ಮಹಾರಾಷ್ಟ್ರದಲ್ಲಿ ರಸ್ತೆ ಅಪಘಾತ- ಮಂಗಳೂರು ಮೂಲದ ಯುವ ಟ್ರಕ್ ಚಾಲಕ ಸಾವು

Advertisement

ಮಂಗಳೂರು, ಫೆ. 25 : ಮಹಾರಾಷ್ಟ್ರದ ರತ್ನಗಿರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮುಡಿಪು ಬಳಿಯ ಬೋಳಿಯಾರ್‌ನ 28 ವರ್ಷದ ವಿವಾಹಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.

ಮೃತನನ್ನು ಬೋಳಿಯಾರ್ ನಿವಾಸಿ ಬಿ.ಎಚ್. ಕರೀಂ ಅವರ ಪುತ್ರ ಮುಹಮ್ಮದ್ ರಿಜ್ವಾನ್ ಎಂದು ಗುರುತಿಸಲಾಗಿದೆ.

ರಿಜ್ವಾನ್ ಹಲವಾರು ವರ್ಷಗಳಿಂದ ಖಾಸಗಿ ಕಂಪನಿಯ ಮೂಲಕ ಮೀನು ಸಾಗಣೆ ಟ್ರಕ್‌ಗೆ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಪೊಲೀಸ್ ಮೂಲಗಳ ಪ್ರಕಾರ, ಫೆಬ್ರವರಿ 23 ರಂದು ರತ್ನಗಿರಿಯಲ್ಲಿ ಮೀನು ಸರಕನ್ನು ತಲುಪಿಸಲು ಹೋಗುತ್ತಿದ್ದಾಗ ಅವರ ಟ್ರಕ್ ಮತ್ತೊಂದು ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಡಿಕ್ಕಿಯಲ್ಲಿ ಗಂಭೀರ ಗಾಯಗೊಂಡ ರಿಜ್ವಾನ್ ಸ್ಥಳದಲ್ಲೇ ಕೊನೆಯುಸಿರೆಳೆದರು.

ಮೃತರು ಪೋಷಕರು, ಪತ್ನಿ, ಎರಡು ವರ್ಷದ ಮಗು, ಮೂವರು ಸಹೋದರರು ಮತ್ತು ಮೂವರು ಸಹೋದರಿಯರನ್ನು ಅಗಲಿದ್ದಾರೆ.

Advertisement

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ