ಉಜಿರೆ : ಲಕ್ಷ್ಮಿ ಇಂಡಸ್ಟ್ರೀಸ್ ಕನಸಿನ ಮನೆ ಇವರ ನೂತನ ಉತ್ಪನ್ನ ನೂತನ ತಂತ್ರಜ್ಞಾನದ “ಲಕ್ಷ್ಮೀದ್ವಾರ” ಲೋಕಾರ್ಪಣೆ

ಉಜಿರೆ, ನ. 10 : ಸವಾಲುಗಳನ್ನು ಎದುರಿಸಿ ಮುನ್ನಡೆದರೆ ಭವಿಷ್ಯ ಉಜ್ವಲಗೊಳ್ಳಲು ಸಾಧ್ಯವಿದೆ. ಸ್ಪರ್ಧಾತ್ಮಕ ಯುಗದಲ್ಲಿ ಬದಲಾವಣೆ ಅನಿವಾರ್ಯ. ಉತ್ಪನ್ನಗಳ ಗುಣಮಟ್ಟ, ಮಾರುಕಟ್ಟೆ ಹಾಗೂ ಸೇವೆಯು ಅಗತ್ಯ. ಈ ನಿಟ್ಟಿನಲ್ಲಿ ಮೋಹನ್ ಕುಮಾರ್ ಅವರು ಪರಿಚಯಿಸಿರುವ ನೂತನ ಉತ್ಪನ್ನಗಳು ಹೊಸ ಕಟ್ಟಡಗಳಿಗೆ ಅನುಕೂಲ ನೀಡಲಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಭಾನುವಾರ ಉಜಿರೆಯ ಲಕ್ಷ್ಮಿ ಇಂಡಸ್ಟ್ರೀಸ್ ಕನಸಿನ ಮನೆ ಇವರ ನೂತನ ಉತ್ಪನ್ನಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಉದ್ಯಮ ಬೆಳೆಯಲು ಅವಕಾಶಗಳನ್ನು ಬಳಸಿಕೊಳ್ಳುವ ಜತೆ ಉತ್ತಮ ಸಿಬ್ಬಂದಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ವ್ಯವಹಾರ ನಡೆಸುವಾಗ ಗ್ರಾಹಕರ ಬಗ್ಗೆಯೂ ಉತ್ತಮ ಚಿಂತನೆ ಇರಬೇಕು ಎಂದು ಹೇಳಿದರು.

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಮಾತನಾಡಿ ಉದ್ಯಮ ಬೆಳೆಯಲು ವೈಯಕ್ತಿಕ ಶಿಸ್ತು, ದಕ್ಷತೆ, ಉದ್ಯಮಶೀಲತೆ, ವಿಶ್ವಾಸಕ್ಕೆ ತೆಗೆದುಕೊಳ್ಳುವ ಮನೋಭಾವನೆ ಇರಬೇಕು. ಮನುಷ್ಯ ಶ್ರೇಷ್ಠನಾಗುವುದು ತನ್ನವರೊಂದಿಗೆ ಇಡೀ ಸಮಾಜಕ್ಕೆ ಆಧಾರ ಸ್ತಂಭವಾಗುವ ಗುಣ ಇದ್ದಾಗ ಮಾತ್ರ ಎಂದು ಹೇಳಿದರು.


ಮಾಜಿ ಎಂಎಲ್ ಸಿ ಪ್ರತಾಪ ಸಿಂಹ ನಾಯಕ್ ಮಾತನಾಡಿ ಕಿರಿಯರು ಉತ್ತಮ ಜೀವನ ರೂಪಿಸಿಕೊಳ್ಳಲು ಹಿರಿಯರ ಮಾರ್ಗದರ್ಶನ ಅತಿ ಅಗತ್ಯ. ಎಲ್ಲಾ ಉತ್ತಮ ಕೆಲಸಗಳು ನಾವು ದೇಶಕ್ಕೆ ನೀಡುವ ಕೊಡುಗೆಯಾಗುತ್ತವೆ. ಶ್ರಮಕ್ಕೆ ಉತ್ತಮ ಫಲಿತಾಂಶ ಇದ್ದೇ ಇದೆ ಎಂದರು.

ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕ ಕೆ.ಮೋಹನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ನಾನು ಕನಸುಗಳನ್ನು ಹೊಂದಿರುವ ವ್ಯಕ್ತಿ. ನನ್ನ ಕನಸುಗಳು ನನಸಾಗಲು ಅದರ ಹಿಂದೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಕುಟುಂಬದ ಮಾರ್ಗದರ್ಶನ ಶಕ್ತಿಯಾಗಿದೆ. 38 ವರ್ಷಗಳಿಂದ ನಡೆಯುತ್ತಿರುವ  ಉದ್ಯಮವು ರಾಜ್ಯದಲ್ಲದೆ ಕೇರಳ, ತಮಿಳುನಾಡು ಹಾಗೂ ಇತರರ ರಾಜ್ಯಗಳ ವರೆಗೆ ಇದ್ದು ಇದನ್ನು ಇನ್ನಷ್ಟು ವಿಸ್ತರಿಸುವ ಯೋಜನೆ ಇದೆ. ಮರ,ಗಿಡ, ಪರಿಸರ ಸಂರಕ್ಷಣೆಯ ದೃಷ್ಟಿಯಲ್ಲಿ ಮರಗಳ ಬಳಕೆ ಇಲ್ಲದೆ ಮನೆ ಕಟ್ಟಲು ಬೇಕಾಗುವ ಅಗತ್ಯ ಸಾಮಗ್ರಿಗಳನ್ನು ನಿರ್ಮಿಸಲು ಮುಂದಾಗಿದ್ದೇವೆ ಎಂದರು.

ಉದ್ಯಮಿ ಶಶಿಧರ್ ಶೆಟ್ಟಿ ಬರೋಡ, ಎಸಿಸಿಇ (ಐ) ಬೆಳ್ತಂಗಡಿ ಸೆಂಟರ್ ನ ಚೇರ್ಮನ್ ಸುರೇಶ್ ಬಂಗೇರ ಶುಭ ಹಾರೈಸಿದರು.

ಲೀಲಾವತಿ ರಾಜು ಮೇಸ್ತ್ರಿ, ರೇಷ್ಮಾ ಮೋಹನ್ ಕುಮಾರ್, ಮೌಲ್ಯ ಲಕ್ಷ್ಮೀ, ಮಾನ್ವಿ ಲಕ್ಷ್ಮಿ ಉಪಸ್ಥಿತರಿದ್ದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.

ನೂತನ ತಂತ್ರಜ್ಞಾನದೊಂದಿಗೆ ರಚಿಸಲಾಗಿದೆ “ಲಕ್ಷ್ಮೀದ್ವಾರ”

ಮರ, ಸಿಮೆಂಟ್, ಫೈಬರ್ ನ ಕಿಟಕಿ, ದಾರಂದ,ಬಾಗಿಲು ಮೊದಲಾದ ಕಟ್ಟಡ ಕಟ್ಟುವ ವಸ್ತುಗಳಿವೆ. ಇವುಗಳ ಬಳಕೆಗೆ ಬದಲಾಗಿ ಇತರ ಉತ್ಪನ್ನಗಳ ಮೂಲಕ ಇವುಗಳನ್ನು ತಯಾರಿಸುವ ವಿಶಿಷ್ಟವಾದ ಲಕ್ಷ್ಮೀದ್ವಾರ ಎಂಬ ಯೋಜನೆ ರೂಪಿಸಲಾಗಿದೆ. ಪರಿಸರ ಸ್ನೇಹಿಯಾಗಿರುವ ಈ ಉತ್ಪನ್ನಗಳು ಒಂದು ಶತಮಾನದ ಬಾಳ್ವಿಕೆಯನ್ನು ಹೊಂದಿದೆ. ಇದರ ಗುಣಮಟ್ಟವು ಉತ್ತಮವಾಗಿದ್ದು ಇವುಗಳ ಜೋಡಣೆಯು ಸುಲಭವಾಗಿದೆ. ಇವುಗಳನ್ನು ನೂತನ ತಂತ್ರಜ್ಞಾನದೊಂದಿಗೆ ರಚಿಸಲಾಗಿದೆ.

Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ :  ಟೆಂಪೋ ಹಾಗೂ 2 ದ್ವಿಚಕ್ರ ವಾಹನಗಳ ನಡುವೆ ಸರಣಿ ಅಪಘಾತ – ಸ್ಕೂಟ‌ರ್ ಸವಾರ ಸಾವು

ಟಾಪ್ ಸುದ್ದಿಗಳು

ಬೆಳ್ತಂಗಡಿ : ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ವತಿಯಿಂದ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ 7ನೇ ವರ್ಷದ ದೀಪಾವಳಿ ದೋಸೆ ಹಬ್ಬ-2026, ಸಹಸ್ರಾರು ಜನರು ಭಾಗಿ !

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : ತಾಯಿ ಮತ್ತು ಶಿಶು ಮರಣ ಪ್ರಮಾಣ ಶೂನ್ಯ, ಲೇಡಿಗೋಶನ್ ಆಸ್ಪತ್ರೆಗೆ ರಾಜ್ಯ ಪ್ರಶಸ್ತಿ ದೊರೆತಿರುವುದು ಸಂತಸದ ವಿಚಾರ – ಸಚಿವ ಯು.ಟಿ. ಖಾದರ್