ಬೆಳ್ತಂಗಡಿ : ಜೆಸಿಐ ವಲಯ 15 ರ ತರಬೇತಿ ವಿಭಾಗಕ್ಕೆ ಜೆಸಿಐ ಬೆಳ್ತಂಗಡಿಯ ಆಶಾಲತಾ ಪ್ರಶಾಂತ್ ಸಂಯೋಜಕರಾಗಿ ನಿಯೋಜನೆ

ಬೆಳ್ತಂಗಡಿ, ಡಿ. 16 : ವಿಟ್ಲದಲ್ಲಿ ಡಿ. 13 ರಂದು ನಡೆದ ಜೆಸಿಐ ಭಾರತದ ವಲಯ 15ರ ಪದಪ್ರಧಾನ ಸಮಾರಂಭದಲ್ಲಿ ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಇದರ ಈ ವರ್ಷದ ಅಧ್ಯಕ್ಷರಾದ ಜೇಸಿ ಆಶಾಲತಾ ಪ್ರಶಾಂತ್ ಇವರು 2026 ರ ವಲಯಾಧ್ಯಕ್ಷ ಇವರಿಂದ ಪ್ರಮಾಣಚನ ಸ್ವೀಕರಿಸಿದರು.

Advertisement

ಇವರು 2026 ನೇ ಸಾಲಿನ ವಲಯಾಡಳಿತ ಮಂಡಳಿಯ ತರಬೇತಿ ವಿಭಾಗದ ‘ಎಫೆಕ್ಟೀವ್ ಪಬ್ಲಿಕ್ ಸ್ಪೀಚ್, ಔಟ್ ಬಾಂಡಿಂಗ್ ಟ್ರೈನಿಂಗ್ ಪ್ರೋಗ್ರಾಂ, ಹಾಗೂ ಸ್ಪೀಚ್ ಕ್ರಾಫ್ಟ್’ ಇದರ ವಲಯ ಸಂಯೋಜಕರಾಗಿ ನಿಯೋಜನೆಗೊಂಡಿರುತ್ತಾರೆ. ಜೆಸಿಐ ಬೆಳ್ತಂಗಡಿಯ 48 ವರ್ಷ ಇತಿಹಾಸದಲ್ಲಿ ಪ್ರಥಮವಾಗಿ ಮಹಿಳಾ ಅಧ್ಯಕ್ಷರನ್ನು ಕಂಡ ಬೆಳ್ತಂಗಡಿ ಜೇಸಿ ಈ ವರ್ಷ ಜೇಸಿ ಆಶಾಲತಾ ಪ್ರಶಾಂತ್ ನಾಯಕತ್ವದಲ್ಲಿ ಜೇಸಿ ಸದಸ್ಯರಿಗೆ ಹಾಗೂ ಶಾಲಾ ಕಾಲೇಜು ಸಂಘ ಸಂಸ್ಥೆಗಳಿಗೆ ಹಲವಾರು ವಿಭಾಗದಲ್ಲಿ ತರಬೇತಿ ಆಯೋಜಿಸಿರುತ್ತಾರೆ. ಬಹಳಷ್ಟು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿದ್ದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್, ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವವದ ಮೂಲಕ ತಾಲೂಕಿನ ಯುವ ಪ್ರತಿಭೆಗಳಿಗೆ ವೇದಿಕೆ ಅವಕಾಶ ಹಾಗೂ ಸಾಧಕರಿಗೆ ಸಾಧನ ಶ್ರೀ ಪ್ರಶಸ್ತಿ ಮುಂತಾದ ಕಾರ್ಯಕ್ರಮ ನಡೆಸಿ ಯಶಸ್ವಿ ಅಧ್ಯಕ್ಷರಾಗಿ ಹೊರಹೊಮ್ಮಿದವರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಸುರತ್ಕಲ್ : ಸ್ನೇಹಿತರೊಂದಿಗೆ ವಾಲಿಬಾಲ್ ಆಡುತ್ತಿದ್ದಾಗ ಕುಸಿದು ಬಿದ್ದು ಬಾಲಕ ಸಾವು

ಟಾಪ್ ಸುದ್ದಿಗಳು, ತಾಲೂಕು, ಪುತ್ತೂರು

ಮಂಗಳೂರು :  ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ – ಕೊಚ್ಚಿಯಲ್ಲಿ ಅಡಗಿದ್ದ ಆರೋಪಿಯ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಪುತ್ತೂರು

ಪುತ್ತೂರು : ಆಕ್ಟಿವಾಗೆ ಢಿಕ್ಕಿ ಹೊಡೆದು ಅಂಗಡಿಗೆ ನುಗ್ಗಿದ ಲಾರಿ – ವಾಹನ, ಅಂಗಡಿಗೆ ಹಾನಿ

⚠️ Contents are protected on this website.