ಡೆಲ್ಲಿ ಕ್ಯಾಪಿಟಲ್ಸ್ ತಂಡದ ಚುಕ್ಕಾಣಿ ಹಿಡಿಯಲಿದ್ದಾರೆ ಟೀಂ ಇಂಡಿಯಾ ಸ್ಟಾರ್ ಜೆಮಿಮಾ ರೊಡ್ರಿಗಸ್‌ ?

ಮುಂಬೈ, ಡಿ. 23 : ಮಹಿಳಾ ಪ್ರೀಮಿಯರ್ ಲೀಗ್ (WPL) ನಾಲ್ಕನೇ ಸೀಸನ್‌ಗೆ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ತಂಡದ ನಾಯಕತ್ವವನ್ನು ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ಜೆಮಿಮಾ ರೊಡ್ರಿಗಸ್‌ಗೆ ಒಪ್ಪಿಸಲು ಮುಂದಾಗಿದೆ. ಕಳೆದ ಎರಡು ಸೀಸನ್‌ಗಳಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕಿ ಮೆಗ್ ಲ್ಯಾನಿಂಗ್ ಡೆಲ್ಲಿ ತಂಡವನ್ನು ಮುನ್ನಡೆಸಿದ್ದರು. ಆದರೆ ಇದೀಗ ನಾಯಕತ್ವದ ಜವಾಬ್ದಾರಿಯನ್ನು ಭಾರತೀಯ ಆಟಗಾರ್ತಿಗೆ ಹಸ್ತಾಂತರಿಸಲಾಗುತ್ತಿದೆ.

Advertisement

ಡಿಸೆಂಬರ್ 23ರಂದು ಈ ಕುರಿತು ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ವರದಿಯಾಗಿದೆ. ಎರಡು ಆವೃತ್ತಿಗಳಲ್ಲಿ ತಂಡವನ್ನು ಫೈನಲ್‌ಗೆ ಕರೆದೊಯ್ದಿದ್ದ ಮೆಗ್ ಲ್ಯಾನಿಂಗ್ ಅವರನ್ನು ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಬಿಡುಗಡೆ ಮಾಡಿತ್ತು. ಇದಾದ ಬಳಿಕ ಉಪನಾಯಕಿಯಾಗಿದ್ದ ಜೆಮಿಮಾ ರೊಡ್ರಿಗಸ್ ಅವರನ್ನು ನಾಯಕಿಯಾಗಿ ನೇಮಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಕ್ರಿಕ್‌ಬಜ್ ವರದಿಯ ಪ್ರಕಾರ, ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್‌ನಲ್ಲಿ ಶತಕ ಬಾರಿಸಿ ಭಾರತವನ್ನು ವಿಶ್ವಕಪ್ ಗೆಲುವಿನತ್ತ ಮುನ್ನಡೆಸಿದ್ದ ಜೆಮಿಮಾಗೆ ಈ ನಾಯಕತ್ವ ಲಭಿಸಿದೆ. ಕಳೆದ ತಿಂಗಳು ದೆಹಲಿಯಲ್ಲಿ ನಡೆದ WPL 2026 ಆಟಗಾರರ ಹರಾಜಿನ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಸಹ-ಮಾಲೀಕ ಪಾರ್ಥ್ ಜಿಂದಾಲ್ ಅವರು ಜೆಮಿಮಾಗೆ ನಾಯಕತ್ವ ನೀಡುವ ಬಗ್ಗೆ ಸುಳಿವು ನೀಡಿದ್ದರು.

ಮೆಗಾ ಹರಾಜಿನಲ್ಲಿ ಡೆಲ್ಲಿ ತಂಡ ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೊಲ್ವಾರ್ಡ್ಟ್ ಅವರನ್ನು ಖರೀದಿಸಿದ ಬಳಿಕ ಅವರಿಗೆ ನಾಯಕತ್ವ ಸಿಗಬಹುದು ಎಂಬ ವದಂತಿಗಳು ಹರಡಿದ್ದವು. ಆದರೆ ಇದಕ್ಕೆ ಸ್ಪಷ್ಟನೆ ನೀಡಿದ್ದ ಪಾರ್ಥ್ ಜಿಂದಾಲ್, “ನಾವು ಭಾರತೀಯ ಆಟಗಾರ್ತಿಯನ್ನೇ ನಾಯಕಿಯಾಗಿ ಮಾಡುತ್ತೇವೆ” ಎಂದು ಹೇಳಿದ್ದರು. ಅದರಂತೆ ಇದೀಗ ಜೆಮಿಮಾ ನಾಯಕಿಯಾಗುವುದು ಬಹುತೇಕ ಖಚಿತವಾಗಿದೆ. 2023ರಲ್ಲಿ ನಡೆದ ಮೊದಲ WPL ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ ಜೆಮಿಮಾ ರೊಡ್ರಿಗಸ್, ಮುಂದಿನ ಸೀಸನ್‌ಗೆ ತಂಡ ಉಳಿಸಿಕೊಂಡ ಐದು ಆಟಗಾರ್ತಿಯರಲ್ಲಿ ಮೊದಲ ಸ್ಥಾನ ಪಡೆದಿದ್ದರು. ಜೆಮಿಮಾ ಜೊತೆಗೆ ಶಫಾಲಿ ವರ್ಮಾ, ಅನ್ನಾಬೆಲ್ ಸದರ್ಲ್ಯಾಂಡ್ (ಆಸ್ಟ್ರೇಲಿಯಾ), ಮರಿಜಾನ್ನೆ ಕಪ್ (ದಕ್ಷಿಣ ಆಫ್ರಿಕಾ) ಹಾಗೂ ಅಂಡರ್-19 ವಿಶ್ವಕಪ್ ವಿಜೇತ ನಾಯಕಿ ನಿಕ್ಕಿ ಪ್ರಸಾದ್ ಅವರನ್ನು ಡೆಲ್ಲಿ ತಂಡ ಉಳಿಸಿಕೊಂಡಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ  : ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

⚠️ Contents are protected on this website.