ಬೆಳ್ತಂಗಡಿ : ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕುಂದುಕೊರತೆ ಸಭೆ – ಕಾರ್ಮಿಕ ಸಂಕಷ್ಟಕ್ಕೆ ಪರಿಹಾರಕ್ಕೆ ಅಧಿಕಾರಿಗೆ ಸೂಚಿಸಿದ ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ, ಫೆ. 24 : ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ವಿದ್ಯಾರ್ಥಿ ವೇತನ ವೃದ್ಧಾಪ್ಯ ಪಿಂಚಣಿ, ಮರಣ ಮತ್ತು ಇತರ ಸಹಾಯಧನಗಳ ಪಾವತಿ ಆಗದ ದೂರಿನ ಕುರಿತು ಕಾರ್ಮಿಕರ ಕುಂದು ಕೊರತೆ ಸಭೆಯನ್ನು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿತ್ತು. ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್ ಹಾಗೂ ಬೆಳ್ತಂಗಡಿ ಪ್ರಭಾರ ಕಾರ್ಮಿಕ ನಿರೀಕ್ಷಕರಾದ ವೀರೇಂದ್ರ ಕಂಬಾರ್ ಅವರು ಈ ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

ಹಲವಾರು ಕಾರ್ಮಿಕರು ವ್ರದ್ಧಾಪ್ಯ ಪಿಂಚಣಿ, ಮದುವೆ ,ಮರಣ ಸಹಾಯಧನ, ಕುಟುಂಬ ಪಿಂಚಣಿ ಹಾಗೂ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ಬರದಿರುವ ಕುರಿತು ಕಾರ್ಮಿಕರು ಶಾಸಕರಲ್ಲಿ ದೂರು ನೀಡಿದರು. ಈ ಸಂದರ್ಭ ವಿವರವಾಗಿ ಶಾಸಕರು ಈ ಬಗ್ಗೆ ಮಾಹಿತಿ ಪಡೆದುಕೊಂಡು ಕಾರ್ಮಿಕ ಅಧಿಕಾರಿಗಳಿಗೆ ಸೂಕ್ತ ಪರಿಹಾರವನ್ನು ಮಾಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಬಿಎಂಎಸ್ ನ ರಾಜ್ಯ ಕಾರ್ಯದರ್ಶಿ ಜೈ ರಾಜ್ ಸಾಲಿಯಾನ್ ಕಾನರ್ಪ, ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್, ತಾಲೂಕು ಅಧ್ಯಕ್ಷರಾದ ಉದಯ ಬಿ.ಕೆ, ತಾಲೂಕು ಸಂಯೋಜಕರಾದ ಶಾಂತಪ್ಪ ಕಲ್ಮಂಜ, ಬಿಎಂಎಸ್ ಪ್ರಮುಖರಾದ ಪ್ರಮುಖರಾದ ಗಣೇಶ್ ಪೂಜಾರಿ ಪೆರಾಡಿ, ಉದಯ್ ಕುಮಾರ್ ಉಜಿರೆ ಹಾಗೂ ಇನ್ನಿತರ ಕಾರ್ಮಿಕರು ಉಪಸ್ಥಿತರಿದ್ದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ, ಬೆಳ್ತಂಗಡಿ

ಉಪ್ಪಿನಂಗಡಿ : ಲಾವಣ್ಯ ಹತ್ಯೆಗೆ ಚೇತನ್ ತಲ್ವಾರ್ ಖರೀದಿಸಿದ್ದು ಉಪ್ಪಿನಂಗಡಿ ಕೃಷಿ ಕೇಂದ್ರದಿಂದ !

ಟಾಪ್ ಸುದ್ದಿಗಳು

ಮುಂಬೈ : ಭಾರತದಲ್ಲಿ ಸದ್ದು ಮಾಡುತ್ತಿದೆ “ರಾಮಾಯಣ” ಸಿನಿಮಾ – ಯಶ್ ಪಾತ್ರಕ್ಕೆ ಪಾತ್ರಕ್ಕೆ ಕನ್ನಡಿಗರು ಫಿದಾ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಧರ್ಮಸ್ಥಳ : ಬುರುಡೆ ಪ್ರಕರಣ – ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಅಸ್ಥಿಪಂಜರ ಪುರುಷರದ್ದು ! ಎಫ್ ಎಸ್ ಎಲ್ ವರದಿಯಲ್ಲಿ ದೃಢ

⚠️ Contents are protected on this website.