ಜಪನ್ : ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ – ಪ್ಯಾರಾ ಈಜುಪಟು ಮೊಹಮ್ಮದ್ ಶಮ್ಸ್ ಜಪಾನ್‌ನಿಂದ ಗಡಿಪಾರು, ತಂಡಕ್ಕೆ ಮುಜುಗರ !

ಟೋಕಿಯೊ, ಅ. 22 : ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ ವೇಳೆ ಹೋಟೆಲ್‌ನ ಮಹಿಳಾ ಸಿಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಭಾರತೀಯ ಪ್ಯಾರಾ ಈಜುಪಟು ಮೊಹಮ್ಮದ್ ಶಮ್ಸ್ ಆಲಂ ಶೇಖ್ (40) ಅವರನ್ನು ಜಪಾನ್‌ನಿಂದ ಗಡಿಪಾರು ಮಾಡಲಾಗಿದೆ.

ಮಹಿಳಾ ಸಿಬಂದಿಗೆ ಲೈಂಗಿಕ ಕಿರುಕುಳ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಜಪಾನ್ ಪೊಲೀಸರು ಶೇಖ್ ಅವರನ್ನು ವಶಕ್ಕೆ ಪಡೆದಿದ್ದರು. ಬಳಿಕ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಲಾಗಿದೆ. ಈ ಘಟನೆಯು ನಾಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾಗವಹಿಸಿರುವ ಭಾರತೀಯ ತಂಡಕ್ಕೆ ಮುಜುಗರ ಉಂಟುಮಾಡಿದೆ.

ಭಾರತೀಯ ನಿಯೋಗದ ಮೂಲಗಳ ಪ್ರಕಾರ, ಸೋಮವಾರ ಭಾರತೀಯ ಪ್ಯಾರಾ ಈಜು ತಂಡ ತಂಗಿದ್ದ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಹೋಟೆಲ್‌ನ ಮಹಿಳಾ ಹೌಸ್‌ಕೀಪಿಂಗ್ ಸಿಬಂದಿ ಶೇಖ್ ಅವರ ಕೊಠಡಿಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ವೇಳೆ ಅವರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಮಹಿಳಾ ಸಿಬಂದಿ ನೀಡಿದ ದೂರನ್ನು ಸ್ಥಳೀಯ ಸಂಘಟನಾ ಸಮಿತಿ ಹಾಗೂ ಭಾರತೀಯ ನಿಯೋಗದ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಜಪಾನ್ ಪೊಲೀಸರು ಶೇಖ್ ಅವರನ್ನು ವಶಕ್ಕೆ ಪಡೆದಿದ್ದರು. ಘಟನೆ ನಡೆದ ಮರುದಿನವೇ ಅಂದರೆ ಮಂಗಳವಾರ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಲಾಗಿದೆ.

ಜೀವಿತಾವಧಿ ನಿಷೇಧ ಸಾಧ್ಯತೆ

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಪ್ಯಾರಾಲಿಂಪಿಕ್ ಸಮಿತಿ (PCI), ಶೇಖ್ ವಿರುದ್ಧ ಕಠಿನ ಶಿಸ್ತುಕ್ರಮ ಕೈಗೊಳ್ಳಲು ಚಿಂತನೆ ನಡೆಸುತ್ತಿದೆ. ಅವರಿಗೆ ಜೀವಿತಾವಧಿ ನಿಷೇಧ ಹೇರುವ ಸಾಧ್ಯತೆಯೂ ಇದೆ ಎಂದು ವರದಿಯಾಗಿದೆ. ಕ್ರೀಡಾಕೂಟ ಮುಕ್ತಾಯಗೊಂಡ ಬಳಿಕ ಈ ಕುರಿತು ಅಧಿಕೃತ ನಿರ್ಧಾರ ಪ್ರಕಟವಾಗುವ ನಿರೀಕ್ಷೆಯಿದೆ. ಏಷ್ಯನ್ ಪ್ಯಾರಾ ಗೇಮ್ಸ್‌ನ ನಿಗದಿತ ಈಜು ಸ್ಪರ್ಧೆಗಳಲ್ಲಿ ಶೇಖ್ ಭಾಗವಹಿಸಬೇಕಿತ್ತು. ಆದರೆ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸದೆಯೇ ಅವರು ಭಾರತಕ್ಕೆ ಮರಳುವಂತಾಗಿದೆ.

Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಳಗಾವಿ : ಮನೆಯಲ್ಲಿ ವಿಜಯದಶಮಿ ಹಬ್ಬದ ಸಂಭ್ರಮದ ರಾತ್ರಿಯಂದು ಹರಿದಿತ್ತು ರಕ್ತ – ಹಬ್ಬದ ದಿನವೇ ಹೆಂಡತಿಗೆ ಚಟ್ಟ ಕಟ್ಟಿದ ಪತಿ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ನಾವೂರು ಕ್ಲಿನಿಕ್ ಗೆ ಬೆಂಕಿ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳಿರುವ ಶಂಕೆಯಿದೆ – ಗ್ರಾಮಸ್ಥರು

ಟಾಪ್ ಸುದ್ದಿಗಳು

ಮಂಗಳೂರು : ದಸರಾ ಸಂಭ್ರಮದ ಮೆರುಗು ಹೆಚ್ಚಿಸಲಿದೆ ಟೀಂ ಪಿಲಿ ಅಜನೆ ತಂಡದ “5ನೇ ವರ್ಷದ ಪಿಲಿ ಅಜನೆ” – ಬರ್ಕೆ ಫ್ರೆಂಡ್ಸ್ ತಂಡದಿಂದ ಹುಲಿಕುಣಿತ