ಕಡಬ : ತಾಯಿ ಇಲ್ಲದೆ ಅಜ್ಜಿ ಮನೆಯಲ್ಲಿ ವಾಸವಿದ್ದ ಯುವತಿ ಮೇಲೆ ಮಾವನಿಂದಲೇ ಹಲ್ಲೆ, ಕೊಲೆ ಬೆದರಿಕೆ !

Advertisement

ಕಡಬ, ಮೇ 21 : ಅಜ್ಜಿಯ ಮನೆಯಲ್ಲಿ ವಾಸವಿದ್ದ ಯುವತಿಯ ಮೇಲೆ ಆಕೆಯ ಮಾವನೇ ಕುಡಿತದ ಮತ್ತಿನಲ್ಲಿ ಅವಾಚ್ಯ ಶಬ್ದಗಳಿಂದ ಬೈದು, ಹೊಟ್ಟೆಗೆ ಒದ್ದು ಕೊಲೆ ಬೆದರಿಕೆ ಹಾಕಿರುವ ಘಟನೆ ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಬಳ್ಳಿಕಜೆ ಎಂಬಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಮಾವ ಬಿಜು (A1) ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಸೋನ್ವಿ (22) ಎಂಬ ಯುವತಿಯ ತಾಯಿ ಮರಣ ಹೊಂದಿದ್ದು, ಆಕೆ ಬಳ್ಳಿಕಜೆಯಲ್ಲಿರುವ ತನ್ನ ಅಜ್ಜಿ ಮರಿಯಮ್ಮ ಅವರೊಂದಿಗೆ ವಾಸವಾಗಿದ್ದಾಳೆ. ಆರೋಪಿ ಮಾವ ಬಿಜು ಮೂಲತಃ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದವನಾಗಿದ್ದರೂ, ಕಳೆದ ಒಂದು ವರ್ಷದಿಂದ ಅಜ್ಜಿಯ ಮನೆಯಾದ ಬಳ್ಳಿಕಜೆಯಲ್ಲೇ ಉಳಿದುಕೊಂಡಿದ್ದನು.

Advertisement

ಈತ ಪ್ರತಿದಿನ ಅಮಲು ಪದಾರ್ಥ ಸೇವಿಸಿ ಬಂದು ಸೋನ್ವಿ ಹಾಗೂ ಆಕೆಯ ಅಜ್ಜಿಗೆ ಮಾನಸಿಕ ಹಾಗೂ ದೈಹಿಕ ಕಿರಿಕಿರಿ ಉಂಟುಮಾಡುತ್ತಿದ್ದ ಎನ್ನಲಾಗಿದೆ. ಈ ಹಿಂದೆ ಅಜ್ಜಿ ಕಡಬ ಪೊಲೀಸ್ ಠಾಣೆಗೆ ದೂರು ನೀಡಿ ಪೊಲೀಸರು ಬುದ್ದಿಮಾತು ಹೇಳಿದ್ದರೂ ಬಿಜು ತನ್ನ ವರ್ತನೆ ಬದಲಿಸಿಕೊಂಡಿರಲಿಲ್ಲ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ