ಬೆಳ್ತಂಗಡಿ , ಆ. 24 : ತಾಲೂಕಿನ ಹೊಸಂಗಡಿ ಗ್ರಾಮದ ಅರ್ಕಾಡಿ ಮನೆ ಗುಲಾಬಿ ಪೂಜಾರ್ತಿ ಹಾಗೂ ಅಂಕರೋಡಿ ಮನೆ ಹರೀಶ್ ಕುಲಾಲ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಮನೆಗೆ ಶಾಸಕರಾದ ಶ್ರೀ ಹರೀಶ್ ಪೂಂಜರವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಅರ್ಕಾಡಿ ಮನೆ ಗುಲಾಬಿ ಪೂಜಾರ್ತಿ ಹಾಗೂ ಅಂಕರೋಡಿ ಮನೆ ಹರೀಶ್ ಕುಲಾಲ್ ಅವರ ಆರೋಗ್ಯ ವಿಚಾರಿಸಿದ ಬಳಿಕ, ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಜಗದೀಶ್ ಹೆಗ್ಡೆ, ಕರುಣಾಕರ ಪೂಜಾರಿ, ಶಂಕರ ಪೂಜಾರಿ, ಹರೀಶ್, ಸತೀಶ್ ಶೆಟ್ಟಿ, ಸುಧಾಕರ್ ಶೆಟ್ಟಿ ಜೊತೆಗಿದ್ದರು.




