ಬೆಳ್ತಂಗಡಿ : ಆಂಬುಲೆನ್ಸ್ ನಲ್ಲೇ ಡ್ರಗ್ಸ್ ಸಪ್ಲೈ – ಆರೋಪಿ ಜಲೀಲ್ ಬಾಬಾ ವಿದೇಶಕ್ಕೆ ಎಸ್ಕೇಪ್ ?

ಬೆಳ್ತಂಗಡಿ, ಜು. 27 : ಸಮಾಜ ಸೇವಕನಾಗಿ ಗುರುತಿಸಿಕೊಂಡಿದ್ದ ಆಂಬುಲೆನ್ಸ್ ಚಾಲಕ ಜಲೀಲ್ ಬಾಬಾ ಬಂಧನದ ಭೀತಿಯಿಂದ ವಿದೇಶಕ್ಕೆ ಪರಾರಿಯಾಗಿ ಅಡಗಿ ಕುಳಿತ್ತಿದ್ದಾನೆ ಎನ್ನಲಾಗಿದೆ. ಸದ್ಯ ಕಳೆದ ಕೆಲವು ದಿನಗಳಿಂದ ಆರೋಪಿಯ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿದೆ ಎನ್ನಲಾಗಿದೆ.

Advertisement

ಬಾಗಲಕೋಟೆಯಲ್ಲಿ ಇತ್ತೀಚೆಗೆ ಪತ್ತೆಯಾದ ಐದೂವರೆ ಕೋಟಿ ರೂಪಾಯಿ ಮೌಲ್ಯದ ಮಾದಕ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣದಲ್ಲಿ ಈಗಾಗಲೇ ಮೂವರನ್ನು ಬಂಧಿಸಿ ಒಟ್ಟು ನಾಲ್ಕು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮತ್ತೋರ್ವ ಬೆಳ್ತಂಗಡಿಯ ಸಮಾಜಸೇವಕನ ಹೆಸರಲ್ಲಿ ಡ್ರಗ್ಸ್ ಪೆಡ್ಡಿಂಗ್ ದಂಧೆ ನಡೆಸುತ್ತಿದ್ದ ಆಂಬ್ಯುಲೆನ್ಸ್ ಚಾಲಕ ಜಲೀಲ್ @ ಬಾಬಾ(42) ಎಂಬಾತ ಮೊಬೈಲ್‌ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದು ಬಂಧನಕ್ಕಾಗಿ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ. ಆದರೆ, ಆತ ವಿದೇಶಕ್ಕೆ ತೆರಳಿರುವ ಮಾಹಿತಿ ಲಭ್ಯವಾಗುತ್ತಿದೆ.

ಪ್ರಕರಣದ ವಿವರ : ಮಂಗಳೂರು ನಗರ ಸಿಸಿಬಿ ಪೊಲೀಸರು ಕುಳಾಯಿಗುಡ್ಡೆ ವಾಟರ್ ಟ್ಯಾಂಕ್ ಸಮೀಪದ ಮನೆಗೆ ಜೂ.25 ರಂದು ನಡೆಸಿದ ದಾಳಿಯಲ್ಲಿ ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು 1.50 2 15.17 ವಶಪಡಿಸಿಕೊಂಡಿದ್ದರು. ಈ ಪ್ರಕರಣದ ತನಿಖೆ ವೇಳೆ ಮಾದಕ ವಸ್ತು ಪೂರೈಕೆ ಜಾಲದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದೆಹಲಿಯಿಂದ ಎಂಡಿಎಂಎ ಖರೀದಿಸಿಕೊಂಡು ಬೆಂಗಳೂರಿಗೆ ಸಾಗಿಸುತ್ತಿದ್ದ ಜಾಲದ ಬಗ್ಗೆ ಸುಳಿವು ಪಡೆದರು.

ಜುಲೈ 15 ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಾಯಲ್ ಇನ್ ಲಾಡ್ಜ್ ಮೇಲೆ ದಾಳಿ ನಡೆಸಿ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ಅಂದಾಜು ಐದೂವರೆ ಕೋಟಿ ರೂ. ಮೌಲ್ಯದ ಒಟ್ಟು 5 ಕೆಜಿ 196 ಗ್ರಾಂ ಎಂಡಿಎಂಎ, ಕಾರು, ಬ್ಯಾಗ್ ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.ಪ್ರಮುಖ ಆರೋಪಿ ಮೊಹಮ್ಮದ್ ಅಲ್ತಾಫ್ ವಿರುದ್ಧ ಈ ಹಿಂದೆ 2024 ರಲ್ಲಿ ಕೊಣಾಜೆ ಪೊಲೀಸ್‌ ಠಾಣೆ ಮತ್ತು 2026 ರಲ್ಲಿ ಉರ್ವ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣಗಳು ದಾಖಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.

ಮೂವರ ಬಂಧನ :

ಈಗಾಗಲೇ ಪ್ರಕರಣದಲ್ಲಿ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಮೊಹಮ್ಮದ್ ಅಲ್ತಾಫ್ (28), ಲಾಯಿಲ ಗ್ರಾಮದ ಹಳೆಪೇಟೆಯ ಮೊಹಮ್ಮದ್ ಮುಸ್ತಫಾ (28), ಇಂದಬೆಟ್ಟು ಗ್ರಾಮದ ದೇವನಾರಿ ನಿವಾಸಿ ಅಲ್ಪಾಜ್ ಮತ್ತು ಅಣ್ಣಪ್ಪ ಸ್ವಾಮಿ ಅಲಿಯಾಸ್‌ ಮನು (26) ಎಂಬವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಈ ಪೈಕಿ ಅಣ್ಣಪ್ಪ ಸ್ವಾಮಿ ಎಂಬವನನ್ನು ಮೊದಲೇ ಬಂಧಿಸಿ ಜೈಲಿಗಟ್ಟಲಾಗಿದ್ದು, ಬೆಳ್ತಂಗಡಿಯ ಜಲೀಲ್ @ ಬಾಬಾ(42) ಎಂಬಾತನೂ ಇದೀಗ ನಾಲ್ಕನೇ ಆರೋಪಿ ಎಂದು ದಾಖಲಾಗಿದೆ.

ಕೋರ್ಟ್ ಗೆ ವರದಿ ಸಲ್ಲಿಕೆ:

ಮಂಗಳೂರು ನಗರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಮಂಗಳೂರಿನ ಪ್ರಿನ್ಸಿಪಾಲ್ ಸೆಷನ್ಸ್ ನ್ಯಾಯಾಲಯಕ್ಕೆ ಜು. 16 ರಂದು ಸಲ್ಲಿಸಿದ ಇಬ್ಬರು ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್‌ ಕಸ್ಟಡಿಗೆ ಪಡೆಯಲು ಹಾಗೂ ಮುಂದಿನ ತನಿಖೆಯಲ್ಲಿ ನಾಲ್ಕನೇ ಆರೋಪಿ ಬೆಳ್ತಂಗಡಿಯ ಆಂಬುಲೆನ್ಸ್ ಚಾಲಕ ಜಲೀಲ್ @ ಬಾಬಾ ಎಂಬವನ ಹೆಸರನ್ನು ಉಲ್ಲೇಖಿಸಿ ಬಂಧನ ಬಾಕಿ ಇದೆ ಎಂದು ವರದಿಯಲ್ಲಿ ತಿಳಿಸಿರುತ್ತಾರೆ.

ಆಂಬುಲೆನ್ಸ್‌ ಚಾಲಕ ಜಲೀಲ್ ಯಾನೆ ಬಾಬಾ ಪರಾರಿ:

ಈ ಮಾದಕ ವಸ್ತು MDMA ಯನ್ನು ಈ ಮೊದಲು ಬಂಧಿತರಾದ ಮೂವರು ಆರೋಪಿಗಳಿಂದ ಬೆಳ್ತಂಗಡಿಯ ಜಲೀಲ್ @ ಬಾಬಾ(42) ಎಂಬಾತ ಪಡೆದುಕೊಂಡು ತನ್ನ ಅಂಬುಲೆನ್ಸ್ ವಾಹನದಲ್ಲಿ ಜಿಲ್ಲೆಯ ಯುವಕರಿಗೆ, ಡಾಕ್ಟರ್, ವಿದ್ಯಾರ್ಥಿಗಳಿಗೆ ಮಾರಾಟ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಮೂವರು ಆರೋಪಿಗಳು ಬಂಧನವಾದ ಬಳಿಕ ಬೆಳ್ತಂಗಡಿಯ ಅಂಬುಲೆನ್ಸ್ ಚಾಲಕ ಜಲೀಲ್ @ ಬಾಬಾ ಕಳೆದ 8 ದಿನಗಳಿಂದ ತನ್ನ ಎರಡು ಮೊಬೈಲ್‌ ಸ್ವಿಚ್ ಆಫ್‌ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ. ಈ ಪ್ರಕರಣ ಗಂಭೀರವಾಗಿರುವ ಕಾರಣ ಜಲೀಲ್ @ ಬಾಬಾ ನಿಗೆ ತಲೆಮರೆಸಿಕೊಳ್ಳಲು ಸಹಾಯ ಅಥವಾ ಆಶ್ರಯ ನೀಡಿದವರಿಗೂ ಸಿಸಿಬಿ ಪೊಲೀಸರಿಂದ ಕಾನೂನಿನ ಕಂಟಕ ಎದುರಾಗಲಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ  : ಸೈಕೋ ಕಿಲ್ಲರ್ ಚೇತನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ – ಬಂಟ್ವಾಳ ಪೊಲೀಸರ ವಶಕ್ಕೆ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಪ್ಲೇ ಸ್ಕೂಲ್‌ನಲ್ಲಿ ಚಡ್ಡಿಯಲ್ಲೇ ಮೂತ್ರ ವಿಸರ್ಜನೆ – 5 ವರ್ಷದ ಮಗುವಿನ ಖಾಸಗಿ ಅಂಗವನ್ನೇ ಸುಟ್ಟ ಶಿಕ್ಷಕಿ !

ಕರಾವಳಿ, ಟಾಪ್ ಸುದ್ದಿಗಳು

ಕಾರ್ಕಳ : ಅನಾರೋಗ್ಯದಿಂದ ಬಳಲುತ್ತಿರುವ ಅವಿನಾಶ್ ಪೂಜಾರಿಗೆ “ವಿಠೋಬ ರುಕ್ಮಾಯಿ ಭಜನಾ ಮಂಡಳಿ ಹಿರ್ಗಾನ” ನೆರವು

⚠️ Contents are protected on this website.