ಕಾಕ್‌ಪಿಟ್‌ನಲ್ಲಿ ಸಹ ಪೈಲಟ್‌ನಿಂದ ಮಾರಣಾಂತಿಕ ಹಲ್ಲೆ ನಡೆದರೂ 174 ಜೀವ ರಕ್ಷಿಸಿದ್ದು ಭಾರತೀಯ ಕ್ಯಾಪ್ಟನ್ !

ಟೆಲ್ ಅವಿವ್, ಅ. 01 : ಆಕಾಶದಲ್ಲಿ 34 ಸಾವಿರ ಅಡಿ ಎತ್ತರ… ಕ್ಷಣಾರ್ಧದಲ್ಲಿ ವಿಮಾನ ಪತನಗೊಳಿಸಲು ಮುಂದಾದ ಸಹ-ಪೈಲಟ್… ರಕ್ತಸಿಕ್ತ ಕಾಕ್‌ಪಿಟ್‌ನಲ್ಲಿ ನಡೀತು ಭೀಕರ ಕಾಳಗ ! ಸಾವು ಕಣ್ಣೆದುರೇ ಕಂಡರೂ ಎದೆಗುಂದದ ಆ ಭಾರತೀಯ ಪೈಲಟ್‌ನ ಅದ್ಭುತ ಸಮಯಪ್ರಜ್ಞೆ, ಇಂದು 174 ಅಮಾಯಕ ಜೀವಗಳನ್ನು ರಕ್ಷಿಸಿದೆ. ದುಬೈ-ಟೆಲ್ ಅವಿವ್ ವಿಮಾನದಲ್ಲಿ ಸಂಭವಿಸಬೇಕಿದ್ದ ಭೀಕರ ‘9/11’ ಮಾದರಿಯ ದುರಂತವನ್ನು ಒಬ್ಬ ಭಾರತೀಯ ಕ್ಯಾಪ್ಟನ್ ತನ್ನ ಉಸಿರು ಬಿಗಿಹಿಡಿದು ಹಿಮ್ಮೆಟ್ಟಿಸಿದ ಕಥೆಯಿದು.

ಹೌದು. ದುಬೈನಿಂದ(Dubai) ಇಸ್ರೇಲ್‌ನ ಟೆಲ್ ಅವಿವ್‌ಗೆ ಹೊರಟಿದ್ದ ಫ್ಲೈದುಬೈ (Fly Dubai) ವಿಮಾನದ ಕಾಕ್‌ಪಿಟ್‌ನಲ್ಲಿ ಸಹ-ಪೈಲಟ್‌ನಿಂದ ಮಾರಣಾಂತಿಕ ಹಲ್ಲೆಗೊಳಗಾದರೂ ಧೃತಿಗೆಡದೆ ವಿಮಾನದ ನಿಯಂತ್ರಣ ಸಾಧಿಸಿ 174 ಪ್ರಯಾಣಿಕರ ಜೀವ ಉಳಿಸಿದ ಮುಖ್ಯ ಪೈಲಟ್ ಭಾರತೀಯ ಪ್ರಜೆ ಎಂದು ಗುರುತಿಸಲಾಗಿದೆ.

ಭಾರತದ ಮಾಜಿ ಸ್ಪೈಸ್‌ಜೆಟ್ ಪೈಲಟ್ ಆಗಿದ್ದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Smit Machchhar) ಅವರೇ ಸಹ ಪೈಲಟ್‌ನೊಂದಿಗೆ ಜೀವದ ಹಂಗು ತೊರೆದು ಹೋರಾಡಿ ಸಾಹಸ ಮೆರೆದ ಭಾರತೀಯ ಪೈಲಟ್ ಎಂದು ಇಸ್ರೇಲ್‌(Israel) ಮಾಧ್ಯಮಗಳು ವರದಿ ಮಾಡಿವೆ.

Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ವಿದೇಶ

ಜಪನ್ : ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ – ಪ್ಯಾರಾ ಈಜುಪಟು ಮೊಹಮ್ಮದ್ ಶಮ್ಸ್ ಜಪಾನ್‌ನಿಂದ ಗಡಿಪಾರು, ತಂಡಕ್ಕೆ ಮುಜುಗರ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಳಗಾವಿ : ಮನೆಯಲ್ಲಿ ವಿಜಯದಶಮಿ ಹಬ್ಬದ ಸಂಭ್ರಮದ ರಾತ್ರಿಯಂದು ಹರಿದಿತ್ತು ರಕ್ತ – ಹಬ್ಬದ ದಿನವೇ ಹೆಂಡತಿಗೆ ಚಟ್ಟ ಕಟ್ಟಿದ ಪತಿ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ನಾವೂರು ಕ್ಲಿನಿಕ್ ಗೆ ಬೆಂಕಿ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳಿರುವ ಶಂಕೆಯಿದೆ – ಗ್ರಾಮಸ್ಥರು