ಹೊಸದಿಲ್ಲಿ : ಆರ್ ಸಿಬಿ ದಾಳಿಗೆ ತತ್ತರಿಸಿದ ಡಿಲ್ಲಿ – ಕೇವಲ 6.3 ಓವರ್‌ನಲ್ಲೇ ಗೆಲುವಿನ ನಗೆ ಬೀರಿದ ಆರ್‌ಸಿಬಿ !

Advertisement

ಹೊಸದಿಲ್ಲಿ, ಏ. 28 : ಅರುಣ್‌ ಜೇಟ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ vs ಡಿಸಿ ವಿರುದ್ಧದ ರೋಚಕ ಪಂದ್ಯ, ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಅಕ್ಷರಶಃ ಹಬ್ಬದೂಟ ಮಾಡಿಸಿದೆ. ಅತಿಥೇಯ ಡಿಸಿ ನೀಡಿದ್ದ 75 ರನ್‌ಗಳ ಸಾಧಾರಣ ಗುರಿಯನ್ನು, ಆರ್‌ಸಿಬಿ ಕೇವಲ 6.3 ಓವರ್‌ನಲ್ಲೇ ತಲುಪಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಸ್ಟಾರ್‌ ವಿರಾಟ್‌ ಕೊಹ್ಲಿ ಅವರು ಐಪಿಎಲ್‌ನಲ್ಲಿ 9,000 ರನ್‌ ಬಾರಿಸಿದ ಮೊದಲ ಆಟಗಾರ ಎಂಬ ಕೀರ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

Advertisement

ಡಿಸಿ ನೀಡಿದ್ದ 76 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಆರ್‌ಸಿಬಿ, ಆರಂಭದಲ್ಲಿ ಜೋಸೆಫ್‌ ಬೆಥೆಲ್‌ (20) ಅವರ ವಿಕೆಟ್‌ ಕಳೆದುಕೊಂಡರೂ, ದೇವದತ್‌ ಪಡಿಕ್ಕಲ್‌ (34) ಮತ್ತು ವಿರಾಟ್‌ ಕೊಹಲಿ (23) ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. ಡಿಸಿ ಪರವಾಗಿ ಕೇವಲ ಕೈಲ್‌ ಜಮೈಸನ್‌ ಒಂದು ವಿಕೆಟ್‌ ಪಡೆದರು.

Advertisement

ಇದಕ್ಕೂ ಮೊದಲು ಟಾಸ್‌ ಸೋತು ಬ್ಯಾಟ್‌ ಮಾಡಿದ ಡಿಸಿ, 16.3 ಓವರ್‌ನಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಕೇವಲ 75 ರನ್‌ ಗಳಿಸಿತು. ಪಂದ್ಯದ ಆರಂಭದ ಕೇವಲ 3.5 ಓವರ್‌ನಲ್ಲೇ ಡಿಸಿ 9 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ಭಾರೀ ಸಂಕಷ್ಟಕ್ಕೆ ಸಿಲುಕಿತ್ತು. ಡಿಸಿ ಪವರ್‌ಪ್ಲೇನಲ್ಲಿ ಅರಿ ಕಡಿಮೆ ರನ್‌ಗೆ ಅತಿಹೆಚ್ಚು ವಿಕೆಟ್‌ ಕಳೆದುಕೊಂಡ ತಂಡ ಎಂಬ ಅಪಖ್ಯಾತಿಗೆ ಗುರಿಯಾಗಿದೆ. ಆರ್‌ಸಿಬಿ ಬೌಲಿಂಗ್‌ ದಾಳಿಗೆ ಅಕ್ಷರಶಃ ತತ್ತರಿಸಿದ ಡಿಸಿಯ ಬ್ಯಾಟ್ಸಮನ್‌ಗಳು ಮೈದಾನಕ್ಕೆ ಬಂದಷ್ಟೇ ವೇಗವಾಗಿ ಪೆವಿಲಿಯನ್‌ಗೆ ಮರಳುತ್ತಿದ್ದರು. ಒಂದು ಹಂತದಲ್ಲಿ ಅವರು ಆರ್‌ಸಿಬಿಯ ಐಪಿಎಲ್‌ ಇತಿಹಾಸದಲ್ಲೇ ಅತೀ ಕಡಿಮೆ ಮೊತ್ತ 49 ರನ್‌ ಆಲೌಟ್‌ ಕುಖ್ಯಾತಿಯನ್ನು ಮುರಿಯುತ್ತಾರೆ ಎಂದು ಅನಿಸಿದ್ದು ಸುಳ್ಳಲ್ಲ.

ಆದರೆ ಅಭಿಷೇಕ್‌ ಪೋರೆಲ್‌ (30) ಮತ್ತು ಡೇವಿಡ್‌ ಮಿಲ್ಲರ್‌ (19) ಅವರ 34 ರನ್‌ಗಳ ಜೊತೆಯಾಟ ಡಿಸಿ ತಂಡವನ್ನು 75 ರನ್‌ಗಳವರೆಗೆ ಕೊಂಡೊಯ್ದಿತು. ಆದಾಗ್ಯೂ, ಈ ಫಲಿತಾಂಶವು ತಂಡವೊಂದರ ಅತ್ಯಂತ ಕಳಪೆ ಪ್ರದರ್ಶನ ಎಂಬ ಕುಖ್ಯಾತಿಯನ್ನು ಗಳಿಸಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ