ಬಂಟ್ವಾಳ : 100ನೇ ವರ್ಷದ ಶಾರದಾ ಪೂಜಾ ಮಹೋತ್ಸವ –ಶತಮಾನೋತ್ಸವದ ಅಧ್ಯಕ್ಷರಾಗಿ ಶ್ರೀ ನಗ್ರಿಗುತ್ತು ವಿವೇಕ್ ಶೆಟ್ಟಿ ಆಯ್ಕೆ – ಸಜೀಪ ದಸರಾ ಎಂದು ನಾಮಕರಣ

ಬಂಟ್ವಾಳ : ತಾಲೂಕಿನ ಸಜೀಪ ಮೂಡ ಗ್ರಾಮದ ಸುಭಾಷ್ ನಗರದಲ್ಲಿ ಸುಮಾರು  99 ವರ್ಷ  ಶಾರದಾ ಪೂಜಾ ಮಹೋತ್ಸವ ಕಾರ್ಯಕ್ರಮವು ಅದ್ಧೂರಿಯಾಗಿ ನಡೆದುಕೊಂಡು ಬಂದಿದ್ದು ದಿ.ಸದಾನಂದ ಪೂಂಜರ ನೇತೃತ್ವದಲ್ಲಿ ಶುರುವಾದ ಈ ಶಾರದಾ ಪೂಜಾ ಕಾರ್ಯಕ್ರಮವು 99 ವರ್ಷಗಳನ್ನು ಮುಗಿಸಿ ಇದೀಗ 100ನೇ ವರ್ಷಕ್ಕೆ ಹೆಜ್ಜೆಯನ್ನು ಇಟ್ಟಿದೆ.

ಈ ನಿಟ್ಟಿನಲ್ಲಿ ಇಂದು ಹೊಸ- ಹೊಸ ಯೋಚನೆ ಹಾಗೂ ಯೋಜನೆಯ ಜೊತೆಗೆ ಸಮಾಲೋಚನಾ  ಸಭೆಯನ್ನು ನಡೆಸಲಾಯಿತು.

Advertisement



ಶತಮಾನೋತ್ಸವ ಕಾರ್ಯಕ್ರಮವನ್ನು 5ದಿನಗಳ ಕಾಲ ನಡೆಸುವುದಾಗಿ ಇಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು ಜೊತೆಗೆ ಸಜೀಪಮೂಡ ಶಾಲೆಗೆ ದೊಡ್ಡಮಟ್ಟದಲ್ಲಿ ಏನಾದರೂ ಕೊಡುಗೆಯನ್ನು ನೀಡಬೇಕೆಂದು ಸಭೆಯಲ್ಲಿ ಚರ್ಚೆಯನ್ನು ಕೂಡ ಮಾಡಲಾಯಿತು. ಜೊತೆಗೆ ಶತಮಾನೋತ್ಸವದ ನಿಮಿತ್ತ ಹೊರೆಕಾಣಿಕೆ ಹಾಗೂ ವಿಜೃಂಭಣೆಯ ಶೋಭಯಾತ್ರೆಯನ್ನು ನಡೆಸಬೇಕು ಎಂಬ ಚರ್ಚೆಯೂ ಈ ಸಂದರ್ಭದಲ್ಲಿ ನಡೆಸಲಾಯಿತು.

ಇನ್ನು ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾಗಿ ಸಮಾಜ ಸೇವಕರೂ ಹಾಗೂ ಉದ್ಯಮಿಗಳೂ ಆಗಿರುವ ನಗ್ರಿಗುತ್ತು ಶ್ರೀ ವಿವೇಕ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಇದು ಒಂದು ಪುಣ್ಯದ ಹಾಗೂ ಜವಬ್ದಾರಿಯುತ ಸ್ಥಾನಮಾನವನ್ನು ನನಗೆ ನೀವು ನೀಡಿದ್ದೀರಿ.ನಿಮ್ಮ ಜೊತೆಗೆ ನಾನು ಖಂಡಿತವಾಗುಯೂ ಇರುತ್ತೇನೆ.ನಾವೆಲ್ಲರೂ ಜೊತೆಯಾಗಿ ಶತಮಾನೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸೋಣ ಎಂದರು.

ಇನ್ನು ಸಭೆಯಲ್ಲಿ ಶ್ರೀ ದೇವಿಪ್ರಸಾದ್ ಪೂಂಜಾ,ಶ್ರೀಕಾಂತ್ ಶೆಟ್ಟಿ ಸಂಕೇಶ,ಶಿವಪ್ರಸಾದ್ ಶೆಟ್ಟಿ, ಗಿರೀಶ್ ಪೆರ್ವ, ನವೀನ್ ಆಳ್ವಾ ಯೋಗಿಶ್ ಬೆಳ್ಚಾ‌ಡ, ಪ್ರಹ್ಲಾದ್ ಹಾಗೂ ಕಿಶೋರ್ , ಪುಶ್ಪಲತಾ,ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಲಘು ಮಳೆ- 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು: ಪಾಂಡೇಶ್ವರ ಅಗ್ನಿಶಾಮಕ ಚಾಲಕ ಕಾರ್ತಿಕ್‌ ಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಹಾರಾಷ್ಟ್ರದಲ್ಲಿ ರಸ್ತೆ ಅಪಘಾತ- ಮಂಗಳೂರು ಮೂಲದ ಯುವ ಟ್ರಕ್ ಚಾಲಕ ಸಾವು

⚠️ Contents are protected on this website.