ಮಂಗಳೂರು : “ಕುಡಿದು ಆಟವಾಡಿ” – ಗೆದ್ದವರಿಗೆ ಬಿಯರ್, ಎಂಸಿ ಲಕ್ಸುರಿ ಬಾಟಲ್ – ಹೀಗೊಂದು ಕ್ರಿಕೆಟ್ ಕದನ!

Advertisement

ಮಂಗಳೂರು, ಏ. 03 : ಸ್ಥಳೀಯ ಕ್ರಿಕೆಟ್ ಪಂದ್ಯಾಟ ಎಂದರೆ ಅಲ್ಲಿ ಹಣ ಮತ್ತು ಟ್ರೋಫಿ ಬಹುಮಾನ ಸಾಮಾನ್ಯ. ಆದರೆ, “60 ವಾರಿಯರ್ಸ್ ಮೇರ್ಲಪದವು” ಅರ್ಪಿಸುವ ಕ್ರಿಕೆಟ್ ಕದನ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಚರ್ಚೆಗೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಪೋಸ್ಟರ್ ಪ್ರಕಾರ “60 ವಾರಿಯರ್ಸ್ ಟ್ರೋಫಿ-2026” ಎಪ್ರಿಲ್ 25ರಂದು ಸೈಂಟ್ ಜಾಸ್ತಿ ಜೋಸೆಫ್ ದ ವರ್ಕರ್ ಚರ್ಚ್ ಗ್ರೌಂಡ್ ಎಂಬಲ್ಲಿ ಆಯೋಜನೆಗೊಂಡಿದೆ. ಇದರಲ್ಲಿ ವಿಶೇಷತೆ ಎಂದರೆ ಎಲ್ಲಾ ಆಟಗಾರರು ಕೂಡ ಮಧ್ಯಪಾನ ಮಾಡಲೇಬೇಕು ಎಂದು ಆಯೋಜಕರು ಸೂಚನೆ ನೀಡಿದ್ದಾರೆ.

ಬಹುಮಾನ ರೂಪವಾಗಿ ಮದ್ಯಪಾನವನ್ನೇ ನೀಡುತ್ತಿರುವುದು ಕೆಲವರ ವಿರೋಧಕ್ಕೆ ಕಾರಣವಾಗಿದೆ.

ಇದೀಗ ಈ ಕ್ರೀಡಾಕೂಟದ ಪೋಸ್ಟರ್ ಬಹಳಷ್ಟು ವೈರಲ್ ಆಗುತ್ತಿದ್ದು, ಕೆಲವರು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದರೆ ಇನ್ನು ಕೆಲವರು ಮಂಗಳೂರಿನಂತಹ ಪ್ರದೇಶದಲ್ಲಿ ಇಂತಹ ಕ್ರೀಡಾಕೂಟ ಆಯೋಜನೆ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ವೈರಲ್ ಆಗುತ್ತಿರುವ ಈ ಪೋಸ್ಟರ್ ಎಷ್ಟು ಸತ್ಯ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

Advertisement

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ