₹904 ಕೋಟಿ ವಂಚನೆ : ಬಿಗ್ ಬಜಾರ್ ಮಾಲೀಕ ಕಿಶೋರ್ ವಿರುದ್ಧ FIR ದಾಖಲಿಸಿದ ಸಿಬಿಐ !

ಮುಂಬೈ, ನ. 07 : 904.32 ಕೋಟಿ ರೂ. ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಜಾರ್ ಮಾಲೀಕ, ಖ್ಯಾತ ಉದ್ಯಮಿ ಕಿಶೋರ್ ಬಿಯಾನಿ ಮತ್ತು ಫ್ಯೂಚರ್ ರಿಟೇಲ್ ಲಿಮಿಟೆಡ್ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.

ಫ್ಯೂಚರ್ ಗ್ರೂಪ್‌ನ ಸಂಸ್ಥಾಪಕ ಕಿಶೋರ್ ಬಿಯಾನಿ, ಮಾರುಕಟ್ಟೆ ನಿಯಂತ್ರಕರು, ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಸಾಲದಾತರಿಂದ ಹಲವಾರು ಹಣಕಾಸು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಈ ಪ್ರಕರಣದಲ್ಲಿ, ಕಿಶೋರ್ ಬಿಯಾನಿ ಅವರ ಸಹೋದರ ರಾಕೇಶ್ ಬಿಯಾನಿ ವಿರುದ್ಧವೂ ಸಿಬಿಐ (CBI) ಪ್ರಕರಣ ದಾಖಲಿಸಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

“ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಂಬೈನಲ್ಲಿರುವ ‘ಸ್ಟ್ರೆಸ್ಡ್ ಅಸೆಟ್ಸ್ ಮ್ಯಾನೇಜ್‌ಮೆಂಟ್ ಬ್ರಾಂಚ್-III’ ನೀಡಿದ ದೂರಿನ ಮೇರೆಗೆ, ಸಿಬಿಐ (CBI) ಪ್ರಕರಣ ದಾಖಲಿಸಿದೆ.

ಬಿಗ್ ಬಜಾರ್, ಫುಡ್ ಬಜಾರ್, ಎಫ್‌ಬಿಬಿ (ಫ್ಯಾಷನ್ ಅಟ್ ಬಿಗ್ ಬಜಾರ್) ಮತ್ತು ಸೆಂಟ್ರಲ್ (ಲೈಫ್‌ಸ್ಟೈಲ್ ಸ್ಟೋರ್‌ಗಳು) ಫ್ಯೂಚರ್ ರಿಟೇಲ್ ಗುಂಪಿನ ಭಾಗವಾಗಿದ್ದವು.

Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ :  ಟೆಂಪೋ ಹಾಗೂ 2 ದ್ವಿಚಕ್ರ ವಾಹನಗಳ ನಡುವೆ ಸರಣಿ ಅಪಘಾತ – ಸ್ಕೂಟ‌ರ್ ಸವಾರ ಸಾವು

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಉಜಿರೆ : ಲಕ್ಷ್ಮಿ ಇಂಡಸ್ಟ್ರೀಸ್ ಕನಸಿನ ಮನೆ ಇವರ ನೂತನ ಉತ್ಪನ್ನ ನೂತನ ತಂತ್ರಜ್ಞಾನದ “ಲಕ್ಷ್ಮೀದ್ವಾರ” ಲೋಕಾರ್ಪಣೆ

ಟಾಪ್ ಸುದ್ದಿಗಳು

ಬೆಳ್ತಂಗಡಿ : ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ವತಿಯಿಂದ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ 7ನೇ ವರ್ಷದ ದೀಪಾವಳಿ ದೋಸೆ ಹಬ್ಬ-2026, ಸಹಸ್ರಾರು ಜನರು ಭಾಗಿ !