ಪ್ರಧಾನಿ ಮೋದಿ ಕರೆಗೆ ಗೌರವ ನೀಡಿ, ಬಸ್ ಪ್ರಯಾಣ ಬೆಳೆಸಿದ ಶಾಸಕಿ ಕು. ಭಾಗೀರಥಿ ಮುರುಳ್ಯ !

Advertisement

ಸುಳ್ಯ, ಮೇ 20 : ರಾಜಕೀಯವಾಗಿ ಉನ್ನತ ಅಧಿಕಾರ ಪಡೆಯುವ ಮೊದಲೂ ಸರಳತೆಯ ಮೂಲಕವೇ ಬದುಕಿದ್ದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರು, ಅಧಿಕಾರ ಸಿಕ್ಕ ಬಳಿಕವೂ ತಮ್ಮ ವ್ಯಕ್ತಿತ್ವ ಮತ್ತು ಸರಳ ಜೀವನದ ಮೂಲಕ ಸಾರ್ವಜನಿಕರಿಗೆ ಪ್ರೇರಣೆಯಾಗಿದ್ದಾರೆ. ಗ್ರಾಮೀಣ ಬದುಕಿನ ಕಷ್ಟ-ನಷ್ಟಗಳ ಅರಿವಿರುವ ಶಾಸಕರು, ಇದೀಗ ಇಂಧನ ಉಳಿತಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ನೀಡಿದ ಕರೆಗೆ ಸ್ಪಂದಿಸಿ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸುವ ಮೂಲಕ ಸುದ್ದಿಯಾಗಿದ್ದಾರೆ.

Advertisement

ಮೇ 16 ರಂದು ಬೆಳ್ಳಂದೂರು ಕಾಲೇಜಿಗೆ ಮುಖ್ಯ ಅತಿಥಿಯಾಗಿ ಹೋಗಬೇಕಿದ್ದ ಶಾಸಕರು, ಮುರುಳ್ಯದ ತಮ್ಮ ಮನೆಯಿಂದ ಬೆಳ್ಳಂದೂರಿಗೆ ಹೋಗಲು ಸರ್ಕಾರಿ ಬಸ್ ಏರಿದರು. ಈ ವೇಳೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಪ್ರಮೀಳಾ ಜನಾರ್ದನ್ ಅವರು ಕೂಡ ಶಾಸಕರಿಗೆ ಸಾಥ್ ನೀಡಿದ್ದರು. ಬೆಳ್ಳಂದೂರಿನಲ್ಲಿ ಬಸ್ ಇಳಿದ ಶಾಸಕರು ಅಲ್ಲಿಂದ ರಿಕ್ಷಾ ಮೂಲಕ ಕಾಲೇಜು ಕಾರ್ಯಕ್ರಮ ತಲುಪಿದರು.

Advertisement

ಇರಾನ್-ಅಮೆರಿಕಾ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕವಾಗಿ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಕೊರತೆ ಉಂಟಾಗಿದ್ದು, ಬೆಲೆಗಳು ತೀವ್ರವಾಗಿ ಏರಿಕೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಇಂಧನ ಬಳಕೆಯನ್ನು ಮಿತಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಕರೆ ನೀಡಿದ್ದರು. ಈ ಕರೆಗೆ ಓಗೊಟ್ಟು ಶಾಸಕಿ ಭಾಗೀರಥಿ ಮುರುಳ್ಯ ಅವರು ತಮ್ಮ ಅಧಿಕೃತ ಕಾರನ್ನು ಬದಿಗಿಟ್ಟು, ಸಾಮಾನ್ಯರಂತೆ ಬಸ್ ಹತ್ತಿ ಪ್ರಯಾಣ ಬೆಳೆಸಿದ್ದಾರೆ.

ತಮ್ಮ ಬಸ್ ಪ್ರಯಾಣದ ಅನುಭವದ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ, “ಪ್ರಧಾನಿಯವರ ಕರೆಯ ಮೇರೆಗೆ ನಾನು ಬಸ್‌ನಲ್ಲಿ ಬೆಳ್ಳಂದೂರಿಗೆ ಹೋಗಿದ್ದೆ. ಆದರೆ ಮಧ್ಯಾಹ್ನದ ಬಳಿಕ ಕಡಬಕ್ಕೆ ಹೋಗಲು ಸರಿಯಾದ ಸಮಯಕ್ಕೆ ಬಸ್ ಸಿಗದ ಕಾರಣ ಅನಿವಾರ್ಯವಾಗಿ ಕಾರಿನಲ್ಲಿ ಹೋಗಬೇಕಾಯಿತು. ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಮಯಕ್ಕೆ ಸರಿಯಾಗಿ ತಲುಪಬೇಕಿರುವುದರಿಂದ ಬಸ್ಸನ್ನೇ ಸಂಪೂರ್ಣ ಅವಲಂಬಿಸಲು ಸಾಧ್ಯವಾಗುವುದಿಲ್ಲ. ಆದರೆ, ಇನ್ನು ಮುಂದೆ ಬೆಂಗಳೂರಿಗೆ ಹೋಗುವಾಗ ಮಾತ್ರ ನಾನು ಬಸ್‌ನಲ್ಲೇ ಪ್ರಯಾಣಿಸುತ್ತೇನೆ,” ಎಂದು ತಿಳಿಸಿದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ