ಕೊರ್ಬಾ, ಜ. 24 : ಛತ್ತೀಸ್‌ಗಢದ ಕೊರ್ಬಾ ನಗರದಲ್ಲಿ ನಾಲ್ಕು ದಶಕಗಳ ಹಿಂದೆ ಕಾಲುವೆಯ ಮೇಲೆ ನಿರ್ಮಿಸಲಾದ 10 ಟನ್‌ಗಳಿಗಿಂತ ಹೆಚ್ಚು ತೂಕದ 70 ಅಡಿ ಉದ್ದದ ಉಕ್ಕಿನ ಸೇತುವೆಯನ್ನೇ ರಾತ್ರೋರಾತ್ರಿ ಕಳ್ಳತನ ಮಾಡಲಾಗಿದ್ದು, ಸ್ಥಳೀಯ ನಿವಾಸಿಗಳು ದಿಗ್ಧಮೆಗೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಜನವರಿ 18 ರಂದು, ಧೋಧಿಪರಾ ಪ್ರದೇಶದ ವಾರ್ಡ್ ಸಂಖ್ಯೆ 17 ರಲ್ಲಿ ಪಾದಚಾರಿ ಮಾರ್ಗವಾಗಿ ಬಳಸಲಾಗುತ್ತಿದ್ದ ಹಸಿಯೋ ಎಡ ಕಾಲುವೆಯ ಮೇಲೆ ನಿರ್ಮಿಸಲಾದ ಉಕ್ಕಿನ ಸೇತುವೆ ಕಾಣೆಯಾಗಿರುವುದನ್ನು ಸ್ಥಳೀಯ ನಿವಾಸಿಗಳು ಗಮನಿಸಿದ್ದಾರೆ. ಇದರ ನಂತರ ಸ್ಥಳೀಯ ಕಾರ್ಪೊರೇಟರ್ ಲಕ್ಷ್ಮಣ್ ಶ್ರೀವಾಸ್ ದೂರು ದಾಖಲಿಸಿದ್ದಾರೆ ಎಂದು ಕೊರ್ಬಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಖನ್ ಪಟ್ಟಿ ತಿಳಿಸಿದ್ದಾರೆ.
ಕೃತ್ಯದಲ್ಲಿ 15 ಜನರು ಭಾಗಿಯಾಗಿದ್ದಾರೆಂದು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ, ಸೇತುವೆಯನ್ನು ಗ್ಯಾಸ್ ಕಟ್ಟರ್ ಬಳಸಿ ಕತ್ತರಿಸಿ ಗುಜರಿ ಆಗಿ ಮಾರಾಟ ಮಾಡಲು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಇಲ್ಲಿಯವರೆಗೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ, ತಲೆಮರೆಸಿಕೊಂಡಿರುವ ಕಿಂಗ್‌ಪಿನ್‌ಗಳಾದ ಮುಖೇಶ್ ಸಾಹು, ಅಸ್ಲಂ ಖಾನ್ ಸೇರಿ ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

