ಬುಕ್ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ವಿವಾದಕ್ಕೆ ಕಾರಣವಾದ ಪೋಸ್ಟ್‌ನಲ್ಲಿ, ದೇಶಾದ್ಯಂತ ನಡೆದಿದ್ದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ‘ಸಾರ್ವಜನಿಕ ಪರೀಕ್ಷೆಗಳ (ತಿದ್ದುಪಡಿ) ಮಸೂದೆ–2026’, ಪರೀಕ್ಷಾ ಅಕ್ರಮಗಳ ವಿರುದ್ಧ ಕೈಗೊಂಡಿರುವ ಕಠಿಣ ಕ್ರಮಗಳು ಹಾಗೂ ನಂದನ್ ನಿಲೇಕಣಿ ನೇತೃತ್ವದ ಉನ್ನತ ಮಟ್ಟದ ಕಾರ್ಯಪಡೆಯ ರಚನೆ ಕುರಿತು ಪ್ರಧಾನಿ ಮೋದಿ ವಿವರಿಸಿದ್ದರು.

ಭಾರತದಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯಡಿ ಸರ್ಕಾರ ಅಥವಾ ಸಂಬಂಧಿತ ಪ್ರಾಧಿಕಾರಗಳ ಕಾನೂನುಬದ್ಧ ಆದೇಶದ ಮೇರೆಗೆ ಕೆಲವು ಆನ್‌ಲೈನ್ ವಿಷಯಗಳಿಗೆ ನಿರ್ಬಂಧ ವಿಧಿಸಲು ಅವಕಾಶವಿದೆ. ಆದರೆ ದೇಶದ ಪ್ರಧಾನಿಯವರ ಅಧಿಕೃತ ಪೋಸ್ಟ್‌ ಭಾರತದಲ್ಲೇ ಲಭ್ಯವಿಲ್ಲ ಎಂಬ ಆರೋಪ ಇದೀಗ ರಾಜಕೀಯ ಹಾಗೂ ಕಾನೂನು ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚಿನ ದಿನಗಳಲ್ಲಿ ಪರೀಕ್ಷಾ ಅಕ್ರಮಗಳು, ಸಾಮಾಜಿಕ ಜಾಲತಾಣಗಳ ಹೊಣೆಗಾರಿಕೆ ಹಾಗೂ ಡಿಜಿಟಲ್ ನಿಯಂತ್ರಣ ಕುರಿತ ಚರ್ಚೆಗಳು ತೀವ್ರಗೊಂಡಿರುವ ಸಂದರ್ಭದಲ್ಲೇ ಈ ಬೆಳವಣಿಗೆ ಮತ್ತಷ್ಟು ಗಮನ ಸೆಳೆದಿದೆ. ಈ ಕುರಿತು ಫೇಸ್‌ಬುಕ್ (ಮೆಟಾ) ಅಥವಾ ಕೇಂದ್ರ ಸರ್ಕಾರದಿಂದ ಅಧಿಕೃತ ಸ್ಪಷ್ಟನೆ ಇನ್ನೂ ಪ್ರಕಟವಾಗಿಲ್ಲ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಕೃಷಿಕ ಕೃಷ್ಣಪ್ಪ ಕುಲಾಲ್ ಅಂತ್ಯಕ್ರಿಯೆಯಲ್ಲಿ ಪರಿಸರ ಕಾಳಜಿ – ಮೃತ ಪ್ರಕೃತಿ ಪ್ರೀತಿ ಜೀವಂತವಾಗಿರಿಸಲು ಗಿಡ ವಿತರಣೆ !

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ  : ಸೈಕೋ ಕಿಲ್ಲರ್ ಚೇತನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ – ಬಂಟ್ವಾಳ ಪೊಲೀಸರ ವಶಕ್ಕೆ

⚠️ Contents are protected on this website.