ಪಾಟ್ನಾ : ಬಿಹಾರದಲ್ಲಿ ಭರ್ಜರಿಯಾಗಿ ಜಯ ದಾಖಲಿಸಿರುವ ಬಿಜೆಪಿ ಸರ್ಕಾರ ರಚಿಸಿದೆ. ಇದೀಗ ಬಿಹಾರ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಹಿರಿಯ ಬಿಜೆಪಿ ನಾಯಕ ಪ್ರೇಮ್ ಕುಮಾರ್ ಅವರು ಮಂಗಳವಾರ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಸ್ಪೀಕರ್ ಹುದ್ದೆಗೆ ಅವರ ಹೆಸರನ್ನು ಏಕೈಕ ಅಭ್ಯರ್ಥಿಯಾಗಿ ಸೂಚಿಸಲಾಗಿತ್ತು ಎಂದು ಹಂಗಾಮಿ ಸ್ಪೀಕರ್ ನರೇಂದ್ರ ನಾರಾಯಣ್ ಯಾದವ್ ಸದನಕ್ಕೆ ತಿಳಿಸಿದರು. ಬಳಿಕ ಧ್ವನಿ ಮತದಾನದ ಮೂಲಕ ಪ್ರೇಮ್ ಕುಮಾರ್ ಅವರ ಆಯ್ಕೆಯನ್ನು ಸರ್ವಾನುಮತದಿಂದ ಘೋಷಿಸಲಾಯಿತು.

