ಬೆಳ್ತಂಗಡಿ, ಜು. 20 : ಕಳೆದ ಕೆಲವು ದಿನಗಳಿಂದ ನಿಂತಿದ್ದ ಕಾರಿನ ಮಾಲಕರು ಪತ್ತೆಯಾಗಿದ್ದು, ದುರಸ್ತಿಯ ಉದ್ಧೇಶದಿಂದ ಕಾರನ್ನು ನಿಲ್ಲಿಸಲಾಗಿದೆ ಎಂದು ಧ್ವನಿ ನ್ಯೂಸ್’ಗೆ ಮಾಹಿತಿ ನೀಡಿದ್ದಾರೆ.

ಉಜಿರೆ ರಾಷ್ಟ್ರೀಯ ಹೆದ್ದಾರಿಯ ಕೊಯ್ಯೂರು ಕ್ರಾಸ್ ಬಳಿ ಸರ್ವಿಸ್ ರಸ್ತೆಯ ಬದಿಯಲ್ಲಿ ಕಳೆದ 4-5 ದಿನಗಳಿಂದ ಕಾರೊಂದು ನಿಂತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಇದೀಗ, ಕಾರು ಕೆಟ್ಟು ಹೋಗಿರುವ ಕಾರಣ ನಿಲ್ಲಿಸಲಾಗಿದೆ ಎಂದು ಮಾಲಕರೇ ಸ್ಪಷ್ಟ ಪಡಿಸಿದ್ದಾರೆ.
ಸ್ಥಳೀಯರ ಗೊಂದಲ ನಿವಾರಣೆ :
ಕಳೆದ ಕೆಲವು ದಿನಗಳಿಂದ ಕಾರು ನಿಂತಿದ್ದರಿಂದ ಸ್ಥಳೀಯರಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಇದೀಗ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ.


