ಬೆಳ್ತಂಗಡಿ, ಜು. 17 : ಬೆಳ್ತಂಗಡಿ ಉಜಿರೆ ರಾಷ್ಟ್ರೀಯ ಹೆದ್ದಾರಿಯ ಕೊಯ್ಯೂರು ಕ್ರಾಸ್ ಬಳಿ ಸರ್ವಿಸ್ ರಸ್ತೆಯ ಬದಿಯಲ್ಲಿ ಕಳೆದ 4-5 ದಿನಗಳಿಂದ ಅನಾಥವಾಗಿ ನಿಂತಿರುವುದು ಪತ್ತೆಯಾಗಿದೆ. ಕಾರು ಯಾರದ್ದು ಎಂಬುದು ಗೊತ್ತಿಲ್ಲ, ನಾಲ್ಕೈದು ದಿನಗಳಿಂದ ಇಲ್ಲೇ ಇದೆ ಎಂದು ಸ್ಥಳೀಯರೋರ್ವರು ತಿಳಿಸಿದ್ದಾರೆ.

ರಸ್ತೆ ಬದಿ ನಿಂತಿರುವ ಕಾರಿನಲ್ಲಿ ಮುಂಭಾಗದಲ್ಲಿ ನಂಬರ್ ಪ್ಲೇಟ್ ಇಲ್ಲ, ನಂಬರ್ ಪ್ಲೇಟ್ ಕಾರಿನೊಳಗಡೆ ಹಾಕಲಾಗಿದೆ. ಆದರೆ, ಹಿಂಭಾಗದಲ್ಲಿ ನಂಬರ್ ಪ್ಲೇಟ್ ಪತ್ತೆಯಾಗಿದೆ. ಇನ್ನು, ಕಾರಿನ ಎಡಭಾಗದ ಚಕ್ರವೊಂದು ಪಂಕ್ಚರ್ ಆಗಿರುವುದು ಕಂಡು ಬಂದಿದೆ. ಅಲ್ಲದೆ, ಕಾರಿನ ಗ್ಲಾಸ್ ತೆರೆದೇ ಇದ್ದು, ಕಾರಿನೊಳಗಡೆ ಡೋರ್ ಲಾಕ್ ಕಿತ್ತು ಹೋಗಿರುವುದು ಕಂಡುಬಂದಿದೆ. ಹಿಂಭಾಗದಲ್ಲಿ, “KA 02 Z 5220” ಎಂಬ ನಂಬರ್ ಪ್ಲೇಟ್ ಇದ್ದು, ಕಾರು ಬೆಂಗಳೂರು ಮೂಲದ್ದು ಇರಬಹುದು ಎಂದು ಶಂಕಿಸಲಾಗಿದೆ.

ಕಾರು ಪಂಕ್ಚರ್ ಆಗಿದ್ದಕ್ಕೆ ನಿಲ್ಲಿಸಿದ್ದೇ ಆದಲ್ಲಿ, ಕಳೆದ 4-5 ದಿನಗಳಿಂದ ಕಾರಿನ ಮಾಲಕರು ಯಾಕೆ ಬಂದಿಲ್ಲ ಎಂಬುದೇ ಯಕ್ಷ ಪ್ರಶ್ನೆ. ಅಲ್ಲದೆ, ಯಾರಾದರೂ ಕಳ್ಳತನ ಮಾಡಿ ತಂದು ಕಾರನ್ನು ಇಲ್ಲಿ ನಿಲ್ಲಿಸಿರಬಹುದಾ ? ಅಥವಾ ಬೇರೆ ಯಾವುದೋ ದುರುದ್ಧೇಶಕ್ಕೆ ಕಾರನ್ನು ಬಳಸಿರಬಹುದಾ ? ಹೀಗೆ ಹತ್ತು ಹಲವು ಪ್ರಶ್ನೆಗಳು ಸ್ಥಳೀಯರನ್ನು ಕಾಡುತ್ತಿದೆ.


